BREAKING NEWS : ಏರ್​ಪೋರ್ಟ್​ ಉದ್ಘಾಟನೆ ಸಿದ್ಧತೆ ನಡುವೆ ತೀರ್ಥಹಳ್ಳಿಯಲ್ಲಿ ಬೆಂಗಳೂರು ಪೊಲೀಸರು ನಡೆಸಿದ್ರಾ ಕಾರ್ಯಾಚರಣೆ!ಮುಡುಬಾದಲ್ಲಿ ಪೊಲೀಸರನ್ನ ಅಡ್ಡಗಟ್ಟಿದ್ದೇಕೆ ಜನ?

BREAKING NEWS: Bengaluru police conducted an operation in Theerthahalli amidst preparations for airport inauguration! Why did people stop the police in Muduba?

BREAKING NEWS : ಏರ್​ಪೋರ್ಟ್​ ಉದ್ಘಾಟನೆ ಸಿದ್ಧತೆ ನಡುವೆ ತೀರ್ಥಹಳ್ಳಿಯಲ್ಲಿ ಬೆಂಗಳೂರು ಪೊಲೀಸರು ನಡೆಸಿದ್ರಾ ಕಾರ್ಯಾಚರಣೆ!ಮುಡುಬಾದಲ್ಲಿ ಪೊಲೀಸರನ್ನ ಅಡ್ಡಗಟ್ಟಿದ್ದೇಕೆ ಜನ?
BREAKING NEWS : ಏರ್​ಪೋರ್ಟ್​ ಉದ್ಘಾಟನೆ ಸಿದ್ಧತೆ ನಡುವೆ ತೀರ್ಥಹಳ್ಳಿಯಲ್ಲಿ ಬೆಂಗಳೂರು ಪೊಲೀಸರು ನಡೆಸಿದ್ರಾ ಕಾರ್ಯಾಚರಣೆ!ಮುಡುಬಾದಲ್ಲಿ ಪೊಲೀಸರನ್ನ ಅಡ್ಡಗಟ್ಟಿದ್ದೇಕೆ ಜನ?

 MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗ ಪೊಲೀಸರು ಏರ್​ಪೋರ್ಟ್ ಉದ್ಘಾಟನೆಯ ಸಿದ್ಧತೆಯಲ್ಲಿದ್ಧಾರೆ. ಪೂರ್ವವಲಯ ಐಜಿ ಸೇರಿದಂತೆ, ಶಿವಮೊಗ್ಗ ಎಸ್​ಪಿ ಹಾಗೂ ವಿವಿಧ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದ ಭದ್ರತಾ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ಧಾರೆ. 

ಇದರ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಮುಡುಬಾ ಚೆಕ್​ಪೋಸ್ಟ್​ ಬಳಿಯಲ್ಲಿ ಜನರೇ ಖಾಸಗಿ ವಾಹನದಲ್ಲಿ ಬಂದಿದ್ದರು ಎನ್ನಲಾದ ಪೊಲಿಸರನ್ನ ಅಡ್ಡಗಟ್ಟಿದ ಘಟನೆಯೊಂದು ನಡೆದಿದೆ. ತೀರ್ಥಹಳ್ಳಿ ಬಸವಾನಿಯಲ್ಲಿ ಇವತ್ತು ಬೆಳಗ್ಗೆ, ಖಾಸಗಿ ವಾಹನದಲ್ಲಿ ಬಂದಿದ್ದ ಕೆಲವರು, ಅಲ್ಲಿನ ನಿವಾಸಿತಯೊಬ್ಬನನ್ನ ಕರೆದುಕೊಂಡು ಹೊರಟಿದ್ದರು. ಈ ಬಗ್ಗೆ ಸ್ಥಳೀಯರಿಗೆ ಅನುಮಾನ ಮೂಡಿ ಮಾಳೂರು ಪೊಲೀಸ್​ ಸ್ಟೇಷನ್​ಗೆ ಮಾಹಿತಿ ನೀಡಿದ್ದಾರೆ. ಮಾಳೂರು ಪೊಲೀಸರು ಸಹ ಈ ಬಗ್ಗೆ ತಿಳಿದುಕೊಳ್ಳಲು, ಸ್ಟೇಷನ್​ ಲಿಮಿಟ್​ನಲ್ಲಿ ಹಾದು ಹೋಗುವ ದಾರಿಯಲ್ಲಿ ನಾಕಾ ಬಂದಿ ಮಾಡಿದ್ದಾರೆ. ಇದರ ನಡುವೆ ವ್ಯಕ್ತಿಯೊಬ್ಬನನ್ನ ಅಪಹರಿಸಲಾಗುತ್ತಿದೆ ಎಂಬ ಗಾಳಿ ಸುದ್ದಿ ಎಲ್ಲೆಡೆ ಹರಡಿ,  ಜನರ ಖುದ್ದು ರೋಡಿಗೆ ಇಳಿದು ಖಾಸಗಿ ವಾಹನದ ಹುಡುಕಾಟದಲ್ಲಿದ್ದರು. ಇನ್ನೊಂದು ಕಡೆ ನಿವಾಸಿಯನ್ನು ಲಿಫ್ಟ್ ಮಾಡಿದ್ದ ಖಾಸಗಿ ಕಾರು, ಮುಡುಬಾ ಚೆಕ್​ ಪೋಸ್ಟ್ ಬಳಿ ಬಂದಿದೆ. ಇದನ್ನ ನೋಡುತ್ತಲೇ ಜನರೇ ಕಾರಿನ ಮೇಲೆ ಮುಗಿಬಿದ್ದಿದ್ದಾರೆ. 

