ತುಂಗಾ ನಗರ ಪೊಲೀಸ್ ಸ್ಟೇಷನ್​ ರೌಡಿಶೀಟರ್​ ಬಚ್ಚನ್​ಗೆ ಶಾಕ್​ ! ಕೋರ್ಟ್​ ನಿಂದ ಶಿಕ್ಷೆ ! ಏನಿದು ಪ್ರಕರಣ?

Tunga Nagar Police Station Rowdy Sheeter Bachchan has been sentenced by Shimoga Court ತುಂಗಾ ನಗರ ಪೊಲೀಸ್ ಸ್ಟೇಷನ್​ ರೌಡಿಶೀಟರ್​ ಬಚ್ಚನ್​ಗೆ ಶಿವಮೊಗ್ಗ ಕೋರ್ಟ್​ ಶಿಕ್ಷೆ ನೀಡಿದೆ

ತುಂಗಾ ನಗರ ಪೊಲೀಸ್ ಸ್ಟೇಷನ್​  ರೌಡಿಶೀಟರ್​ ಬಚ್ಚನ್​ಗೆ ಶಾಕ್​ ! ಕೋರ್ಟ್​ ನಿಂದ ಶಿಕ್ಷೆ ! ಏನಿದು ಪ್ರಕರಣ?

KARNATAKA NEWS/ ONLINE / Malenadu today/ Nov 13, 2023 SHIVAMOGGA NEWS

Shivamogga |   ಜಮೀರ್ @ ಬಚ್ಚಾನಿಗೆ ಶಿವಮೊಗ್ಗ ಕೋರ್ಟ್​ 2 ವರ್ಷ ಶಿಕ್ಷೆ ವಿಧಿಸಿದೆ. ಈತನ ವಿರುದ್ಧ ದಾವಣಗೆರೆಯ ಮಾನ್ಯ 1ನೇ ಜೆಎಂಎಫ್.ಸಿ ನ್ಯಾಯಾಲಯವು ದಸ್ತಗಿರಿ ವಾರೆಂಟ್ ಅನ್ನು ಹೊರಡಿಸಿತ್ತು. ಈ ಸಂಬಂಧ  ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂಧಿಗಳಾದಪರಶುರಾಮಪ್ಪ ಹೆಚ್.ಸಿ ಮತ್ತು ಸತೀಶ್ ಹೆಚ್.ಸಿ ರವರುಗಳು ವಾರೆಂಟ್ ಜಾರಿಗಾಗಿ ಆರೋಪಿ ಜಮೀರ್ @ ಬಚ್ಚಾ @ ಬಚ್ಚನ್ ನ ಮನೆಯ ಬಳಿ ಬಂದಿದ್ದರು. 

READ : ಬಾಳೆಬೈಲ್​ ನಲ್ಲಿ ಬುಲೆಟ್ -ಕಾರು ಡಿಕ್ಕಿ! ಅರಣ್ಯ ಇಲಾಖೆ ಸಿಬ್ಬಂದಿ ಸಾವು! ಎಂತಹ ಘಟನೆ ಆಯ್ತು!?

ಆದರೆ ಬಚ್ಚಾ ಪೊಲೀಸ್ ಸಿಬ್ಬಂಧಿಗಳ ಮೇಲೆ ಹಲ್ಲೆ ಮಾಡಿ ಅವರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ತಳ್ಳಿ ಜೀವಬೆದರಿಕೆ ಹಾಕಿದ್ದ. ಈ ಹಿನ್ನೆಲೆ ತುಂಗಾನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 314/2016 ಕಲಂ 504, 506, 353, 308, 333 ಐಪಿಸಿ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ಬಚ್ಚನಾ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟ್​ ತೆರಯಲಾಗಿತ್ತು. ಜೊತೆಲೆಯಲ್ಲಿ ಈತನ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಒಟ್ಟು 22  ಪ್ರಕರಣಗಳು ದಾಖಲಾಗಿರುತ್ತವೆ. 

READ : ಮನೆಯಲ್ಲಿ ಮುಳ್ಳು ಹಂದಿ ಬೇಯುತ್ತಿದ್ದಾಗಲೇ ಬಂದ್ರು ಅರಣ್ಯ ಅಧಿಕಾರಿಗಳು! ಫುಲ್​ ಶಾಕ್!

ಇನ್ನೂ ಈ ಪ್ರಕರಣದಲ್ಲಿ ಅಂದಿನ ತನಿಖಾಧಿಕಾರಿಗಳಾದ  ಗಂಗಾಧರಪ್ಪ, ಪೊಲೀಸ್ ನಿರೀಕ್ಷಕರು, ಶಿವಮೊಗ್ಗ ಗ್ರಾಮಾಂತರ ವೃತ್ತ ರವರು  ಆರೋಪಿಯ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಈ ಕೇಸ್​ನ ಪರವಾಗಿ ಪರವಾಗಿ  ಶಾಂತರಾಜ್, ಸರ್ಕಾರಿ ಅಭಿಯೋಜಕರವರು, ವಾದ ಮಂಡಿಸಿದ್ದರು

READ : ತೋಟದಲ್ಲಿ ತಂತಿ ಬೇಲಿಗೆ ಸಿಕ್ಕ ಆನೆಮರಿ! ಮುದ್ದು ಕಂದನನ್ನ ಹೇಗೆ ಕಾಪಾಡಿದ್ವು ಗೊತ್ತಾ ಕಾಡಾನೆಗಳು!?

ಸದ್ಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ಮುಗಿದಿದ್ದು ತೀರ್ಪು ಹೊರಬಿದ್ದಿದೆ.  ಜಮೀರ್ @ ಬಚ್ಚಾ @ ಬಚ್ಚನ್, 26 ವರ್ಷ, ಟಿಪ್ಪುನಗರ,  ಶಿವಮೊಗ್ಗ ಈತನ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧಿಶರಾದ ಕೆ ಮಾನು ರವರು ದಿನಾಂಕಃ 10-11-2023 ರಂದು ಆರೋಪಿಗೆ 02 ವರ್ಷ ಸಾಧಾ ಕಾರಾಗೃಹ ಶಿಕ್ಷೆ ಮತ್ತು 20,000/-  ರೂ ದಂಡ, ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 2 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.