ಹಿನ್ನೀರಿನಲ್ಲಿ ಉದ್ಭವವಾದ ಅಮ್ಮನವರು/ ಕಾಡಾನೆ ಸೆಲ್ಫಿಗೆ 10 ಸಾವಿರ ದಂಡ/ಶಿವಮೊಗ್ಗ ವಾಹನ ಸವಾರರಿಗೆ ಇಲ್ಲಿದೆ ಮತ್ತೊಂದು ಚಾನ್ರ್ಸ್​/ ಗುಡ್ಡೆಕಲ್​ನಲ್ಲಿ ಮಲೇಶಿಯಾ ಮಾದರಿ ಪ್ರತಿಮೆ! TODAY@NEWS

Amma in the backwaters/ Rs 10,000 fine for wild elephant selfie/ Here's another chance for Shivamogga motorists/ Malaysia model statue at Guddekal! TODAY@NEWS

ಹಿನ್ನೀರಿನಲ್ಲಿ ಉದ್ಭವವಾದ ಅಮ್ಮನವರು/ ಕಾಡಾನೆ ಸೆಲ್ಫಿಗೆ 10 ಸಾವಿರ ದಂಡ/ಶಿವಮೊಗ್ಗ ವಾಹನ ಸವಾರರಿಗೆ ಇಲ್ಲಿದೆ ಮತ್ತೊಂದು ಚಾನ್ರ್ಸ್​/ ಗುಡ್ಡೆಕಲ್​ನಲ್ಲಿ ಮಲೇಶಿಯಾ ಮಾದರಿ ಪ್ರತಿಮೆ! TODAY@NEWS

KARNATAKA NEWS/ ONLINE / Malenadu today/ Jul 7, 2023 SHIVAMOGGA NEWS 

ಗುಡ್ಡೆಕಲ್​ ನಲ್ಲಿ 151 ಬಾಲಸುಬ್ರಹ್ಮಣ್ಯ ಪ್ರತಿಮೆ ಸ್ಥಾಪನೆ 

ಶಿವಮೊಗ್ಗ ನಗರದ ಗುಡ್ಡೆಕಲ್​ ದೇವಾಲಯದಲ್ಲಿ  151 ಅಡಿ ಎತ್ತರದ ಬಾಲಸುಬ್ರಹ್ಮಣ್ಯ ಸ್ವಾಮಿ ವಿಗ್ರಹ ಸ್ಥಾಪನೆಗೆ ಇದೇ ಜುಲೈ 9ರಂದು ಶಂಕುಸ್ಥಾಪನೆ ನಡೆಯಲಿದೆ.  12 ಕೋಟಿ ವೆಚ್ಚದಲ್ಲಿ ವಸತಿಗೃಹ, ಹಾಗೂ ವಿಗ್ರಹ ಸ್ಥಾಪನೆ ಕಾರ್ಯ ನಡೆಯಲಿದೆ.  ನವಿಲಿನ ವಾಹನದೊಂದಿಗೆ ದೇವರು ಬಂದು ಇಳಿದ ರೀತಿಯಲ್ಲಿ ಭಾಸವಾಗುವಂತೆ ವಿಗ್ರಹ ಸ್ಥಾಪನೆ ಮಾಡಲಾಗುತ್ತಿದೆ. ಈ ವಿಗ್ರಹದ  ಶಿಲ್ಪಿ ತ್ಯಾಗರಾಜನ್ ಮಲೇಶಿಯದಲ್ಲಿ 136 ಅಡಿ ಮತ್ತು ಸೇಲಂನಲ್ಲಿ 141 ಅಡಿ ಎತ್ತರದ  ವಿಗ್ರಹವನ್ನು ನಿರ್ಮಿಸಿದ್ದಾರೆ. 2 ವರ್ಷಗಳಲ್ಲಿ ವಿಗ್ರಹ ನಿರ್ಮಾಣವಾಗಲಿದೆ ಎಂದು ಬಾಲ ಸುಬ್ರಹ್ಮಣ್ಯ ದೇವಾಲಯದ ಟ್ರಸ್ಟ್ ನ ರಾಜಶೇಖರಪ್ಪ ತಿಳಿಸಿದ್ಧಾರೆ. 

ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಶಿಕಾರಿಪುರ ತಾಲೂಕಿನ ಯರೇಕಟ್ಟೆ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ, ಕೊಳೆತ ಸ್ಥಿತಿಯಲ್ಲಿರುವ ವ್ಯಕ್ತಿಯ ಶವ ಪತ್ತೆಯಾಗಿದೆ. ಅಂದಾಜು 45-50 ವಯಸ್ಸಿನ 175 ಸೆ.ಮೀ. ಎತ್ತರದ ಪುರುಷ ವ್ಯಕ್ತಿಯಾಗಿದ್ದು ಗುರುತು ಪತ್ತೆ ಆಗದಷ್ಟು ದೇಹ ಕೊಳೆತು ಹೋಗಿದೆ. ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ಕೆಂಪು ಬಣ್ಣದ ಉಡುದಾರ, ನವಗ್ರಹ ಉಂಗುರ, ಬಲಗೈಯಲ್ಲಿ ಮೂರು ಎಳೆಯ ಬಣ್ಣದ ದಾರ, ಬಲಗೈಯಲ್ಲಿ ಸಿಂಹದ ಮುಖಗಳಿರುವ ಕಡಗ, 10 ಇಂಚು ಬೂದು ಬಣ್ಣದ ಲೂನಾರ್ ವಾಕೇಟ್ ಚಪ್ಪಲಿ ಇವೆ. ಕಾಣೆಯಾದ ಯಾವುದೆ ವ್ಯಕ್ತಿಯ ಚಹರೆ ಇದಾಗಿದ್ದರೆ ಕೂಡಲೆ ಗ್ರಾಮಾಂತರ ಠಾಣೆಗೆ ಸಂಪರ್ಕಿಸುವಂತೆ ಕೋರಲಾಗಿದೆ. 

