ಭಾರತೀಪುರ ಟರ್ನಿಂಗ್​ ನಲ್ಲಿ ರಸ್ತೆಯಿಂದ ಇಳಿದು ಮನೆ ಮೇಲೆ ಬಿದ್ದ ಮಹೇಂದ್ರ ನೆಕ್ಸಾ ಕಾರು!

Mahindra Nexa car falls off road at Bharatipur turning

ಭಾರತೀಪುರ ಟರ್ನಿಂಗ್​ ನಲ್ಲಿ  ರಸ್ತೆಯಿಂದ ಇಳಿದು ಮನೆ ಮೇಲೆ ಬಿದ್ದ ಮಹೇಂದ್ರ ನೆಕ್ಸಾ ಕಾರು!
Mahindra Nexa car falls off road at Bharatipur turning

SHIVAMOGGA  |  Dec 23, 2023  |   ಮಲ್ನಾಡ್​ನಲ್ಲಿ ರೋಡ್​ ತಗ್ಗಿನಲ್ಲಿ ಮನೆಗಳು ಇರುವುದು ಸಹಜ ಹಾಗೇನೆ ವಾಹನಗಳು ರಸ್ತೆ ಬಿಟ್ಟು ಕೆಳಕ್ಕಿಳಿದು ಮನೆಗಳ ಮಹಡಿ ಮೇಲೆ ಹೋಗಿ ಲ್ಯಾಂಡ್ ಆಗುವುದು ಸಹಜ. ಸದ್ಯ ಅದೇ ರೀತಿಯ ಘಟನೆಯೊಂದು ತೀರ್ಥಹಳ್ಳಿಯಲ್ಲಿ ಸಂಭವಿಸಿದೆ. ಕಾರೊಂದು ಭಾರತೀಪುರ ಟರ್ನಿಂಗ್ (bharati pura turning )​ ನಲ್ಲಿ ರಸ್ತೆಯ ತಗ್ಗಿನಲ್ಲಿದ್ದ ಮನೆಯ ಮೇಲೆ ಹೋಗಿ ಬಿದ್ದಿದೆ.. 

READ : ಸ್ಟೇಷನ್​ ಲಿಮಿಟ್ಸ್​ ನಲ್ಲಿ ಡೆಕಾಯ್​ ಟೀಂ ಎಂಟ್ರಿ! ಅಧಿಕಾರಿಗಳಿಗೆ ಎಚ್ಚರಿಕೆಯ ಸೂಚನೆ ಕೊಟ್ಟ ಎಸ್​ಪಿ ಮಿಥುನ್ ಕುಮಾರ್! ಏನಿದು?

ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ.ಕಾರು ಮನೆಯ ಹಂಚಿನ ಮೇಲೆ ಬಿದ್ದು ಅಲ್ಲಿಂದ ಅಂಗಳದಲ್ಲಿ ಮಗುಚಿ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು ಅವರನ್ನ ತೀರ್ಥಹಳ್ಳಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ. 

ಮಹೇಂದ್ರ  ನೆಕ್ಸಾ 300  (Mahindra Nexa car)ಕಾರಿನಲ್ಲಿದ್ದವರು ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಹೊರಟಿದ್ದರು. ಟರ್ನಿಂಗ್​ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ತಗ್ಗಿಗಿಳಿದಿದೆ. ಇಲ್ಲಿನ ನಿವಾಸಿ ಲಕ್ಷ್ಮಣ್​ ಭಟ್ ಎಂಬವರ ಮನೆ ಮುಂಭಾಗಕ್ಕೆ ಹೋಗಿ ಡಿಕ್ಕಿ  ಹೊಡೆದ ಕಾರು ಅಲ್ಲಿಂದ ಮಗುಚಿ ಬಿದ್ದಿದೆ.