ತೋಟದಲ್ಲಿ ತಂತಿ ಬೇಲಿಗೆ ಸಿಕ್ಕ ಆನೆಮರಿ! ಮುದ್ದು ಕಂದನನ್ನ ಹೇಗೆ ಕಾಪಾಡಿದ್ವು ಗೊತ್ತಾ ಕಾಡಾನೆಗಳು!?

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಗುಂಪೊಂದು ತಮ್ಮ ಮರಿಯನ್ನ ರಕ್ಷಿಸಿದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ

ತೋಟದಲ್ಲಿ ತಂತಿ ಬೇಲಿಗೆ ಸಿಕ್ಕ ಆನೆಮರಿ! ಮುದ್ದು ಕಂದನನ್ನ ಹೇಗೆ ಕಾಪಾಡಿದ್ವು ಗೊತ್ತಾ ಕಾಡಾನೆಗಳು!?

KARNATAKA NEWS/ ONLINE / Malenadu today/ Nov 12, 2023 SHIVAMOGGA NEWS

Shivamogga |  ಕಾಡು ಜೀವಿಗಳಾದರೇನು ಅವುಗಳಿಗೂ ಜೀವ ಇದೆಯಲ್ಲವೇ,, ಜೀವ ಇದ್ದ ಮೇಲೆ ಇನ್ನೊಂದು ಜೀವಕ್ಕಾಗಿ ಮರುಗುವುದಿಲ್ಲವೇ? ಪ್ರಶ್ನೆಗೊಂದು ಉತ್ತರ ಸಿಗುವಂತಹ ಘಟನೆ ಚಿಕ್ಕಮಗಳೂರಲ್ಲಿ  ನಡೆದಿದೆ. 

ಸದ್ಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಪರೇಷನ್​ ಭುವನೇಶ್ವರಿ ಕಾರ್ಯಾಚರಣೆ ನಡೆಯುತ್ತಿದೆ. ಎಲ್ಲಂದರಲ್ಲಿ ಅಡ್ಡಾಡುತ್ತಿರುವ ಕಾಡಾನೆಗಳ ಗುಂಪೊಂದನ್ನ ಕಾಡಿಗೆ ಹಿಮ್ಮೆಟ್ಟಿಸಲಾಗುತ್ತಿದೆ. ಅಲ್ಲದೆ, ಈ ಗುಂಪಿನಿಂದ ಬೇರ್ಪಟ್ಟಿರುವ ಸಲಗವೊಂದನ್ನ ಹಿಡಿಯುವ ಪ್ರಯತ್ನ ನಡೆಯುತ್ತಿದೆ. 

ಇದರ ನಡುವೆ ಉಕ್ಕುಂದದ ಬಳಿ ಕಾಡಾನೆಗಳ ಗುಂಪು, ಜನರಿಂದ ದೂರ ಹೋಗುತ್ತಿರುವಾಗ, ಅವುಗಳ ಗುಂಪಿನಲ್ಲಿದ್ದ ಮರಿಯಾನೆಯೊಂದು ತಂತಿ ಬೇಲಿಗೆ ಸಿಕ್ಕಿಹಾಕಿಕೊಂಡು ಬಿಟ್ಟಿತ್ತು. ತೋಟದ ಕಲ್ಲು ಬೇಲಿಗೆ ಹಾಕಲಾಗಿದ್ದ ತಂತಿಯನ್ನ ದೊಡ್ಡಾನೆಗಳು ಹೇಗೋ ದಾಟಿಕೊಂಡು ಮುಂದಕ್ಕೆ ಹೋದರೆ, ಮರಿಯಾನೆ ಅದರ ನಡುವೆ ಸಿಲುಕಿ ಕೂಗಲು ಆರಂಭಿಸಿತ್ತು. 