ಕಾಡಾನೆ ಸೆಲ್ಫಿ ತೆಗೆದಿದ್ದಕ್ಕೆ 10 ಸಾವಿರ ರೂಪಾಯಿ ದಂಡ

ಚಾಮರಾಜನಗರ ಜಿಲ್ಲೆಯ ಗಡಿಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆ ಜೊತೆ ಸೆಲ್ಫಿ ತೆಗೆದುಕೊಂಡ ಇಬ್ಬರಿಗೆ ತಮಿಳುನಾಡಿನ ಅರಣ್ಯ‌ಇಲಾಖೆ ತಲಾ ₹10 ಸಾವಿರ ದಂಡ ವಿಧಿಸಿದೆ. ಬೆಂಗಳೂರು ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ಕಾರಿನಿಂದ ಇಳಿದು, ರಸ್ತೆ ಬದಿ‌ ನಿಂತಿದ್ದ ಕಾಡಾನೆ ಎದುರು ಸೆಲ್ಫಿ ತೆಗೆದುಕೊಂಡಿದ್ದರು. ಈ ವಿಚಾರ ತಿಳಿದು ಚೆಕ್​ಪೋಸ್ಟ್​ನಲ್ಲಿ ಅರಣ್ಯ ಸಿಬ್ಬಂದಿ ಕಾರು ತಡೆದು ದಂಡ ವಿಧಿಸಿದೆ.  

ಶಿವಮೊಗ್ಗದಲ್ಲಿಯು ಟ್ರಾಫಿಕ್ ಫೈನ್​ ಕಟ್ಟಲು 50 ಪರ್ಸೆಂಟ್ ರಿಯಾಯಿತಿ

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ಈ ಹಿಂಡೆ ನಡೆದಿದ್ದ ಸಭೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಬಂಧ ಬಾಕಿ ಉಳಿಸಿಕೊಂಡಿರುವ ದಂಡ ಪಾವತಿಗೆ ಶೇ.50ರಷ್ಟುರಿಯಾಯಿತಿ ನೀಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಇದರ ಅಡಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಬಂಧ ದಂಡ ಪಾವತಿಗೆ ಶೇ.50 ರಷ್ಟುರಿಯಾಯಿತಿ ನೀಡುವ ಸೌಲಭ್ಯವನ್ನು ಮತ್ತೆ ಜಾರಿಗೊಳಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಈ ಆದೇಶವು ಕಳೆದ ಫೆ.11ರ ಹಿಂದಿನ ಪ್ರಕರಣಗಳಿಗೆ ಮಾತ್ರ ಅನ್ವಯವಾಗಲಿದೆ. ರಿಯಾಯಿತಿ ದಂಡ ಪಾವತಿಗೆ ಬರುವ ಸೆ.9ರವರೆಗೆ ಅವಕಾಶ ನೀಡಲಾಗಿದೆ. Field Traffic Violation Report (FTVR)   ಪ್ರಕರಣಗಳನ್ನು ಶಿವಮೊಗ್ಗದಲ್ಲಿಯು ಅವಕಾಶ ಮಾಡಿಕೊಡಲಾಗಿದ್ದು, ಈ ಸಂಬಂಧ ಟ್ರಾಫಿಕ್​ ಪೊಲೀಸ್ ಸ್ಟೇಷನ್​ನಿಂದ ಪ್ರಕಟಣೆ ಹೊರಡಿಸಲಾಗಿದೆ.  

ಹಿನ್ನೀರಿನಲ್ಲಿ ಅಮ್ಮನವರ ಮೂರ್ತಿ

ಮಳೆಯಿಲ್ಲದೆ ಲಿಂಗನಮಕ್ಕಿ ಹಿನ್ನೀರಿನಲ್ಲಿ ಈ ಹಿಂದೆ ಮುಳುಗಡೆಯಾದ ಕುರುಹುಗಳು ಕಾಣ ಸಿಗುತ್ತಿದೆ. ಮಡೆನೂರು ಡ್ಯಾಂ ಕಾಣಿಸಿದ ಬೆನ್ನಲ್ಲೆ, ಇದೀಗ ನೀರಿನಲ್ಲಿ ಹುಗಿದುಹೋಗಿರುವ ಅಮ್ಮನವರು ಮೂರ್ತಿ ಕಾಣಿಸಿರುವ ವಿಡಿಯೋವೊಂದು ವೈರಲ್ ಆಗಿದೆ. ಪುರಾತನ ದೇವರ ವಿಗ್ರಹ ಇದಾಗಿದ್ದು, ಹಿನ್ನೀರಿನಲ್ಲಿ ಕಾಣ ಸಿಗುತ್ತಲೇ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಹಣ್ಣುಕಾಯಿ ಮಾಡಿ ಪೂಜೆ ಮಾಡಿದ್ಧಾರೆ. ಸದ್ಯ ವಿಡಿಯೋ ವೈರಲ್ ಆಗಿದೆ.