ಸ್ವಲ್ಪ ಜಾಗ್ರತೆ ವಹಿಸಿ! ಮನೆಗೆ ಹೋಗ್ತಿದ್ದ ವೃದ್ದನನ್ನ ಎತ್ತಿ ಕೆಡವಿದ ಗೂಳಿ!

An elderly man was injured by a bull in Sringeri taluk.ಶೃಂಗೇರಿ ತಾಲ್ಲೂಕಿನಲ್ಲಿ ಗೂಳಿಯೊಂದು ವೃದ್ದನನ್ನ ಗಾಯಗೊಳಿಸಿದೆ.

ಸ್ವಲ್ಪ ಜಾಗ್ರತೆ ವಹಿಸಿ! ಮನೆಗೆ ಹೋಗ್ತಿದ್ದ ವೃದ್ದನನ್ನ ಎತ್ತಿ ಕೆಡವಿದ ಗೂಳಿ!

KARNATAKA NEWS/ ONLINE / Malenadu today/ Jul 29, 2023 SHIVAMOGGA NEWS

ವೃದ್ಧನೊಬ್ಬನನ್ನ ಗೂಳಿಯೊಂದು ತನ್ನ ಕೋಡಿನಿಂದ ತಿವಿದು ನಿಂತ ಜಾಗದಿಂದಲೇ ಎತ್ತಿ ಕೆಡವಿದ ಘಟನೆಯೊಂದು ಚಿಕ್ಕಮಗಳೂರು  ಜಿಲ್ಲೆ ಶೃಂಗೇರಿಯ ಪೇಟೆಯಲ್ಲಿ ನಡೆದಿದೆ. 

ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವೃದ್ಧನನ್ನ ಸ್ಥಳೀಯವಾಗಿ ಓಡಾಡಿಕೊಂಡಿದ್ದ ಗೂಳಿಯೊಂದು ತೀವ್ರವಾಗಿ ಗಾಯಗೊಳಿಸಿದೆ. ಸುಮ್ಮನೆ ನಿಂತಿದ್ದ ಗೂಳಿಯನ್ನು ನೋಡಿದ ವೃದ್ದರು ಏನೂ ಮಾಡುವುದಿಲ್ಲ ಎಂದುಕೊಂಡು ಮುಂದಕ್ಕೆ ಹೋಗಿದ್ದಾರೆ. ಆದರೆ ಗೂಳಿ ಇದ್ದಕ್ಕಿದ್ದ ಹಾಗೆ ವೃದ್ಧನನ್ನ ಕೋಡಿನಿಂದ ಮೇಲಕ್ಕೆತ್ತಿ ಕೆಡವಿದೆ. ಬೀಳುವ ರಭಸದಲ್ಲಿ ವೃದ್ದ ಶ್ರೀನಿವಾಸಯ್ಯ ರವರ ತಲೆಗೆ ಪೆಟ್ಟಾಗಿದೆ. ಇನ್ನೂ ಅವರನ್ನ ಸ್ಥಳೀಯರು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಿದ್ಧಾರೆ. ಸಂಪೂರ್ಣ ಘಟನೆ ಅಲ್ಲಿಯೇ ಇದ್ದ ಹೋಟೆಲ್​ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.  




SHIVAMOGGA AIRPORT ಗೆ ಸಿಗಲಿದೆ ವಿಶೇಷ ಭದ್ರತೆ! ಗೋವಾ, ತಿರುಪತಿ, ಹೈದ್ರಾಬಾದ್​ಗೂ ಹಾರುತ್ತೆ ವಿಮಾನ! ಟಿಕೆಟ್ ದರದ ಬಗ್ಗೆ ಸಂಸದರು ಹೇಳಿದ್ದೇನು?

ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟದ ಬಗ್ಗೆ ಇವತ್ತು ಸಂಸದ ಬಿ.ವೈ.ರಾಘವೇಂದ್ರರವರು ಸುದ್ದಿಗೋಷ್ಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದ ಕುರಿತು ಸಚಿವ ಎಂ ಬಿ ಪಾಟೀಲ್ (MB Patil)​ ಅವರು ಹೇಳಿಕೆ ನೀಡಿದ್ದಾರೆ.