READ : ಮತ್ತೆ ನಡೆಯಲಿದೆ ಶಿವಮೊಗ್ಗದ ಹುಣಸೋಡು ಸ್ಫೋಟದ ತನಿಖೆ? ಕಾರಣವೇನು ಗೊತ್ತಾ? JP EXCLUSIVE

ಮೊದಲೇ ಹೆದರಿದ್ದ ಕಾಡಾನೆಗಳು ಗುಂಪಿನ ಮರಿಯ ಕೂಗಿನಿಂದ ಇನ್ನಷ್ಟು ದಿಗಿಲುಕೊಂಡು ಕೂಗಲು ಆರಂಭಿಸಿದ್ವು ಏನೋ ಆಗೆ ಹೋಯ್ತು ಎಂದು ಕೊಂಡ ಕಾಡಾನೆಗಳ ಮರಿಯನ್ನ ಸುತ್ತುವರಿದು  ಅಕ್ಕಪಕ್ಕಕ್ಕೆ ದೃಷ್ಟಿ ಬೀರುತ್ತಾ ಹೊರಗಿನವರ ಅಪಾಯವಿಲ್ಲ ಎಂಬುದನ್ನ ಖಾತರಿ ಪಡಿಸಿಕೊಂಡವು. 

ಇದರ ನಡುವೆ ಹಿರಿಯಾನೆಯೊಂದು ಮರಿಯನ್ನ ಕಾಲಿನಿಂದ ತಳ್ಳಲು ಆರಂಭಿಸಿತು, ಅದರ ಮಗ್ಗುಲಲ್ಲೆ ಮತ್ತೊಂದು ಆನೆ ಸೊಂಡಿಲಿನಿಂದ ಮರಿಯಾನೆಯನ್ನ ಎತ್ತಲು ನೋಡಿತು, ಪಕ್ಕಕ್ಕೆ ಬಂದ ಇನ್ನೊಂದು ಆನೆ ಮರಿಯಾನೆಯ ಬೆನ್ನಿಗೆ ಆಧಾರ ನೀಡಿತು. 15-20 ನಿಮಿಷದಲ್ಲಿ ಮರಿಯಾನೆಯು ತಂತಿಯ ಬೇಲಿ ಉರುಳಿಂದ ಹೊರಬಂದಿತು ಎಂದರೆ ಸರಿಯಾಗದು. ಮರಿಯಾನೆಯನ್ನ ಗುಂಪಿನ ಆನೆಗಳು ತಂತಿ ಬೇಲಿಯಿಂದ ಬೇರ್ಪಡಿಸಿದವು. 

READ : ಸಂಸಾರಸ್ಥನ ಜೊತೆಗಿನ ಕುರುಡು ಪ್ರೀತಿಗೆ, ಅಪ್ರಾಪ್ತೆಯರ ಜೀವನದಲ್ಲಿ ಆಟವಾಡಿದ ನರ್ಸ್​! ಯಾರನ್ನೂ ನಂಬದಿರಿ ಹುಷಾರ್!

ಇದನ್ನೆಲ್ಲಾ ಕಣ್ಣಾರೆ ನೋಡುತ್ತಾ ನಿಂತಿದ್ದ ಮಂದಿ, ಕಾಡಿನ ಜೀವಿಗಳ ಈ ಹೋರಾಟ ಎಲ್ಲರಿಗೂ ಕಾಣಲಿ ಎಂದು ಮೊಬೈಲ್​ನಲ್ಲಿ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚುತ್ತಿದ್ರು..ಇನ್ನೂ ಇಷ್ಟೆಲ್ಲಾ ಆದ ಮೇಲೆ ಇನ್ನೊಂದು ವಿಶೇಷ ನಡೆಯಿತು. ಮರಿಯನ್ನ ಸಂಕಷ್ಟದಿಂದ ಪಾರು ಮಾಡಿದ ಆನೆಗಳು ದಣಿದಿದ್ದವೋ ಏನೋ! ಆದರೆ ದಣಿವಾರಿಸಿಕೊಳ್ಳಿ ಎಂದು ಕೇಳುವರು ಯಾರು? ಅದಕ್ಕೂ ಪರಿಹಾರ ಹುಡುಕಿದ ಮೂಖಪ್ರಾಣಿಗಳು, ಅಲ್ಲಿಯೇ ಕಾಣ ಸಿಕ್ಕ ಡ್ರಮ್​ನಲ್ಲಿ ನೀರಿದ್ಯಾ ನೋಡಿ, ಇದ್ದಷ್ಟು ನೀರನ್ನ ಕುಡಿದು ಮುಂದಕ್ಕೆ ಸಾಗಿದವು.. ಹೋಗುವ ದಾರಿಯಲ್ಲಿ ಅಡ್ಡಿಮಾಡದ ಮನುಷ್ಯನಿಗೆ ಥ್ಯಾಂಕ್ಸ್​ ಹೇಳಿದಂತಿತ್ತು ಅವುಗಳ ಕೂಗು!