SHIVAMOGGA | Dec 21, 2023 | ಶಿವಮೊಗ್ಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸಂಬಂಧ ಪತ್ರಕರ್ತೆಯೊಬ್ಬರ ವಿರುದ್ಧ ಕೇಸ್ ದಾಖಲಾಗಿದೆ. ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ವಿರುದ್ಧ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ನಲ್ಲಿ ಎಎಸ್ಐ ಕೃಷ್ಣಮೂರ್ತಿಯವರು ನೀಡಿದ ದೂರಿನನ್ವಯ Act & Section: IPC 1860 (U/s-143,149,353) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
READ : ಭದ್ರಾವತಿ ವೈನ್ ಶಾಪ್ನಲ್ಲಿ ಆಟೋಚಾಲಕ ಕರಿಚಿಕ್ಕಿ ಮರ್ಡರ್ ಕೇಸ್! ಮೂವರ ಅರೆಸ್ಟ್! ಇನ್ನಿಬ್ಬರಿಗಾಗಿ ಹುಡುಕಾಟ
ವಿಜಯಲಕ್ಷ್ಮೀ ಶಿಬರೂರು
ತೀರ್ಥಹಳ್ಳಿ ರಂಜದಕಟ್ಟೆಯ ಸಮೀಪ ಮಾಳೂರು ಪೊಲೀಸ್ ಸ್ಟೇಷನ್ ಎಎಸ್ಐ ಹೆದ್ದಾರಿ ಗಸ್ತು ಕರ್ತವ್ಯ ನಡೆಸ್ತಿದ್ದರು. ಈ ವೇಳೇ VISIBLE OFFENCE ನಡಿಯಲ್ಲಿ ವಾಹನಗಳನ್ನ ತಡೆದು ಪರಿಶೀಲನೆ ನಡೆಸ್ತಿದ್ದರು. ಮದ್ಯಪಾನ ಮತ್ತಿತರೆ ಕಾನೂನು ಉಲ್ಲಂಘನೆ ಮಾಡಿದವರ ಬಗ್ಗೆ ಬೆಳಿಗ್ಗೆ 10-30 ಎಎಂ ಸಮಯದಲ್ಲಿ ಬಾಳೇಬೈಲು ನಲ್ಲಿ ಚೆಕ್ ಮಾಡುತ್ತಿದ್ದ ಸಂದರ್ಭದಲ್ಲಿ ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಮಾಡಲಾಗಿದೆ.
ಈ ಸಂಬಂಧ ಕಳೇದ ಎರಡು ದಿನಗಳಿಂದ ವಾಟ್ಸ್ಯಾಪ್ನಲ್ಲಿ ವಿಡಿಯೋವೊಂದು ಹರಿದಾಡುತ್ತಿತ್ತು. ಇದೀಗ ವಿಡಿಯೋದಲ್ಲಿ ಇರುವಂತೆ ಎಎಸ್ಐ ಕೃಷ್ಣಮೂರ್ತಿ ದೂರು ನೀಡಿದ್ದು, ಅದರಂತೆ ಪ್ರಕರಣ ಸಹ ದಾಖಲಾಗಿದೆ. ದೂರಿನಲ್ಲಿ ವಿಜಯಲಕ್ಷ್ಮೀ ಶಿಬರೂರು ಮತ್ತು ಅವರ ಕಡೆಯ ನಾಲೈದು ಜನರು ಗುಂಪು ಗೂಡಿಕೊಂಡು ಬಂದು ಸರ್ಕಾರಿ ಇಲಾಖಾ ವಾಹನಕ್ಕೆ ಅಡ್ಡಲಾಗಿ ನಿಂತು ವಾಹನ ತಪಾಸಣೆ ಮಾಡದಂತೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಸರ್ಕಾರದಿಂದ ನೀಡಿದ ರಶೀದಿ ಪುಸ್ತಕವನ್ನು ಕಸಿದುಕೊಂಡು ಅದರ ವಿಡಿಯೋಗಳನ್ನು ತೆಗೆದುಕೊಂಡು, ಎಎಸ್ಐರವರನ್ನು ಕರ್ತವ್ಯದಿಂದ ಹಿಮ್ಮೆಟ್ಟಿಸುವ ಸಲುವಾಗಿ ಸರ್ಕಾರಿ ಕೆಲಸ ನಿರ್ವಹಿಸದಂತೆ ಅಡ್ಡಿಪಡಿಸಿ. ಪೊಲೀಸರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಾ ಸಾರ್ವಜನಿಕರಿಗೆ ಪ್ರಚೋದನೆ ನೀಡುವ ರೀತಿಯಲ್ಲಿ ವರ್ತಿಸಿದ ಆರೋಪವನ್ನ ಮಾಡಲಾಗಿದೆ.