SHIVAMOGGA | THIRTHAHALLI | Dec 5, 2023 | ಮಲೆನಾಡು ಶಿವಮೊಗ್ಗದ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾದ ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಗೆ ದಿನಾಂಕ ನಿಕ್ಕಿಯಾಗಿದೆ. ಇಲ್ಲಿನ ಪ್ರಸಿದ್ದ ರಾಮೇಶ್ವರ ದೇವರ ಜಾತ್ರೆಯ ದಿನಾಂಕಗಳನ್ನು ಪ್ರಕಟಿಸಲಾಗಿದ್ದು, ಉತ್ಸವ ಈ ವರ್ಷ ಇನ್ನಷ್ಟು ವಿಶೇಷವಾಗಿ ನಡೆಯಲಿದೆ.
ತೀರ್ಥಹಳ್ಳಿ ಜಾತ್ರೆಗೆ ಜನರ ಜಾತ್ರೆಯೇ ಸೇರುತ್ತದೆ. ತಾಲ್ಲೂಕು ಮಂದಿಯಷ್ಟೆ ಅಲ್ಲದೆ ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳಿಂದ ತುಂಗಾ ತೀರದಲ್ಲಿ ನಡೆವ ಉತ್ಸವ ನೋಡಲು ದೌಡಾಯಿಸುತ್ತಾರೆ. ಪುರಾಣ ಪ್ರಸಿದ್ದವಾಗಿ ನಡೆದುಕೊಂಡು ಬಂದಿರುವ ಜಾತ್ರೆಯು ಈ ವರ್ಷ ಜನವರಿ.11, 12, 13ರಂದು ನಡೆಯಲಿದೆ.
READ : ಮೂರು ದಿನ ಶಿವಮೊಗ್ಗ-ಭದ್ರಾವತಿ ನಡುವೆ ಸಂಚಾರ ಬಂದ್! ಡಿಸಿ ಆದೇಶ! ಯಾಕೆ? ಪರ್ಯಾಯ ಮಾರ್ಗ ಯಾವುದು? ಡಿಟೇಲ್ಸ್ ಓದಿ!
ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆ /Thirthahalli Yellamavasya Jatre
ತೀರ್ಥಹಳ್ಳಿಯ ಪುರಾಣ ಪ್ರಸಿದ್ದ ರಾಮೇಶ್ವರ ದೇವರ ಜಾತ್ರೆಯನ್ನು ಜನವರಿ 11, 12,,13ರಂದು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಜ 11 ಕ್ಕೆ ತೀರ್ಥಸ್ನಾನ, 12 ಕ್ಕೆ ಬ್ರಹ್ಮರಥೋತ್ಸವ 13 ಕ್ಕೆ ಅದ್ದೂರಿ ತೆಪ್ಪೋತ್ಸವ ನೆಡೆಸಲು ನಿರ್ಧರಿಸಲಾಗಿದೆ. ಈ ಸಂಬಂಧ ತೆಪ್ಪೋತ್ಸವ ಸಮಿತಿ ತೀರ್ಮಾನ ಕೈಗೊಂಡಿದ್ದು, ಭಕ್ತರಿಗೆ ಸ್ವಾಗತ ಕೋರಿದೆ.
