NPS ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮಿಸ್ಸಿಂಗ್​ ಕೇಸ್​! ಪ್ರಕರಣದ ಬಗ್ಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್​.ಷಡಾಕ್ಷರಿ ಹೇಳಿದ್ದೇನು?

Nps Employees' Union Taluk President Missing Case! What did C S Shadakshari, president of the state government employees' association, say about the case? NPS ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮಿಸ್ಸಿಂಗ್​ ಕೇಸ್​! ಪ್ರಕರಣದ ಬಗ್ಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್​.ಷಡಾಕ್ಷರಿ ಹೇಳಿದ್ದೇನು?

NPS ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮಿಸ್ಸಿಂಗ್​ ಕೇಸ್​! ಪ್ರಕರಣದ ಬಗ್ಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್​.ಷಡಾಕ್ಷರಿ ಹೇಳಿದ್ದೇನು?

KARNATAKA NEWS/ ONLINE / Malenadu today/ Jul 19, 2023 SHIVAMOGGA NEWS

ಶಿವಮೊಗ್ಗ/ ತಾಲ್ಲೂಕು ಘಟಕದ NPS ನೌಕರರ ಸಂಘದ ಅಧ್ಯಕ್ಷ ಪ್ರಭಾಕರ್ ಎಸ್​​ , ವಾಟ್ಸ್ಯಾಪ್​ ಗ್ರೂಪ್​ವೊಂದರಲ್ಲಿ ಡೆತ್​ ನೋಟ್ ಮಾದರಿಯಲ್ಲಿ ​ ಮೆಸೇಜ್​ ಮಾಡಿ ಆನಂತರ ಕಾಣೆಯಾಗಿದ್ದಾರೆ. ಅವರು ಕಳುಹಿಸಿರುವ ಮೆಸೇಜ್​ನಲ್ಲಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಾಕ್ಷರಿ ಸೇರಿದಂತೆ ಹಲವರ ಹೆಸರುಗಳನ್ನ ಉಲ್ಲೇಖ ಮಾಡಲಾಗಿದೆ. ಬದುಕಿಗೆ ವಿದಾಯ ಹೇಳುವುದಾಗಿ ಸಂದೇಶ ರವಾನಿಸಿದ ನಂತರ ಅವರ ಮೊಬೈಲ್ ಸ್ವಿಚ್​ ಆಫ್ ಆಗಿದೆ.  ಇನ್ನೂ ಇದೇ ವಿಚಾರದ ಬಗ್ಗೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿ ಮಾತನಾಡಿದ್ದಾರೆ. ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಪ್ರಭಾಕರ್​ರವರು ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂಬುದು ತಮಗೆ ಗೊತ್ತಿಲ್ಲ ಎಂದಿದ್ದಾರೆ.  

ಹುದ್ದೆ ಹಾಗೂ ವರ್ಗಾವಣೆ ವಿಚಾರ

ಪ್ರಭಾಕರ್​​​ರವರು ಟೀಚರ್ ಆಗಿದ್ದವರು. ಶಿಕ್ಷಕ ವೃತ್ತಿಯಲ್ಲಿದ್ದ ಅವರನ್ನು, ನಿಯಾಮವಳಿ ಪ್ರಕಾರ ಎಸ್​ಡಿಎ ಮಾಡಬಹುದಾಗಿತ್ತು. ಆದರೆ ಈ ಹಿಂದೆ ಸರ್ಕಾರ ಅವರನ್ನು ಎಫ್​ಡಿಎ ಆಗಿ ವೃತ್ತಿಯಲ್ಲಿ ಬದಲಾವಣೆ  ಮಾಡಿತ್ತು.  ತದನಂತರ, ಈ ವಿಚಾರದಲ್ಲಿ ಸರ್ಕಾರವೇ ತನ್ನ ನಿರ್ಧಾರವನ್ನು ಬದಲಿಸಿತ್ತು. ಅಲ್ಲದೆ ಪ್ರಭಾಕರ್​ರವರ ಹುದ್ದೆಯಲ್ಲಿ ಬದಲಾವಣೆ ಮಾಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಭಾಕರ್​ ಕೋರ್ಟ್ ಮೆಟ್ಟಿಲೇರಿದ್ದರು ಎಂದು ತಿಳಿಸಿದ್ದಾರೆ. 

