KARNATAKA NEWS/ ONLINE / Malenadu today/ Jun 23, 2023 SHIVAMOGGA NEWS
ತೀರ್ಥಹಳ್ಳಿ/ ತಾಲ್ಲೂಕಿನಲ್ಲಿ ಕಳೆದೊಂದು ವಾರದಿಂದ ಅಶ್ಲೀಲ ವಿಚಾರದ ಸುದ್ದಿಗಳು ತಾರಕಕ್ಕೇರಿದೆ. ಒಂದು ಕಡೆ, ಹುಡುಗಿಯರನ್ನ ಅಶ್ಲೀಲವಾಗಿ ಚಿತ್ರೀಕರಿಸಿ, ಅದರ ವಿಡಿಯೋ ತೋರಿಸಿ ಹಣ ಸುಲಿಗೆ ಮಾಡಿದ ಪ್ರಕರಣ ಸಂಬಂಧ ಓರ್ವನನ್ನ ಬಂಧಿಸಲಾಗಿದೆ. ಈ ವಿಚಾರದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ದೊಡ್ಡದಾಗಿ ಸುದ್ದಿಯಾಗಿತ್ತು. ಇದಕ್ಕೆ ಕಾರಣ, ನಡೆದ ಪ್ರಕರಣಕ್ಕೆ ಪೂರಕವಾಗಿ ಒಂದಷ್ಟು ರಾಜಕಾರಣವೂ ಸೇರಿ, ವಿಷಯ ವಿಪರೀತ ಚರ್ಚೆಗೆ ಗ್ರಾಸವಾಗುತ್ತಿದೆ.
ಇದರ ನಡುವೆ ತೀರ್ಥಹಳ್ಳಿ ಪೊಲೀಸರು ಪೇಟೆಯಲ್ಲಿಯೇ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ರೇಡ್ ನಡೆಸಿ, ಆರೋಪಿಗಳನ್ನು ಬಂಧಿಸಿದ್ಧಾರೆ. ಸಾಂತ್ವನ ಕೇಂದ್ರ ಅಧಿಕಾರಿಯು ಸೇರಿದಂತೆ ಪೊಲೀಸರ ತಂಡ ಮಾಹಿತಿ ಆಧರಿಸಿ ದಾಳಿ ನಡೆಸಿದೆ. ಈ ವೇಳೆ ವಾಸದ ಮನೆಯಲ್ಲಿದ್ದ ಮೂವರು ಮಹಿಳೆಯರನ್ನು ರಕ್ಷಿಸಲಾಗಿದೆ. ಈ ಸಂಬಂಧ ಪೊಲೀಸರೇ ನೀಡಿರುವ ಪ್ರಕಟಣೆಯ ಪ್ರಕಾರ, ಇಬ್ಬರನ್ನ ಬಂಧಿಸಲಾಗಿದೆ
ಪ್ರಶಾಂತ್ ಕೆ.ಎಸ್. 33 ವರ್ಷ, ಜೆ.ಪಿ. ನಗರ, ಕಮ್ಮರಡಿ ಗ್ರಾಮ, ಆಗುಂಬೆ, ತೀರ್ಥಹಳ್ಳಿ ಮತ್ತು
ಮಂಜುನಾಥ. ಎಂ, 37 ವರ್ಷ, ಮೇಲಿನ ಕುರುವಳ್ಳಿ, ತೀರ್ಥಹಳ್ಳಿ ಬಂಧಿತರು..
ಪೇಟೆಯಲ್ಲಿಯೇ ವೇಶ್ಯಾವಾಟಿಕೆ! ಮೂವರು ಮಹಿಳೆಯರ ರಕ್ಷಣೆ ! ಇಬ್ಬರ ಅರೆಸ್ಟ್ ! ಪೊಲೀಸ್ ಕಾರ್ಯಾಚರಣೆಯ ಇನ್ನಷ್ಟು ಡಿಟೇಲ್ಸ್ ಇಲ್ಲಿದೆ ಓದಿ
ಪ್ರಕರಣದಲ್ಲಿ ನಡೆಯುತ್ತಿದ್ದ ಕರಾಳ ದಂಧೆಯ ಬಗ್ಗೆ ಕೆಲವೊಂದು ಸೀಕ್ರೆಟ್ ಮಾಹಿತಿಗಳು ಲಭ್ಯವಾಗಿದೆ. ಅಂದಹಾಗೆ, ತೀರ್ಥಹಳ್ಳಿ ಪೇಟೆಯ ಆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬುದು ಅಲ್ಲಿನ ಸ್ಥಳೀಯರಿಗೂ ಗೊತ್ತಿರಲಿಲ್ಲ. ಏಕೆಂದರೆ ಮಾರ್ಡನ್ ಜಗತ್ತಿನ ಟೆಕ್ನಾಲಜಿಯನ್ನ ವಿಶೇಷವಾಗಿ ಅಳವಡಿಸಿಕೊಂಡಿರುವ ಮಾಂಸದ ದಂಧೆ ಈಗ ಒಂದು ಮನೆಯಲ್ಲಿ ಒಂದು ನಿರ್ದಿಷ್ಟ ಜಾಗದಲ್ಲಿ ಕದ್ದು ಮುಚ್ಚಿ ನಡೆಯುತ್ತಿಲ್ಲ. ಬದಲಾಗಿ ವಾಟ್ಸ್ಯಾಪ್ ಮೂಲಕ ಬಿಂದಾಸ್ ಆಗಿ ನಡೆಯುತ್ತಿದೆ.
