ಮಳೆಗೆ ಹೊತ್ತಿಕೊಳ್ಳದ ಬೆಂಕಿ! ಅಂತ್ಯಕ್ರಿಯೆ ಅತಂತ್ರ! ತೀರ್ಥಹಳ್ಳಿಯಲ್ಲಿ ಪ್ರತಿವರ್ಷ ಇದೆಂಥಾ ಅವಸ್ಥೆ ?

A fire that doesn't burn in the rain! The funeral is a mess! What is the situation in Theerthahalli every year?

ಮಳೆಗೆ ಹೊತ್ತಿಕೊಳ್ಳದ ಬೆಂಕಿ! ಅಂತ್ಯಕ್ರಿಯೆ ಅತಂತ್ರ! ತೀರ್ಥಹಳ್ಳಿಯಲ್ಲಿ ಪ್ರತಿವರ್ಷ ಇದೆಂಥಾ ಅವಸ್ಥೆ ?

KARNATAKA NEWS/ ONLINE / Malenadu today/ Jul 7, 2023 SHIVAMOGGA NEWS 

ತೀರ್ಥಹಳ್ಳಿ/ ಮಲೆನಾಡಲ್ಲಿ ಮಳೆ ಬರದಿರುವುದು ಇದುವರೆಗಿನ ಒಂದು ಸುದ್ದಿಯಾದರೇ, ಮಳೆಗಾಲ ಮುಗಿಯುವರೆಗೂ ಅಂತ್ಯಸಂಸ್ಕಾರ ಮಾಡುವುದೇ ಮಳೆಗಾಲದ ದೊಡ್ಡ ಸಮಸ್ಯೆಯ ಸುದ್ದಿ. ಇದಕ್ಕೆ ಸಾಕ್ಷಿ ಎಂಬಂತೆ ಇವತ್ತು ಕೋಣಂದೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ದೊಡ್ಡ ಕೆರೆ ಗ್ರಾಮದಲ್ಲಿರುವ ಸ್ಮಶಾನದಲ್ಲಿ  ವ್ಯಕ್ತಿಯೊಬ್ಬರ ಅಂತ್ಯ ಕ್ರಿಯೆ ನಡೆಸಲು ಸಂಬಂಧಿಕರು ಇನ್ನಿಲ್ಲದ ತ್ರಾಸ ಪಡಬೇಕಾದ ಸನ್ನಿವೇಶ ಎದುರಾಗಿತ್ತು. 

ಇಲ್ಲಿನ  ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸಶ್ಮಾನವೇನೋ ಇದೆ. ಅಂತ್ಯಕ್ರಿಯೆಗೆ ಮಂಟಪದ ಮಾದರಿಯಲ್ಲಿ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಆದರೆ  ಮೇಲ್ಚಾವಣಿಯ ಶೀಟುಗಳು ಹಾರಿ ಹೋಗಿದ್ದು, ಮಳೆಯ ನೀರು ಚಿತೆಯ ಮೇಲೆಯೇ ದೋ ಅಂತಾ ಬೀಳುತ್ತಿದೆ. ಇದರ ನಡುವೆ ಅಂತ್ಯಕ್ರಿಯೆ ಮಾಡಬೇಕಾದ ಸನ್ನಿವೇಶ ಎದುರಾಗಿತ್ತು. 

ಇವತ್ತು ಎಂತಹ ಅವಸ್ಥೆಯಾಗಿತ್ತು ಎಂಬುದನ್ನ ಹೇಳತೀರದು ಎಂದು ಮೃತರ ಕಡೆಯವರು ನೊಂದು ಕೊಂಡು ಹೇಳುತ್ತಿದ್ದಾರೆ. ಸ್ಮಶಾನದಲ್ಲಿ ಸೂಕ್ತ ವ್ಯವಸ್ಥೆ ಹಾಗೂ ನಿರ್ವಹಣೆ ಇಲ್ಲದೆ ಇರುವುದರಿಂದ ಈ ರೀತಿ ಸಮಸ್ಯೆ ಆಗಿದೆ..ಮಲೆನಾಡ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಜೋರಾಗಿ ಸುರಿಯುವ ಮಳೆಯಲ್ಲಿಯೇ ಮೃತರ ಅಂತ್ಯಸಂಸ್ಕಾರ ನಡೆಸಲಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಜನರಿಗೆ  ಎದುರಾಗಿರುವ ಸಮಸ್ಯೆಯನ್ನು ಬಗೆಹರಿಸಿ ಸ್ಮಶಾನಕ್ಕೆ ಸರಿಯಾದ ವ್ಯವಸ್ಥೆ ಮಾಡಿ ಕೊಡುತ್ತಾರ ಕಾದು ನೋಡಬೇಕಿದೆ.