ಸೈಲೆನ್ಸರ್​ಗಳ ಮೇಲೆ ರೋಡ್ ರೋಲರ್ ಓಡಿಸಿದ ಪೊಲೀಸರು! ಕಾರಣವೇನು ?

Defective silencers have been seized and destroyed by the police of Shiralakoppa Police Station.ಶಿರಾಳಕೊಪ್ಪ ಪೊಲೀಸ್ ಸ್ಟೇಷನ್​ ಪೊಲೀಸರು ಡಿಫೆಕ್ಟಿವ್ ಸೈಲೆನ್ಸರ್​ ಗಳನ್ನ ವಶಕ್ಕೆ ಪಡೆದು ನಾಶ ಪಡಿಸಿದ್ದಾರೆ

ಸೈಲೆನ್ಸರ್​ಗಳ ಮೇಲೆ ರೋಡ್ ರೋಲರ್ ಓಡಿಸಿದ ಪೊಲೀಸರು! ಕಾರಣವೇನು ?

KARNATAKA NEWS/ ONLINE / Malenadu today/ Sep 18, 2023 SHIVAMOGGA NEWS

ಹಬ್ಬದ ಬಂದೋಬಸ್ತ್​​ ನಡುವೆ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್​ (shiralakoppa police station) ಪೊಲೀಸರು, ಡಿಫೆಕ್ಟಿವ್ ಸೈಲೆನ್ಸ್​ರ್​ ಗಳ  (Defective Silencer) ಮೇಲೆ ಬುಲ್ಡೋಜರ್ ಹೊಡೆಸಿದ್ದಾರೆ. 

ವಿಶೇಷ ಕಾರ್ಯಾಚರಣೆ ಮೂಲಕ 20 ದೋಷಪೂರಿತ ಸೈಲೆನ್ಸರ್ ಗಳನ್ನು ವಶಕ್ಕೆ ಪಡೆದ ಪೊಲೀಸರು ಅವುಗಳನ್ನು ಶಿರಾಳಕೊಪ್ಪ ಟೌನ್ ನ ಬಸ್ ಸ್ಟಾಂಡ್ ಹತ್ತಿರ ರೋಡ್ ರೋಲರ್ ಹತ್ತಿಸಿ ನಾಶ ಪಡಿಸಿದ್ದಾರೆ

ಈ ಸಂದರ್ಭದಲ್ಲಿ ರುದ್ರೇಶ್, ಸಿಪಿಐ, ಶಿಕಾರಿಪುರ ಟೌನ್ ವೃತ್ತ, ಮಂಜುನಾಥ್ ಸಿದ್ದಪ್ಪ ಕುರಿ, ಪಿಎಸ್ಐ ಶಿರಾಳಕೊಪ್ಪ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳು ಉಪಸ್ಥಿತರಿದ್ದರು.  ಮುಂದಿನ ದಿನಗಳಲ್ಲಿಯೂ ಸಹಾ Defective Silencer ಗಳನ್ನು ಬಳಸುವ ಚಾಲಕ / ಮಾಲೀಕರುಗಳ ವಿರುದ್ಧ ಇದೇ ರೀತಿಯ ಕಾರ್ಯಾಚರಣೆ ನಡೆಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೇ ಅಧಿಕಾರಿಗಳು ತಿಳಿಸಿದ್ದಾರೆ 


ಇನ್ನಷ್ಟು ಸುದ್ದಿಗಳು