ತೀರ್ಥಹಳ್ಳಿಯಲ್ಲಿಯು ಸಹ ಇದೇ ಮಾದರಿಯಲ್ಲಿ ಆ ದಂಧೆ ನಡೆಯುತ್ತಿತ್ತುಎನ್ನುತ್ತಿದೆ ಪೊಲೀಸ್ ಮೂಲಗಳು. ಹೊರ ರಾಜ್ಯಗಳಿಂದಲೂ ಇಲ್ಲಿಗೆ ಯುವತಿಯರನ್ನ ಕರೆಸಿಕೊಳ್ಳಲಾಗುತ್ತಿತ್ತಂತೆ. ಡಿಮ್ಯಾಂಡ್ ತಕ್ಕಂತೆ ಯುವತಿಯರನ್ನ ಕರೆಸಿಕೊಳ್ಳುತ್ತಿದ್ದ ತಂಡ, ಅವರನ್ನ ಬಳಸಿಕೊಂಡು ಪುನಃ ಅವರುಗಳ ಊರಿಗೆ ವಾಪಸ್ ಕಳುಹಿಸುತ್ತಿದ್ದರಂತೆ. ಹೀಗೆ ಕರೆಸಿಕೊಳ್ಳುವಾಗಲೂ ವಾಟ್ಸ್ಯಾಪ್ ಮೂಲಕ ಕಾಂಟಾಕ್ಟ್ ಮಾಡುತ್ತಿದ್ದ ಆರೋಪಿಗಳು, ಅದೇ ಹೊತ್ತಿನಲ್ಲಿ ಯುವತಿಯರ ಫೋಟೋಗಳನ್ನ ತಮ್ಮ ಪರಿಚಯದ ಗ್ರಾಹಕರಿಗೆ ಕಳುಹಿಸುತ್ತಿದ್ದರಂತೆ. ಗ್ರಾಹಕರು ಇಷ್ಟಾರ್ಥದ ಮೇರೆಗೆ ನಿರ್ದಿಷ್ಟ ಜಾಗ ಹಾಗೂ ಯುವತಿಯನ್ನು ಫಿಕ್ಸ್ ಮಾಡುತ್ತಿದ್ದ ಆರೋಪಿಗಳು, ನಿರಾಂತಕವಾಗಿ ದಂಧೆ ನಡೆಸ್ತಿದ್ದರು ಎನ್ನಲಾಗಿದೆ. ಇನ್ನೂ ಒಂದು ಮನೆಯಲ್ಲಿ ಎರಡು ದಿನ ಕಾಲ ನಡೆಯುತ್ತಿದ್ದ ದಂಧೆ ಆನಂತರ ಇನ್ನೊಂದು ಮನೆ , ಇನ್ನೊಂದು ಜಾಗಕ್ಕೆ ಶಿಫ್ಟ್ ಆಗುತ್ತಿತ್ತು. ಹಾಗಾಗಿ ಇಲ್ಲಿ ಯಾರಿಗೂ ಅನುಮಾನ ಬರಲು ಸಾದ್ಯವಿರಲಿಲ್ಲ. ಸದ್ಯ ತೀರ್ಥಹಳ್ಳಿ ಪೊಲೀಸರು ಸ್ಥಳೀಯರು ನೀಡಿದ ಮಾಹಿತಿಯನ್ನೇ ಆಧರಿಸಿ, ದಂಧೆಗೆ ಕಡಿವಾಣ ಹಾಕಿದ್ಧಾರೆ. ಈ ನಿಟ್ಟಿನಲ್ಲಿ ಪೊಲೀಸರ ಹೆಜ್ಜೆಗಳು ಇನ್ನಷ್ಟು ದೂರ ಸಾಗಬೇಕಿದೆ
ತೀರ್ಥಹಳ್ಳಿ ಹೆದ್ದಾರಿಯಲ್ಲಿ ಉರುಳಿ ಬಿದ್ದ ಕರೆಂಟ್ ಕಂಬ! ವಾಹನ ಸವಾರರೇ ಹುಷಾರ್! ಮೆಸ್ಕಾಂ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ
ತೀರ್ಥಹಳ್ಳಿ ತಾಲ್ಲೂಕಿನ ಗಬಡಿ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಕರೆಂಟ್ ಕಂಬವೊಂದು ಉರುಳಿ ಬಿದ್ದಿದೆ. ಆದರೆ ಇದುವರೆಗೂ ಅದನ್ನು ತೆರುವುಗೊಳಿಸಲು ಮೆಸ್ಕಾಂ ಮುಂದಾಗಿಲ್ಲ. ಹಾಗಾಗಿ ಈ ದಾರಿಯಲ್ಲಿ ಓಡಾಡುವ ವಾಹನಗಳು ಆಕ್ಸಿಡೆಂಟ್ ಅಪಾಯ ಎದುರಾಗಿದೆ.