SHIVAMOGGA | Dec 21, 2023 | ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಬೊಮ್ಮನ ಕಟ್ಟೆ ಬಳಿ ಇರುವ ಭದ್ರಾ ವೈನ್ಸ್ ನಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ಭದ್ರಾವತಿ ಪೊಲೀಸರು ಇನ್ನಿಬ್ಬರಿಗಾಗಿ ಶೋಧ ಕಾರ್ಯಾಚರಣೆ ನಡೆಸ್ತಿದ್ದಾರೆ
ಮೂವರನ್ನ ಬಂಧಿಸಿರುವ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಸಹ ವಾಟ್ಸ್ಯಾಪ್ ಮಾಹಿತಿ ನೀಡಿದ್ದು, ಬೊಮ್ಮನಕಟ್ಟೆ ಗ್ರಾಮದ ಮುಬಾರಕ್, ಸತ್ಯಾನಂದ, ಕಲೀಲ್ ಬಂಧಿತರು ಎಂದು ತಿಳಿಸಿದ್ದಾರೆ. ಇನ್ನೂ ತತ್ಸಂಬಂಧ ಹಳೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇನ್ನಿಬ್ಬರಿಗಾಗಿ ಹುಡುಕಾಡುತ್ತಿದ್ದಾರೆ.
ಕೊಲೆಯಾದ ಕರಿಚಿಕ್ಕಿ ಆಟೋಚಾಲಕನಾಗಿದ್ದ ನಿನ್ನೆ ಮಧ್ಯಾಹ್ನ ವೈನ್ಸ್ ಶಾಪ್ನಲ್ಲಿ ಕುಳಿತಿದ್ದ ಈ ವೇಳೆ ಅಲ್ಲಿಯೇ ದಾಳಿ ಇಟ್ಟ ಆರೋಪಿಗಳು ಆತನನ್ನು ಹತ್ಯೆ ಮಾಡಿದ್ದಾರೆ. ಈ ಸಂಬಂಧ ಇನ್ನಿಬ್ಬರು ಆರೋಪಿಗಳು ಪೊಲೀಸರಿಗೆ ಸೆರೆಯಾಗಬೇಕಿದೆ ಎಂದು ಮೂಲಗಳು ತಿಳಿಸಿವೆ.
