ಪ್ರಥಮ ಪಿಯುಸಿ ಕಾಲೇಜು ಆಯ್ಕೆಗೆ ಕೌನ್ಸಿಲಿಂಗ್​ ಗೆ ಹಾಜರಾಗಲು ಸೂಚನೆ!

Notice to appear for counselling for first PUC college selection!

ಪ್ರಥಮ ಪಿಯುಸಿ ಕಾಲೇಜು ಆಯ್ಕೆಗೆ ಕೌನ್ಸಿಲಿಂಗ್​ ಗೆ ಹಾಜರಾಗಲು ಸೂಚನೆ!

KARNATAKA NEWS/ ONLINE / Malenadu today/ May 29, 2023 SHIVAMOGGA NEWS

ಶಿವಮೊಗ್ಗ/  ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 03 ಮೊರಾರ್ಜಿ ದೇಸಾಯಿ/ ಅಟಲ್ ಬಿಹಾರಿ ವಾಜಪೇಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜುಗಳಿಗೆ 2023-24ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ದಾಖಲಾತಿಗಾಗಿ ಕೌನ್ಸಿಲಿಂಗ್ ಮೂಲಕ ಕಾಲೇಜು ಆಯ್ಕೆ ಮಾಡಿಕೊಳ್ಳಲು ಈಗಾಗಲೇ 1:2 ಅನುಪಾತದಂತೆ ಆಯ್ಕೆ ಪಟ್ಟಿ ತಯಾರಿಸಲಾಗಿದೆ. ಹಾಗೆಯೇ ಈ ಪಟ್ಟಿಯನ್ನು ಎಲ್ಲಾ ವಸತಿ ಶಾಲೆ/ ಕಾಲೇಜುಗಳಲ್ಲಿ ಪ್ರಕಟಿಸಲಾಗಿದೆ.

ಸದ್ಯ  ಆಯ್ಕೆ ಪಟ್ಟಿಯಲ್ಲಿರುವ ವಿದ್ಯಾರ್ಥಿಗಳು ದಿ: 01/06/2023 ರಂದು ಬೆಳಗ್ಗೆ 9.00 ಕ್ಕೆ ಅಂಬೇಡ್ಕರ್ ಭವನ, ಗಾಂಧಿ ಪಾರ್ಕ್ ಹತ್ತಿರ, ಶಿವಮೊಗ್ಗ ಇಲ್ಲಿ ನಡೆಯಲಿರುವ ಕೌನ್ಸಿಲಿಂಗ್ ಪ್ರಕ್ರಿಯೆಗೆ ಸೂಕ್ತ ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚಿಸಿದೆ. 

ಆಯ್ಕೆ ಪಟ್ಟಿಯನ್ನು ಎಲ್ಲಾ ವಸತಿ ಶಾಲೆ/ಕಾಲೇಜುಗಳಲ್ಲಿ ಪ್ರಕಟಿಸಲಾಗಿದ್ದು, ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ದೂರವಾಣಿ ಮುಖಾಂತರ ತಿಳಿಸಲಾಗುವುದು. 

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು ಕಚೇರಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚನ್ನಮ್ಮ/ ಶ್ರೀ ನಾರಾಯಣ ಗುರು/ ಆಟಲ್ ವಾಜಿಪೇಯಿ / ಶ್ರೀಮತಿ ಇಂದಿರಾ ಗಾಂಧಿ/ ಡಾ|| ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ/ ಕಾಲೇಜುಗಳ  ಕಚೇರಿ ವೇಳೆಯಲ್ಲಿ ಸಂಪರ್ಕಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.