ಅರಣ್ಯ ಇಲಾಖೆ ದಾಳಿ! ಬೆಲೆಬಾಳುವ ಮಾಲಿನ ಸಮೇತ ಸಿಕ್ಕಿಬಿದ್ದ ಇಬ್ಬರು ಆರೋಪಿಗಳು! ಮೂವರು ಎಸ್ಕೇಪ್

Shimoga Forest Department attacked the team that was transporting sago treesಶಿವಮೊಗ್ಗ ಅರಣ್ಯ ಇಲಾಖೆ, ಸಾಗುವಾನಿ ಮರಗಳನ್ನು ಸಾಗಿಸ್ತಿದ್ದ ತಂಡದ ಮೇಲೆ ದಾಳಿ ನಡೆಸಿದ್ದಾರೆ

ಅರಣ್ಯ ಇಲಾಖೆ ದಾಳಿ! ಬೆಲೆಬಾಳುವ ಮಾಲಿನ ಸಮೇತ ಸಿಕ್ಕಿಬಿದ್ದ ಇಬ್ಬರು ಆರೋಪಿಗಳು! ಮೂವರು ಎಸ್ಕೇಪ್

KARNATAKA NEWS/ ONLINE / Malenadu today/ Sep 18, 2023 SHIVAMOGGA NEWS

ಸಾಗುವಾನಿ ಮರಗಳನ್ನು ಕಡಿದು ಸಾಗಿಸ್ತಿದ್ದ ಟೀಂವೊಂದನ್ನ ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆಯನ್ನು ಸಹ ನೀಡಲಾಗಿದೆ. 

ಶಿವಮೊಗ್ಗದ ಹಾಯ್​ಹೊಳೆ ವ್ಯಾಪ್ತಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಇಬ್ಬರು ಆರೋಪಿಗಳನ್ನ ಬಂಧಿಸಿದೆ.ಪ್ರಕರಣಕ್ಕೆ ಸಂಬಂಧಿಸಿದ ಮೂವರು ಪರಾರಿಯಾಗಿದ್ದಾರೆ. ಬಂಧಿತರಿಂದ  12 ಸಾಗುವಾನಿ ಮರ, ಎರಡು ಮೊಬೈಲ್, ಒಂದು ಮಹೇಂದ್ರ ಬುಲೇರೋ, ಬಜಾಜ್ ಪ್ಯಾಸೆಂಜರ್ ಆಟೋ ವಶಕ್ಕೆ ಪಡೆದಿದ್ದಾರೆ.

ಸಾಗುವಾನಿ ಮರಗಳನ್ನು ಕಡಿದು ಸಾಗಿಸ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಎದುರಾಗಿದ್ದಾರೆ. ಹಾಯಿಹೊಳೆ ಭಾಗದಲ್ಲಿ ಆರೋಪಿಗಳನ್ನು ನೋಡುತ್ತಲೆ ಅರಣ್ಯ ಇಲಾಖೆ ಸಿಬ್ಬಂದಿ ಅವರನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ವಿಷ್ಣು , ಪಳನಿ, ತಿರುಪತಿ ಎಂಬವರು ಎಸ್ಕೇಪ್ ಆಗಿದ್ದು ಶರತ್ ಹಾಗೂ ಮಂಜುನಾಥ್​ ಎಂಬವರು ಸಿಕ್ಕಿಬಿದ್ದಿದ್ದಾರೆ.  

ಡಿಆರ್‌ಎಫ್‌ಒ ಚನ್ನಬಸಪ್ಪ ಸಣ್ಣಗೌಡ್ರ, ಸಿಬ್ಬಂದಿಗಳಾದ ಪ್ರಮೋದ್ ಕುಮಾರ್, ಮಂಜುನಾಥ್, ಪ್ರಸನ್ನಕುಮಾರ್, ಪಲ್ಲವಿ, ಗಸ್ತು ಅರಣ್ಯ ಪಾಲಕರಾದ ಸಲೀಂ, ರಮೇಶ್, ಸಂತೋಷ್, ಪ್ರಮೋದ್ ರೆಡ್ಡರ್, ವಾಹನ ಚಾಲಕ ಸುನಿಲ್, ಮಹೇಶ್, ವೃಷಭ, ಶರಣ, ರಾಯುಡು ಡಿಸೋಜಾ ಹಾಗೂ ಪ್ರಜ್ವಲ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


ಇನ್ನಷ್ಟು ಸುದ್ದಿಗಳು