ಈ ಬಗ್ಗೆ ಸ್ಥಳೀಯರು ದೂರು ಹೇಳಿದ್ದು, ನಿನ್ನೆ ಬಿದ್ದ ಕಂಬವನ್ನು ಇದುವರೆಗೂ ಏಕೆ ತೆಗೆದಿಲ್ಲ ಎಂದು ಪ್ರಶ್ನಿಸಿದ್ದಾರೆ. ಯಾರದ್ದಾದರೂ ಜೀವಕ್ಕೆ ಹಾನಿಯಾದರೇ ನೋಡುವವರು ಯಾರು ಎಂದು ಸ್ಥಳಿಯರು ಆಕ್ರೋಶ ಹೊರಹಾಕಿದ್ಧಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ದುಡ್ಡನ್ನ ಲಪಟಾಯಿಸಿ ಎಸ್ಕೇಪ್ ಆದ ಸಿಬ್ಬಂದಿ! ಏನಿದು ಪ್ರಕರಣ! ನಡೆದಿದ್ದೆಲ್ಲಿ
ಮರಬಿದ್ದು ಉರುಳಿದ ಕಂಬ
ಗಬಡಿಯ ಬಳಿಯಲ್ಲಿ ಮರವೊಂದು ಬಿದ್ದ ಪರಿಣಾಮ, ಅಲ್ಲಿಯೇ ಇದ್ದ ಕರೆಂಟ್ ಕಂಬ ಕೂಡ, ಮರದ ಕೊಂಬೆ ಬಡಿದು ಮುರಿದು ಬಿದ್ದಿದೆ. ಅದೃಷ್ಟಕ್ಕೆ ಕಂಬ ಬೀಳುತ್ತಲೇ ಕರೆಂಟ್ ಲೈನ್ ಕಟ್ ಆಗಿ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಹೀಗಾಗಿ ಯಾವುದೇ ಅಪಾಯ ಸಂಭವಿಸಲಿಲ್ಲ. ಇದುವರೆಗೂ ಕಂಬ ತೆರವುಗೊಳಿಸಿ, ದುರಸ್ಥಿ ಮಾಡದೇ ಮೆಸ್ಕಾಂ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಲಾಗಿದೆ.
ಫಿಕ್ಸ್ ಆಗ್ತಿದ್ಯಾ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ! ಶಿವಣ್ಣ ದಂಪತಿಯ ಪ್ರತಿಕ್ರಿಯೆ ಏನು ಗೊತ್ತಾ?
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಖಾಡದಲ್ಲಿ ಸಂಸದ ಬಿ.ವೈ.ರಾಘವೇಂದ್ರರವರ ಎದುರಾಳಿ ಯಾರು? ಈ ಪ್ರಶ್ನೆಗೆ ಕಾಂಗ್ರೆಸ್ ಉತ್ತರ ಹುಡುಕುತ್ತಿದೆ. ಒಂದು ಕಡೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಮ್ಮ ಸಹೋದರಿ ಗೀತಾ ಶಿವರಾಜ್ ಕುಮಾರ್ ರನ್ನ ಅಭ್ಯರ್ಥಿಯನ್ನಾಗಿಸಲು ಪ್ರಯತ್ನ ನಡೆಸ್ತಿರುವುದು ರಾಜಕೀಯ ಅಖಾಡದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ನಿಟ್ಟಿನಲ್ಲಿ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್, ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ರವರನ್ನ ಭೇಟಿಯಾಗಿದ್ದಾರೆ.
ಶಿರಾಳಕೊಪ್ಪದ ಸಾಮಿಲ್ನಲ್ಲಿದ್ದ ಒಂಟೆಯನ್ನು ರಕ್ಷಿಸಿದ ದೆಹಲಿಯಿಂದ ಬಂದ ಇಮೇಲ್! 3-4 ರಾಜ್ಯ ದಾಟಿ ಬಂದ ಕಥೆ!