21-01-2022 ಶಿಕ್ಷಣ ಇಲಾಖೆಯಿಂದ ಅನಾರೋಗ್ಯದ ಕಾರಣಕ್ಕಾಗಿ, ಪ್ರಭಾಕರ್​ ರವರ ಕೇಡರ್ ಬದಲಾವಣೆ ಮಾಡಿ ಶಿಕ್ಷಣ ಇಲಾಖೆಯಲ್ಲಿಯೇ ಎಫ್​ ಡಿಎ ಹುದ್ದೆಗೆ ನಿಯುಕ್ತಿಗೊಳಿಸಿ ಆದೇಶ ಮಾಡಿತ್ತು. ಅದರಂತೆ, ಪ್ರಭಾಕರ್ ರವರು 2-02-2022 ರಂದು ಹೊನ್ನಾಳಿಯಲ್ಲಿ ರಿಪೋರ್ಟ್ ಮಾಡಿಕೊಂಡಿದ್ದರು.ತದನಂತರ, 16-02-2023 ಕ್ಕೆ ಸರ್ಕಾರದ ಮತ್ತೊಂದು ಆದೇಶ ಮಾಡಿತ್ತು. ಆದೇಶದಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಬದಲಾಗಿ, ಶಿಕ್ಷಕ ಹುದ್ದೆಗೆ ಸರಿಸಮಾನವಾದ ದ್ವಿತಿಯ ದರ್ಜೆ ಸಹಾಯಕ ಹುದ್ದೆಗೆ ನಿಯುಕ್ತಿಗೊಳಿಸಿ ಆದೇಶ ನೀಡಿತ್ತು. ವೃಂದ ಬದಲಾವಣೆಯ ನಿಯಮದಲ್ಲಿ ತಪ್ಪಾಗಿದ್ದನ್ನು ಸರ್ಕಾರ ಸರಿಪಡಿಸಿಕೊಂಡಿತ್ತು. ಅಲ್ಲದೆ ಪ್ರಭಾಕರ್​ ರವರನ್ನು ಹಿರಿಯೂರಿಗೆ ವರ್ಗಾವಣೆ ಮಾಡಿತ್ತು. ಈ ಮಧ್ಯೆ ಸರ್ಕಾರಿ ನೌಕರರ ಸಂಘದಿಂದ ಶಿವಮೊಗ್ಗ ಕಚೇರಿಗೆ ವರ್ಗಾವಣೆ ಮಾಡುವಂತೆ ಪ್ರಭಾಕರ್​ರವರು ಕೋರಿದ್ದರಿಂದ ಅವರ ಪರವಾಗಿ ಪತ್ರ ನೀಡಲಾಗಿತ್ತು ಎಂದು ಸಿಎಸ್​ ಷಡಾಕ್ಷರಿಯವರು ತಿಳಿಸಿದ್ದಾರೆ. 

ಪ್ರಭಾಕರ್​​ರವರಿಗೆ ಏಳು ತಿಂಗಳಿನಿಂದ ಸಂಬಳವಾಗಿಲ್ಲ ಎಂಬ ವಿಚಾರವೂ ನಮ್ಮ ಗಮನಕ್ಕೆ ಬಂದಿಲ್ಲ. ಹಾಗೊಂದು ವೇಳೆ, ವೇತನ ಆಗದಿರುವ ಬಗ್ಗೆ ಮಾಹಿತಿಯಿದ್ದರೇ ಪರಿಶೀಲಿಸುತ್ತಿದ್ದೆವು ಎಂದಿರುವ ಷಡಾಕ್ಷರಿಯವರು, ತಮಗೆ ಸಂಬಂಧವಿಲ್ಲದಿರುವ ವಿಚಾರದಲ್ಲಿ ತಮ್ಮ ಹೆಸರು ಏಕೆ ಬರೆದಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ. ಸಮಸ್ಯೆ ಹೇಳಿಕೊಂಡು ಬಂದರೆ, ಅದನ್ನು ಪರಿಹರಿಸುವ ಕೆಲಸ ಮಾಡುತ್ತೇವೆ ಎಂದಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್​ ಷಡಾಕ್ಷರಿ, ಈ ವಿಚಾರ ತಿಳಿಯುತ್ತಲೇ ವಿಧಾನಸೌಧ ಪೊಲೀಸ್ ಸ್ಟೇಷನ್​ನಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣದ ಸಂಬಂಧ ತನಿಖೆ ಮಾಡಿ ಎಂದು ಮನವಿ ಮಾಡಿದ್ದೇವೆ ಎಂದು ಮಲೆನಾಡು ಟುಡೆ ತಂಡಕ್ಕೆ ತಿಳಿಸಿದ್ದಾರೆ. 

Whatsapp ನಲ್ಲಿ ಡೆತ್ ನೋಟ್​ ಕಳುಹಿಸಿ NPS ನೌಕರರ ಸಂಘದ ಶಿವಮೊಗ್ಗ ತಾಲ್ಲೂಕು ಘಟಕದ ಅಧ್ಯಕ್ಷ MISSING

ಶಿವಮೊಗ್ಗ ನಗರದ ಐಬಿ ಸರ್ಕಲ್​ ಬಳಿ ರಾತ್ರಿ ಭೀಕರ ಅಪಘಾತ! ಡಿವೈಡರ್​ಗೆ ಕಾರು ಡಿಕ್ಕಿ

ಮಲ್ನಾಡ್​ನ ಕಾಡು ಮನೆಯ ಸಮಸ್ಯೆಗಳ ಬಗ್ಗೆ ಬೆಂಗಳೂರಿನಲ್ಲಿ ಬಿಗಿ ಚರ್ಚೆ! ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಏನೇಲ್ಲಾ ತೀರ್ಮಾನವಾಯ್ತು ಗೊತ್ತಾ?

ತೀರ್ಥಹಳ್ಳಿ ರಾಷ್ಟ್ರೀಯ ಹೆದ್ಧಾರಿ 169 ನಲ್ಲಿ ಭೀಕರ ಅಪಘಾತ! ನಿಂತಿದ್ದ ಕ್ಯಾಂಟರ್​ಗೆ ಒಮಿನಿ ಡಿಕ್ಕಿ

ಜಸ್ಟ್ ಅನುಮಾನದಿಂದ ಸಿಕ್ಕಿಬಿದ್ದ ದರೋಡೆ ಕೇಸ್​ನಲ್ಲಿ ಬೇಕಾಗಿದ್ದ ಆರೋಪಿ! ದೊಡ್ಡಪೇಟೆ ಪಿಸಿ ಕೆಲಸಕ್ಕೆ ವ್ಯಕ್ತವಾಗ್ತಿದೆ ಶ್ಲಾಘನೆ! ಏನಿದು ಕೇಸ್​?