ತೀರ್ಥಹಳ್ಳಿ ಪೇಟೆಯಲ್ಲಿ ಯಮಹಾ ಬೈಕ್​ನಲ್ಲಿ ರೇಸಿಗಿಳಿದವರಿಗೆ ಪೊಲೀಸರ ಶಾಕ್! ಕೋರ್ಟ್​ ಹಾಕಿತು ದಂಡ

Malenadu Today

KARNATAKA NEWS/ ONLINE / Malenadu today/ Aug 3, 2023 SHIVAMOGGA NEWS 

ತೀರ್ಥಹಳ್ಳಿ ಪೇಟೆಯಲ್ಲಿ ಬೈಕ್​  ರೇಸಿಂಗ್ ನಡೆಸಿದ ಇಬ್ಬರಿಗೆ ತೀರ್ಥಹಳ್ಳಿ ಕೋರ್ಟ್  5 ಸಾವಿರ ರೂಪಾಯಿ ದಂಡ ವಿಧಿಸಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಕೋರ್ಟ್​ಗೆ  ಚಾರ್ಜ್​ಶೀಟ್​ ಸಲ್ಲಿಸಿದ್ರು. 

ಏನಿದ್ರು ಪ್ರಕರಣ?

ದಿನಾಂಕಃ 01-08-2023  ರಂದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಬೈಲಿನ ಹೆಗ್ಡೆ ಪೆಟ್ರೋಲ್ ಬಂಕ್ ನ ಹತ್ತಿರ  02 ಯಮಹಾ ಬೈಕ್ ಗಳಲ್ಲಿ ಸವಾರರಿಬ್ಬರು ರೇಸಿಂಗ್ ಮಾಡುತ್ತಿದ್ದರು. ಇದನ್ನ ಇನ್ನೊಂದು ಬೈಕ್​ನ ಹಿಂಬದಿಯಲ್ಲಿ ಹಿಮ್ಮುಖವಾಗಿ ಕುಳಿತಿದ್ದ ಸವಾರ ವಿಡಿಯೋ ಮಾಡುತ್ತಿದ್ದ. ಇದನ್ನ ಗಮನಿಸಿದ ಪೊಲೀಸ್ ಉಪಾಧೀಕ್ಷಕ , ಗಜಾನನ  ವಾಮನ ಸುತಾರರವರು, ಬೈಕ್​ಗಳನ್ನ ತಡೆದು ನಿಲ್ಲಿಸಿ ಕೇಸ್ ದಾಖಲಿಸಿದ್ದರು. ಈ ಕೇಸ್​ಗೆ ಸಂಬಂಧಿಸಿದಂತೆ,  ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್.ಸಿ ನ್ಯಾಯಾಲಯ   ಬೈಕ್ ಸವಾರರುಗಳಾದ 1) ಸೌರವ್, 21 ವರ್ಷ, ಸೀಬಿನ ಕೆರೆ ತೀರ್ಥಹಳ್ಳಿ ಮತ್ತು  2) ಶಂಕರ್, 21 ವರ್ಷ, ತೀರ್ಥಹಳ್ಳಿ ರವರುಗಳಿಗೆ ತಲಾ 5,000/- ರೂ ದಂಡ ವಿಧಿಸಿದ್ದಾರೆ. 

ಸೊರಬದ ಚಂದ್ರಗುತ್ತಿ ರೇಣುಕಾಂಬ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನ!?

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಚಂದ್ರಗುತ್ತಿಯಲ್ಲಿರುವ  ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಾಲಯದಲ್ಲಿ(Chandragutti Renukamba Temple)  ಕಳ್ಳತನಕ್ಕೆ ಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹುಣ್ಣಿಮೆ ಹಿನ್ನೆಲೆಯಲ್ಲಿ ಭಕ್ತರ ದಂಡೆ ಹರಿದುಬಂದಿತ್ತು. ಇದರ ಬೆನ್ನಲ್ಲೆ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಶಂಕೆ ಎದುರಾಗಿದೆ. .ದೇವಾಲಯ ಹಾಗೂ ಗರ್ಭಗುಡಿಯ ಬಾಗಿಲನ್ನು ಮುರಿದಿರುವ ದುಷ್ಕರ್ಮಿಗಳು ಮೂರ್ತಿಯನ್ನ ಕೆಳಕ್ಕೆ ಬಿಸಾಡಿದ್ದಾರೆ. ಆದರೆ ದೇಗುಳದ ಹುಂಡಿಗಳು ಭದ್ರವಾಗಿದೆ. ಇನ್ನೂ ಘಟನೆ ಬೆನ್ನಲ್ಲೆ ದೇವಾಲಯದ ಬಳಿ ಜಮಾಯಿಸಿದ ಸ್ಥಳೀಯರು ದೇಗುಲಕ್ಕೆ ಸೂಕ್ತ ಭದ್ರತೆ ಇಲ್ಲ. ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಆಗ್ರಹಿಸಿದ್ರು. ಘಟನೆ ಬೆನ್ನಲ್ಲೆ ತಹಶೀಲ್ದಾರ್ ಹುಸೇನ್ ಸರಕಾವತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

