ಮಾಜಿ ಶಾಸಕರ ಮನೆ ದರೋಡೆ ! ಭದ್ರಾವತಿಯ ನಾಲ್ವರ ಬಂಧನ!

Ex-MLA's house robbed Four arrested from Bhadravathi/ ಮಾಜಿ ಶಾಸಕರ ಮನೆ ದರೋಡೆ ! ಭದ್ರಾವತಿಯ ನಾಲ್ವರ ಬಂಧನ!

ಮಾಜಿ ಶಾಸಕರ ಮನೆ ದರೋಡೆ ! ಭದ್ರಾವತಿಯ ನಾಲ್ವರ ಬಂಧನ!

KARNATAKA NEWS/ ONLINE / Malenadu today/ May 29, 2023 SHIVAMOGGA NEWS

ಚಿಕ್ಕಮಗಳೂರು/  ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಿರಗನಹಳ್ಳಿಯಲ್ಲಿರುವ ಮಾಜಿ ಶಾಸಕ ಎಸ್‌.ಎಂ. ನಾಗರಾಜ್​ರವರ ಮನೆಯಲ್ಲಿ ನಡೆದ ದರೋಡೆ ಪ್ರಕರಣ ಸಂಬಂಧ ಪೊಲೀಸರು ಮತ್ತೆ ನಾಲ್ವರನ್ನ ಬಂಧಿಸಲಾಗಿದೆ.  ನಿತೀನ್ ಎಸ್. ಮೂರ್ತಿ, ವೆಂಕಟೇಶ್‌, ಎಂ.ಎಸ್‌. ಕಾರ್ತಿಕ್, ಎಂ.ಮಹೇಶ್ ಬಂಧಿತ ಆರೋಪಿಗಳು. 

ಚಿನ್ನ ದೋಚಿ ಪರಾರಿ

ಇವರೆಲ್ಲರೂ ಭದ್ರಾವತಿ ಪಟ್ಟಣದ ನಿವಾಸಿಗರು. ಕಳೆದ  ಮೇ 6ರಂದು ಸುಮಾರು 15 ಮಂದಿ ತಂಡ ಮಾಜಿ ಶಾಸಕ ಎಸ್‌.ಎಂ. ನಾಗರಾಜರ ಮನೆ ಮೇಲೆ ದಾಳಿ ನಡೆಸಿತ್ತು. ಅಲ್ಲದೆ   ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿ, ದರೋಡೆ ನಡೆಸಿ ಮನೆಯಲ್ಲಿದ್ದ 963 ಗ್ರಾಂ ಚಿನ್ನ ಹಾಗೂ 61 ಸಾವಿರ ರುಪಾಯಿ ನಗದು ದೋಚಿ ಪರಾರಿಯಾಗಿದ್ದರು.

ಪೊಲೀಸರ ಕ್ಷಿಪ್ರ ತನಿಖೆ

ಘಟನೆ ಬೆನ್ನಲ್ಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಐದು ಮ೦ದಿಯನ್ನು ಬಂಧಿಸಿ, ಇನ್ನುಳಿದವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆಸಿದ್ದರು. ಇದೀಗ ಮತ್ತೆ ನಾಲ್ವರನ್ನು ಬಂಧಿಸಿ ಅವರ ಬಳಿ ಇದ್ದ 27 ಗ್ರಾಂ ತೂಕದ 2 ಚಿನ್ನದ ಬಳೆಗಳು ಹಾಗೂ ಕೃತ್ಯಕ್ಕೆ ಬಳಸಿದ್ದ  ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 

ಇದುವರೆಗೂ 11 ಮಂದಿ ಬಂಧನ

ಈ ಪ್ರಕರಣದಲ್ಲಿ ಈವರೆಗೆ 11 ಜನರನ್ನು ಬಂಧಿಸಲಾಗಿದ್ದು, 2 ಕಾರು, 2 ಬೈಕ್, 8 ಮೊಬೈಲ್ ಹಾಗೂ 330 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಉಳಿದ ಆರೋಪಿಗಳ ಪತ್ತೆಗಾಗಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ಬಿಜೆಪಿ ನಾಯಕರ ಸಾಲಿನಲ್ಲಿ ಸಿಎಂ ಸಿದ್ದರಾಮಯ್ಯರ ಫೋಟೋ! ಶಾಸಕ ಚನ್ನಬಸಪ್ಪರವರು ಹೇಳಿದ್ದೇನು?

ಶಿವಮೊಗ್ಗ/  ನಗರ ನೂತನ ಶಾಸಕರ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ,  ವೇದಿಕೆಗೆ ಹಾಕಲಾಗಿದ್ದ ಬ್ಯಾನರ್‌ನಲ್ಲಿ ಬಿಜೆಪಿ ನಾಯಕರ ಸಾಲಿನಲ್ಲಿ ಸಿದ್ದರಾಮಯ್ಯ ಫೊಟೋ ಹಾಕಲಾಗಿತ್ತು. ಈ ಫೋಟೋ ನಿನ್ನೆ ಸಾಕಷ್ಟು ವೈರಲ್​ ಆಗಿದ್ದಷ್ಟೆ ಅಲ್ಲದೆ ಕುತೂಹಲ ಮೂಡಿಸಿತ್ತು. 

  

ಬಿಜೆಪಿ ನಾಯಕರೇ ಇದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಫೋಟೋ ರಾರಾಜಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು.  ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಶಾಸಕ ಚನ್ನಬಸಪ್ಪ, ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯ ಮಂತ್ರಿ. ಹೀಗಾಗಿ ಅವರ ಫೋಟೋವನ್ನು ಹಾಕಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. 

ರಾಜಕಾರಣವೇ ಬೇರೆ, ಗೌರವವೇ ಬೇರೆ. ನಾವು ಮುಖ್ಯ ಮಂತ್ರಿ ಸ್ಥಾನಕ್ಕೆ ಗೌರವ ನೀಡುತ್ತೇವೆ. ಹೀಗಾಗಿ ಅವರ ಫೋಟೋವನ್ನು ಹಾಕಲಾಗಿದೆ. ಬೇರೆ ಯಾವ ಉದ್ದೇಶನೂ ಇಲ್ಲ ಎಂದು ಅವರು ತಿಳಿಸಿದ್ದಾರೆ. 

ಸುಡುತ್ತಿದೆ ಬೇಸಿಗೆ , ವಾಹನಗಳ ಬಗ್ಗೆ ಇರಲಿ ಎಚ್ಚರ! ಪೆಟ್ರೋಲ್​ ಬಂಕ್​ನಲ್ಲಿ ಕಾರಿನ ಬ್ಯಾಟರಿ ಸ್ಫೋಟ! ಸ್ವಲ್ಪದರಲ್ಲಿ ತಪ್ಪಿತು ಬೆಂಕಿ ಅನಾಹುತ!