ಶಿವಮೊಗ್ಗ ಜಂಬೂ ಸವಾರಿ ಸಿದ್ದವಾದ ಸಕ್ರೆಬೈಲ್ ಆನೆ ಬಿಡಾರದ ಆನೆ | ಆರತಿ ಎತ್ತಿ ಆನೆಗಳಿಗೆ ಆಮಂತ್ರಣ

Members of the Corporation, MLAs, who went to Sakrebile Elephant Camp in Shimoga, offered pooja to the Dussehra elephants.ಶಿವಮೊಗ್ಗ ಸಕ್ರೆಬೈಲ್ ಆನೆ ಬಿಡಾರಕ್ಕೆ ತೆರಳಿದ ಪಾಲಿಕೆ ಸದಸ್ಯರು, ಶಾಸಕರು, ದಸರಾ ಆನೆಗಳಿಗೆ ಪೂಜೆ ಸಲ್ಲಿಸಿದ್ರು

ಶಿವಮೊಗ್ಗ ಜಂಬೂ ಸವಾರಿ ಸಿದ್ದವಾದ ಸಕ್ರೆಬೈಲ್ ಆನೆ ಬಿಡಾರದ ಆನೆ |  ಆರತಿ ಎತ್ತಿ ಆನೆಗಳಿಗೆ ಆಮಂತ್ರಣ



KARNATAKA NEWS/ ONLINE / Malenadu today/ Oct 17, 2023 SHIVAMOGGA NEWS



ಶಿವಮೊಗ್ಗ ದಸರಾದ ವಿಜಯ ದಶಮಿ ಮೆರವಣಿಗೆಯಲ್ಲಿ ಚಾಮುಂಡೇಶ್ವರಿ ದೇವಿಯ ಅಂಬಾರಿ ಹೊರುವ ಸಕ್ರೆಬೈಲು ಆನೆ ಬಿಡಾರದ ಆನೆಗಳಾದ ಸಾಗರ, ನೇತ್ರಾವತಿ ಮತ್ತು ಹೇಮಾವತಿಗೆ ಇಂದು ಪಾಲಿಕೆ ಮೇಯರ್ ಶಿವಕುಮಾರ್ ನೇತೃತ್ವದಲ್ಲಿ ಆನೆ ಬಿಡಾರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಗಿದೆ. 

ದಸರಾ ಉತ್ಸವ ಸಮಿತಿಯ ಅಧಿಕಾರಿಗಳು, ಪಾಲಿಕೆ ಸದಸ್ಯರು, ಮತ್ತು ಶಾಸಕ ಎಸ್.ಎಸ್. ಚನ್ನಬಸಪ್ಪನವರು ಆನೆಬಿಡಾರದಲ್ಲಿ ಆನೆಗಳಿಗೆ ಬಾಳೆಹಣ್ಣು, ಕಬ್ಬು ಹಾಗೂ ಸಿಹಿ ತಿನ್ನಿಸಿ ಅಲಂಕಾರ ಮಾಡಿ ಪುಷ್ಪಾರ್ಚನೆ ಮಾಡಿ ಆರತಿ ಬೆಳಗಿ ಪೂಜೆ ಸಲ್ಲಿಸಿದರು.

ಮಹಿಳಾ ಸದಸ್ಯರು ಎಲ್ಲಾ ಆನೆಗಳಿಗೆ ಅರಿಶಿಣ ಕುಂಕುಮ ಹಚ್ಚಿ ಪುಷ್ಪನಮನ ಸಲ್ಲಿಸಿದರು.ಈ ಮೂಲಕ ಅಧಿಕೃತವಾಗಿ ಮೆರವಣಿಗೆಗೆ ಪಾಲಿಕೆ ವತಿಯಿಂದ ಆನೆಗಳಿಗೆ ಮತ್ತು ಕಾವಾಡಿಗರಿಗೆ ಹಾಗೂ ಅರಣ್ಯ ಇಲಾಖೆಗೆ ಆಮಂತ್ರಣ ನೀಡಲಾಯ್ತು. 

ಉಪ ಮೇಯರ್ ಲಕ್ಷ್ಮಿ ಶಂಕರ ನಾಯಕ್, ಜ್ಞಾನೇಶ್ವರ್, ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಪಟಿಗಾರ್, ವೈದ್ಯರಾದ ಡಾ. ಏನಯ್‌, ಆರ್‌ಎಫ್‌ಓ ವಿನಯ್ ಹಾಗೂ ಪಾಲಿಕೆ ಉತ್ಸವ ಸಮಿತಿಯ ಅಧ್ಯಕ್ಷ ಯು.ಹೆಚ್.ವಿಶ್ವನಾಥ್ ಹಾಗೂ ಸದಸ್ಯರಾದ ಮಂಜುನಾಥ್, ಸುರ್ವಾ ಶಂಕರ್, ಸುನೀತಾ ಅಣ್ಣಪ್ಪ, ಕಲ್ಪನಾ ರಾವು, ಭಾನುವುತಿ ವಿನೋದ್‌ ರೇಟ್, ಇ ವಿಶ್ವಾಸ್, ಯಮುನಾ ರಂಗೇಗೌಡ, ರೇಖಾ ರಂಗನಾಥ್, ಪ್ರಭು, ಆರತಿ ಆ.ಮಾ, ಪ್ರಕಾಶ್‌ ಸೇರಿದಂತೆ ಪಾಲಿಕೆ ಅಧಿ ಕಾರಿಗಳು ಉಪಸ್ಥಿತರಿದ್ದರು.




ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