SHIVAMOGGA | Dec 27, 2023 | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ನಲ್ಲಿ ದನಗಳ್ಳತನ ಪ್ರಕರಣಗಳು ಹೆಚ್ಚಾಗಿವೆ ಎಂಬ ದೂರುಗಳು ಕೇಳಿಬಂದಿವೆ. ಇದಕ್ಕೆ ಸಾಕ್ಷಿ ಎಂಬಂತೆ ಮಲೆನಾಡು ಟುಡೆ ಓದುಗರೊಬ್ಬರು ಸೀಬಿನಕೆರೆಯಲ್ಲಿ ಐಶಾರಾಮಿ ಕಾರಿನಲ್ಲಿ ದನ ತುಂಬಿಕೊಂಡು ಹೋಗುತ್ತಿರುವ ದೃಶ್ಯವೊಂದನ್ನ ಕಳುಹಿಸಿಕೊಟ್ಟಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕು
ತೀರ್ಥಹಳ್ಳಿ ಕೋರ್ಟ್ ಸಮೀಪ ನಡೆದ ಘಟನೆಯ ದೃಶ್ಯ ಅದಾಗಿದ್ದು XUV ಕಾರಿನಲ್ಲಿ ದನಗಳನ್ನ ಸಾಗಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ತಡರಾತ್ರಿ 2.45 ರ ಸಮಯದಲ್ಲಿ ಕಾರಿನ ಡಿಕ್ಕಿಗೆ ದನಗಳನ್ನು ಅಮಾನುಷವಾಗಿ ತುಂಬುತ್ತಿರುವ ದೃಶ್ಯ ಕ್ಯಾಮರಾದಲ್ಲಿ . ಮುಸುಕು ಹಾಕಿದ್ದ ವ್ಯಕ್ತಿಗಳು ಯಾರು ಎಂಬುದು ಗೊತ್ತಾಗಿಲ್ಲ. ಕಾರಿನ ವಿವರ ಸಹ ಪತ್ತೆಯಾಗಿಲ್ಲ. ಈ ಸಂಬಂಧ ಸ್ತಳೀಯರು ಆಕ್ರೋಶ ಹೊರಹಾಕಿದ್ದಾರೆ.
READ : ಸಂಸದ ರಾಘವೇಂದ್ರ V/s ಸಚಿವ ಮಧು ಬಂಗಾರಪ್ಪ! ಏನಿದು POLITCAL ವಾಗ್ವಾದ!?
ತೀರ್ಥಹಳ್ಳಿ ಬಾಳೆಬೈಲ್, ಸೀಬಿನಕೆರೆ , ಬೆಟ್ಟಮಕ್ಕಿ ಸುತ್ತಮುತ್ತ ಇತ್ತೀಚೆಗೆ ದನಗಳ್ಳತನ ವಿಪರೀತವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಸಿಸಿ ಕ್ಯಾಮರಾಗಳಲ್ಲಿ ಈ ದೃಶ್ಯಗಳು ಸೆರೆಯಾಗಿರುವ ಸಾಧ್ಯತೆ ಇದ್ದು, ದನಗಳ್ಳತನವನ್ನು ಮಟ್ಟಹಾಕುವ ಪ್ರಯತ್ನ ಪೊಲೀಸರು ಕೈಗೊಳ್ಳಬೇಕಿದೆ.
ನಿನ್ನೆ ನಡೆದ ಘಟನೆ ಬಗ್ಗೆ ದೂರು ದಾಖಲಾಗಿರುವ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಇನ್ನೂ ತೀರ್ಥಹಳ್ಳಿಯಲ್ಲಿ ಇದುವರೆಗೂ ಕಂಡು ಕೇಳರಿಯದ ರೀತಿಯಲ್ಲಿ ಹಸುಗಳನ್ನ ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂಬ ವಿವರ ಮಲೆನಾಡು ಟುಡೆ ಬಳಿ ಇದ್ದು ಅದರ ಬಗ್ಗೆ ಇನ್ನಷ್ಟು ಮಾಹಿತಿಯ ಜೊತೆಗೆ ಶೀಘ್ರದಲ್ಲಿಯೇ ಎಕ್ಸ್ಕ್ಲ್ಯೂಸಿವ್ ವಿವರ ನೀಡುತ್ತೇವೆ.