 ನಿಗದಿಯಂತೆ, ಆಗಸ್ಟ್ 11 ಕ್ಕೆ ಶಿವಮೊಗ್ಗದ ಫ್ಲೈಟ್  ಆಪರೇಷನ್ ಆಗಬೇಕಿತ್ತು.ಸ್ಪೋಟಕ ನಿಗ್ರಹ ಪಡೆ  ಅದೇ ವಿಮಾನ ನಿಲ್ದಾಣದಲ್ಲಿ ಇರಬೇಕೆಂದು ಕೇಂದ್ರ ನಿಯಮವಳಿ ಮಾಡಿದ ಪರಿಣಾಮ ಈಗ ವಿಮಾನ ಹಾರಾಟ ಮುಂದಕ್ಕೆ ಹೋಗಿದೆ. ಬೇರೆ ವಿಮಾನ ನಿಲ್ದಾಣ ನಿಲ್ದಾಣಗಳಲ್ಲಿ ಈ ಸಿಸ್ಟಮ್ ಇಲ್ಲ. ಸದ್ಯ ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ನುರಿತ ಪಡೆ ಇರುತ್ತದೆ ಎಂದು ಸಂಸದರು ತಿಳಿಸಿದರು. 

ಬೇಡಿಕೆಗೆ ಅನುಗುಣವಾಗಿ , ವಿಮಾನ ಪ್ರಯಾಣದ ದರ ನಿಗದಿಯಾಗುತ್ತದೆ ಎಂದು ತಿಳಿಸಿದ ಸಂಸದ ರಾಘವೇಂದ್ರ , ಮುಂದಿನ ಅಕ್ಟೋಬರ್​ರವರೆಗೂ ಟಿಕೆಟ್ ಬುಕ್ಕಿಂಗ್ ಆಗುತ್ತಿದೆ ಎಂದು ಮಾಹಿತಿ ನೀಡಿದ್ರು.  ಹೊಸ ಪ್ಲೈಟ್​ ಹಾಗೂ ಹೊಸ ಮಾರ್ಗಗಳ ವಿಚಾರದಲ್ಲಿ ಶಿವಮೊಗ್ಗ- ತಿರುಪತಿ, ಶಿವಮೊಗ್ಗ- ಹೈದಾರಬಾದ್ ಹಾಗೂ ಶಿವಮೊಗ್ಗ- ಗೋವಾ ಮೂರು ಮಾರ್ಗಗಳಿಗೆ ಅನುಮೋದನೆಯಾಗಿದೆ.

ಸ್ಪೈಸ್ ಜೆಟ್, ಇಂಡಿಗೋ ಸ್ಟಾರ್ ಏರ್​ಲೈನ್ಸ್​ರವರು ವಿಮಾ ಹಾರಾಟಕ್ಕೆ ಮುಂದಾಗಿದ್ದಾರೆ.  ಮುಂಬೈಗೆ ಸಹ ಅವಕಾಶ ನೀಡಬೇಕೆಂಬ ಮನವಿಯಿದೆ. ಈ ಸಂಬಂಧ ಏರ್ ಲೈನ್ಸ್ ಮಿನಿಸ್ಟರ್​ರನ್ನು ಭೇಟಿ ಮಾಡಲು ಅವಕಾಶ‌ ಸಿಕ್ಕಿದ್ದು, ಮಾತನಾಡುವುದಾಗಿ ತಿಳಿಸಿದ್ರು. 


ಶಿವಮೊಗ್ಗ ಟಿವಿ ಟವರ್ ಗೆ ಎಫ್​ಎಂ ಟ್ರಾನ್ಸ್​ಮೀಟರ್ ಜೋಡಣೆ! ನಗರದಲ್ಲಿಯೇ ಕೇಳಲಿದೆ ಎಫ್​ಎಂ!? ಏನಂದ್ರು ಸಂಸದರು?

ಆರು ಚಿನ್ನದ ಪದಕದ ಜೊತೆಗೆ ರಾಜ್ಯದಲ್ಲಿಯೇ ಫಸ್ಟ್ RANK ಪಡೆದ ಶಿವಮೊಗ್ಗ ಯುವತಿ!

VIRAL TODAY / ಶಾಸಕರ ಬಾಯಿ ರುಚಿ ಮತ್ತು ಬೃಂದಾವನ್​ ಕ್ಯಾಂಟಿನ್​ ಮೆಣಸಿನ ಕಾಯಿ ಬೋಂಡಾ! ವೈರಲ್​ ಆಯ್ತು ಬೇಳೂರು ಹೇಳಿದ ಬಜ್ಜಿ ರೆಸಿಪಿ!

 

SHIVAMOGGA AIRPORT / ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್!

 ರೈಲ್ವೆ ಪ್ರಯಾಣಿಕರಿಗೆ ಸೂಚನೆ! ಜನಶತಾಬ್ದಿ ಸೇರಿ ಹಲವು ಟ್ರೈನ್​ಗಳ ಸಂಚಾರದಲ್ಲಿ ವ್ಯತ್ಯಯ! ವಿವರ ಇಲ್ಲಿದೆ






 ​