ಕಾರಿನಲ್ಲಿ ಇದ್ದವರು ಯಾರು? 

ಇನ್ನೂ ಜನರೇ ಕಾರಿನಲ್ಲಿದ್ದವರನ್ನು ವಿಚಾರಿಸಿದ್ದಾರೆ. ಅಷ್ಟರಲ್ಲಿ ಸ್ಥಳಕ್ಕೆ ಮಾಳೂರು ಪೊಲೀಸರು ಸಹ ದೌಡಾಯಿಸಿದ್ದಾರೆ. ವಾಹನದಲ್ಲಿದ್ದವರನ್ನು ಪೊಲೀಸರು ವಿಚಾರಿಸಿದ ಸಂದರ್ಭದಲ್ಲಿ, ಕಾರಿನಲ್ಲಿದ್ದವರು ಪೊಲೀಸ್ ಅಧಿಕಾರಿ ಹಾಗು ಸಿಬ್ಬಂದಿ ಎಂಬುದು ಗೊತ್ತಾಗಿದೆ. ಅವರ ಗುರುತು ಚೀಟಿ ನೋಡಿದ ಮಾಳೂರು ಪೊಲೀಸರು ಮುಂದಕ್ಕೆ ತೆರಳಲು ಅನುವು ಮಾಡಿಕೊಟ್ಟಿದ್ದಾರೆ. ಈ ಮಧ್ಯೆ ಜನರು ಸೇರಿದ್ದರಿಂದ ಗಾಬರಿಗೊಂಡ ಕಾರಿನಲ್ಲಿದ್ದ ಪೊಲೀಸರು ಅಲ್ಲಿಂದ ವೇಗವಾಗಿ ತೆರಳಿದ್ದಾರೆ. 

ಬಸವಾನಿಯಲ್ಲಿ ವಶಕ್ಕೆ ಪಡೆದಿದ್ದ ವ್ಯಕ್ತಿ ಬೆಂಗಳೂರಿನ ಪೊಲೀಸರಿಗೆ ಕ್ರೈಂ ಕೇಸ್​ವೊಂದರಲ್ಲಿ ಅಗತ್ಯವಿರುವ ವ್ಯಕ್ತಿಯೆಂದು ತಿಳಿದುಬಂದಿದ್ದು, ಶಿವಮೊಗ್ಗ ಪೊಲೀಸರಿಗೆ ಈ ಸಂಬಂಧ ಮಾಹಿತಿ ನೀಡದೇ ಕಾರ್ಯಾಚರಣೆ ನಡೆಸಿದ್ದು, ಸ್ಥಳೀಯರ ಗೊಂದಲಕ್ಕೆ ಕಾರಣವಾಗಿತ್ತು.