ಈ ಎರಡು ಭೇಟಿಗಳು ಕೇವಲ ಕ್ಯಾಶ್ಯುವಲ್ ವಿಸಿಟ್ ಎಂದು ಹೇಳುತ್ತಿದ್ದರೂ ಸಹ ದಂಪತಿಗಳ ಭೇಟಿ ಹಾಗೂ ಮಾತುಕತೆ ಕುತೂಹಲ ಕೆರಳಿಸುತ್ತಿದೆ. ಇದರ ನಡುವೆ ಡಿಕೆ ಶಿವಕುಮಾರ್ ರವರ ಭೇಟಿಯ ಬಳಿಕ ಮಾತನಾಡಿದ ಗೀತಾ ಶಿವರಾಜ್ ಕುಮಾರ್ರಿಗೆ ಮಾದ್ಯಮದ ಕಡೆಯಿಂದ ಇದು ಲೋಕಸಭಾ ಚುನಾವಣೆಯ ಸಿದ್ದತೆಯೇ ಎಂಬ ಪ್ರಶ್ನೆ ಎದುರಾಗಿತ್ತು. ಪ್ರಶ್ನೆಗೆ ಉತ್ತರಿಸಿದ ಗೀತಾ ಶಿವರಾಜ್ ಕುಮಾರ್ ಸಿದ್ದತೆ ಅಂತೇನೂ ಇಲ್ಲ. ಆದರೆ ಈ ಬಗ್ಗೆ ತಮ್ಮ ತಮ್ಮ ಹಾಗೂ ಅವರು(ಶಿವರಾಜ್ ಕುಮಾರ್) ಹಾಗೂ ಪಕ್ಷ ಪ್ರಾಪರ್ ತೀರ್ಮಾನವನ್ನು ಕೈಗೊಳ್ಳುತ್ತದೆ ಎಂದು ಹೇಳಿದ್ರು. ಇದೇ ಮೊದಲ ಸಲ ಇಂತಹದ್ದೊಂದು ಪ್ರತಿಕ್ರಿಯೆಯನ್ನ ಗೀತಾ ಶಿವರಾಜ್ ಕುಮಾರ್, ನೀಡಿದ್ಧಾರೆ. ಶಿವಮೊಗ್ಗದಲ್ಲಿ ಸಂಸದ ಬಿ.ವೈ.ರಾಘವೇಂದ್ರರವರು ಅದಾಗಲೇ ತಮ್ಮ ತಂದೆಯ ನೆರಳಿನಿಂದ ಹೊರಬಂದು ತಮ್ಮದೆ ಆದ ವೇದಿಕೆಯಲ್ಲಿ ಅಭಿವೃದ್ಧಿ ಕೆಲಸಗಳ ಉದ್ಘಾಟನೆಯ ದಿನಾಂಕವನ್ನು ಸರತಿ ಸಾಲಿನಲ್ಲಿ ಘೋಷಿಸುತ್ತಿದ್ಧಾರೆ. ಅವರ ಎದುರು ಕಾಂಗ್ರೆಸ್ ಪಕ್ಷ ಗೀತಾ ಶಿವರಾಜ್ ಕುಮಾರ್ರನ್ನ ಕಣಕ್ಕಿಳಿಸುತ್ತಾ? ಅಥವಾ ಸ್ವತಃ ಶಿವರಾಜ್ ಕುಮಾರ್ರವರನ್ನೆ ರಾಜಕಾರಣಕ್ಕೆ ಕರೆತಂದು ಸ್ಪರ್ದೆಗೆ ಶ್ರೀಕಾರ ಹಾಕಿಸುತ್ತಾ? ಅಥವಾ ಸದ್ಯ ಚರ್ಚೆಯಲ್ಲಿರುವಂತೆ ಕಿಮ್ಮನೆ ರತ್ನಾಕರ್ರವರ ಹೆಸರು ಮುನ್ನೆಲೆಗೆ ಬರುತ್ತಾ? ಇದೆಲ್ಲದರ ಆಚೆಗೆ ಅಚ್ಚರಿ ಅಭ್ಯರ್ಥಿ ಆಯ್ಕೆಯಾಗುತ್ತಾರಾ? ಅಭಯಹಸ್ತದಲ್ಲಿನ ಭವಿಷ್ಯದಲ್ಲಿ ಉತ್ತರ ಸಿಗಲಿದೆ.
ಪೇಟೆಯಲ್ಲಿಯೇ ವೇಶ್ಯಾವಾಟಿಕೆ! ಮೂವರು ಮಹಿಳೆಯರ ರಕ್ಷಣೆ ! ಇಬ್ಬರ ಅರೆಸ್ಟ್ ! ಪೊಲೀಸ್ ಕಾರ್ಯಾಚರಣೆಯ ಇನ್ನಷ್ಟು ಡಿಟೇಲ್ಸ್ ಇಲ್ಲಿದೆ ಓದಿ
