Shivamogga Traffic Police | ಶಿವಮೊಗ್ಗದಲ್ಲಿಯು ಶುರುವಾಯ್ತು ಬೆಂಗಳೂರು, ಹುಬ್ಬಳ್ಳಿ ಕ್ರೇಜ್! 10 ಸಾವಿರ ಫೈನ್​ಗೆ ವಿಡಿಯೋ ವೈರಲ್​

Shivamogga Traffic Police | Bengaluru, Hubballi craze begins in Shivamogga Video goes viral of Rs 10,000 fine

Shivamogga Feb 12, 2024 |  ಶಿವಮೊಗ್ಗ ಟ್ರಾಫಿಕ್ ಪೊಲೀಸರು ಸಹ ಇದೀಗ ಬೆಂಗಳೂರು ಹುಬ್ಬಳ್ಳಿ ಟ್ರಾಫಿಕ್ ಪೊಲೀಸರ ಹಾಗೆ ಸಂಚಾರಿ ನಿಯಮದ ಬಗ್ಗೆ ಟ್ರೋಲ್ ಮಾದರಿಯ ವಿಡಿಯೋಗಳನ್ನು ಹರಿಬಿಡಲು ಮುಂದಾಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಶಿವಮೊಗ್ಗ ನಗರದ ರಸ್ತೆಯೊಂದರಲ್ಲಿ ವೀಲ್ಹೀಂಗ್​ ಮಾಡಿದ ವಿಡಿಯೋದಕ್ಕೆ ಫೈನ್ ವಿಧಿಸಿದ ದೃಶ್ಯವನ್ನು ಶಿವಮೊಗ್ಗ ಸಂಚಾರಿ ಪೊಲೀಸರು ಹಂಚಿಕೊಂಡಿದ್ದಾರೆ. 

ಶಿವಮೊಗ್ಗ ಟ್ರಾಫಿಕ್ ಪೊಲೀಸರ ವಿಡಿಯೋ ವೈರಲ್ ಆಗುತ್ತಿದ್ದು, ಮಾಧ್ಯಮಗಳಿಗೆ ರವಾನೆಯಾಗಿರುವ ವಿಡಿಯೋದಲ್ಲಿ ಮೊದಲು ಯುವಕನೊಬ್ಬ ಬೈಲ್ ವಿಲ್ಹೀಂಗ್ ಮಾಡುತ್ತಿರುವ ದೃಶ್ಯ ರೆಕಾರ್ಡ್​ ಆಗಿದೆ. ಸಿನಿಮಾ ಮ್ಯೂಸಿಕ್​ನೊಂದಿಗೆ ರೆಕಾರ್ಡ್​ ಆಗಿರುವ ವಿಡಿಯೋ ಮೊದಲು ಮತ್ತು ನಂತರ ಎಂಬ ಎರಡು ಭಾಗ ಹೊಂದಿದೆ. ಎರಡನೇ ಭಾಗದಲ್ಲಿ ಪೊಲೀಸರು ಬೈಕ್​ ಹಾಗೂ ಯುವಕನನ್ನ ಸ್ಟೇಷನ್​ಗೆ ಕರೆಸಿ ದಂಡ ಹಾಕಿರುವ ಮಾಹಿತಿ ನೀಡುವ ದೃಶ್ಯಗಳಿವೆ.

ಏನಿದು ಪ್ರಕರಣ

ಶಿವಮೊಗ್ಗ ನಗರದಲ್ಲಿ ಬೈಕ್ ವೀಲಿಂಗ್ ಮಾಡುತ್ತಿದ್ದ  ವೀಡಿಯೋವನ್ನು ಯುವಕನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದ. ಇದನ್ನ ಶಿವಮೊಗ್ಗ ಪಶ್ಚಿಮ  ಸಂಚಾರಿ ಪೊಲೀಸರು ಗಮನಿಸಿದ್ದಾರೆ., ಈ ವೀಡಿಯೋ ಆಧರಿಸಿ  ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ರವರು ನೋಟಿಸ್ ನೀಡಿದ್ದು,  ಮಾನ್ಯ ನ್ಯಾಯಾಲಯವು ದಿನಾಂಕ.12.02.24 ರಂದು ವೀಲಿಂಗ್ ಮಾಡುತ್ತಿದ್ದಂತಹ ಬೈಕ್ ಸವಾರನಿಗೆ 10,000 ದಂಡವನ್ನು ವಿಧಿಸಿದೆ.