ಮಹಿಳೆಯ ಕೈ ಹಿಡಿದು ಎಳೆದಾಡಿದ್ದಕ್ಕೆ ಕೋರ್ಟ್​ ಕೊಟ್ಟ ಶಿಕ್ಷೆ ಏನು ಗೊತ್ತಾ?

ಮಹಿಳೆಯೊಬ್ಬರ ಕೈ ಹಿಡಿದು ಎಳೆದಾಡಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಕೋರ್ಟ್​ ಆರೋಪಿಗೆ 2 ವರ್ಷ ಆರು ತಿಂಗಳು ಸಜೆ ನೀಡಿದೆ. 

ಏನಿದು ಪ್ರಕರಣ?

ಶಿವಮೊಗ್ಗ ನಗರದ ಎಪಿಎಂಸಿಯಲ್ಲಿ ಸ್ವಚ್ಛತಾ ಕರ್ಮಿಯಾಗಿ ಕೆಲಸ ಮಾಡುತ್ತಿದ್ದ,  33 ವರ್ಷದ ಮಹಿಳೆಯೊಬ್ಬರ ಕೈ ಹಿಡಿದು ಎಳದಾಡಿದ ಘಟನೆ ಸಂಬಂಧ  ದಿನಾಂಕಃ 04-04-2019 ರಂದು ಬೆಳಗ್ಗೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಚಂದ್ರಪ್ಪ ಎಂಬವನ ವಿರುದ್ಧ ದಾಖಲಾದ ದೂರಿನ ಜೊತೆಗೆ ಅವರ ಮಗ ಜಾತಿ ನಿಂದನೆ ಮಾಡಿದ ಆರೋಪವೂ ಕೇಳಿಬಂದಿತ್ತು. ಈ ಸಂಬಂಧ ಠಾಣೆಯಲ್ಲಿಐಪಿಸಿ  354(B), 504, 506 ಸಹಿತ 34 ಐಪಿಸಿ ಮತ್ತು  3(1)(s), 3(1)(w)(i)(ii), 3(2)(va) The SC & ST (PA) Ac  ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಇದರ ತನಿಖೆಯನ್ನ ಕೈಗೊಂಡು, ಅಂದಿನ ಡಿವೈಎಸ್​ಪಿ ಉಮೇಶ್​ ಈಶ್ವರ್ ನಾಯ್ಕ್​ ಶಿವಮೊಗ್ಗ  2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದ್ದರು. ಪ್ರಕರಣ ಸಂಬಂಧ  ಸರ್ಕಾರಿ ಅಭಿಯೋಜಕಿ ಪುಷ್ಪಾ  ವಾದ ಮಂಡಿಸಿದ್ದರು.  ಸದ್ಯ ಈ  ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಧೀಶರಾದ  ಬಿ.ಆರ್ ಪಲ್ಲವಿ ರವರು ದಿನಾಂಕಃ- 02-08-2023  ರಂದು ಆರೋಪಿ ಚಂದ್ರಪ್ಪರಿಗೆ  02 ವರ್ಷ 06 ತಿಂಗಳು ವರ್ಷ ಸಾಧಾ ಕಾರಾವಾಸ ಶಿಕ್ಷೆ ಮತ್ತು 30,000/- ರೂ ದಂಡ, ದಂಡವನ್ನು ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿಯಾಗಿ 05 ತಿಂಗಳು ಸಾದಾ ಕಾರವಾಸ ಶಿಕ್ಷೆ ವಿಧಿಸಿ ಆದೇಶ ನೀಡಿರುತ್ತಾರೆ.

ಇನ್ನಷ್ಟು ಸುದ್ದಿಗಳು 

Malenadu Today

 ​ 

 

 

Share This Article