ಸಂಸದ ರಾಘವೇಂದ್ರ V/s ಸಚಿವ ಮಧು ಬಂಗಾರಪ್ಪ! ಏನಿದು POLITCAL ವಾಗ್ವಾದ!?

MP Raghavendra V/S Minister Madhu Bangarappa WHAT IS A POLITICAL DEBATE!?

ಸಂಸದ ರಾಘವೇಂದ್ರ V/s ಸಚಿವ ಮಧು ಬಂಗಾರಪ್ಪ! ಏನಿದು POLITCAL  ವಾಗ್ವಾದ!?

SHIVAMOGGA  |  Dec 27, 2023  |    ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ  ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ  ಸಂಸದ  ಪ್ರತಾಪ್ ಸಿಂಹರವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,  ಪ್ರತಾಪ್ ಸಿಂಹ ಅವರೇನು ಅಂತಾ ಅವರೇ ಹೇಳಿಕೊಂಡಿದ್ದಾರೆ .ಮಾಧ್ಯಮದಲ್ಲಿ ಮಾತನಾಡಿಕೊಂಡು‌ ಹೋಗೋದು ಬಿಟ್ಟರೆ ಅವರೇನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. 

ಮಧು ಬಂಗಾರಪ್ಪ 

ಇನ್ನೂ ಯತ್ನಾಳ್ ರವರ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಧು ಬಂಗಾರಪ್ಪರವರು  ನಾವು ವಿಪಕ್ಷದಲ್ಲಿ ಇದ್ದಾಗ ನಾವು ಕೂಡ ಹೇಳ್ತಿದ್ದೇವು. ಬಸನಗೌಡ ಪಾಟೀಲ್ ಯತ್ನಾಳ್  ಸತ್ಯ ನುಡಿದಿದ್ದಾರೆ ಕ್ರಮ ಕೈಗೊಳ್ಳುವುದು ಒಳ್ಳೆಯದು. ಸರಕಾರದ ಹಣ ಆ ರೀತಿ ದುರ್ಬಳಕೆ ಆಗಬಾರದು ಎಂದಿದ್ದಾರೆ. 

ತುಂಗಾಭದ್ರಾ ಸಕ್ಕರೆ ಕಾರ್ಖಾನೆ ವಿಚಾರದ ಬಗ್ಗೆ ಮಾತನಾಡ್ತಾ ಸಂತ್ರಸ್ತರು ನನಗು ಸಹ ಮನವಿ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ಸಂಸದ ಬಿ.ವೈ.ರಾಘವೇಂದ್ರರವರು ಹಗುರವಾಗಿ ಮಾತನಾಡಿದ್ದಾರೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ನೋಡಿಕೊಂಡ್ರು ಅನ್ನುವ ಹಾಗೆ ಸಂಸದರು‌ ಇಷ್ಟು  ವರ್ಷ ಸುಮ್ಮನಿದ್ದು ಈಗ ಮಾತನಾಡ್ತಿದ್ದಾರೆ. 

READ: ಯುವ ನಿಧಿ ಯೋಜನೆಗೆ ಆನ್‍ಲೈನ್ ಅರ್ಜಿ ಆಹ್ವಾನ! ವಿವರ ಇಲ್ಲಿದೆ

ಅಲ್ಲದೆ  ಈಗ ಒಂದೇ ಸರಿ ಬೇರೆಯವರ ಮೇಲೆ ಹಾಕ್ತಿದ್ದಾರೆ. ಸಂಸದ ರಾಘವೇಂದ್ರ ಅವರು ಮಾತನಾಡಬೇಕಾದರೆ ಹುಷಾರಾಗಿ ‌ಮಾತನಾಡಬೇಕು.  ಅವರದ್ದು ಬೇಕಾದಷ್ಟು ಇದೆ ಎಲ್ಲವನ್ನು ಹೊರಗೆ ತೆಗೆಯಬೇಕಾಗುತ್ತದೆ ಎಂದಿದ್ದಾರೆ. ಸಂಸದರಿಗೆ ಶರಾವತಿ ಸಂತ್ರಸ್ತರಿಗೆ ಹಕ್ಕು ಪತ್ರ ಕೊಡುವ ಯೋಗ್ಯತೆ ಇಲ್ಲ ಎಂದು ಟೀಕಿಸಿದ ಮಧು ಬಂಗಾರಪ್ಪರವರು ಅವರ ತಂದೆ ಯಡಿಯೂರಪ್ಪ ಸಿಎಂ ಆಗಿದ್ದರು. ಒಂದೇ ಒಂದು ಹಕ್ಕುಪತ್ರ ಕೊಡಲು ಯಾಕೆ ಆಗಲಿಲ್ಲ ಎಂದು ಪ್ರಶ್ನಿಸಿದ್ರು. 

ವಿಪಕ್ಷದಲ್ಲಿ ಇದ್ದಾಗ ಸುಮ್ಮನೆ ಪುಕ್ಸಟೆ ಭಾಷಣ ಮಾಡೋದ್ರಿಂದ ಪ್ರಯೋಜನವಿಲ್ಲ.  ನಾವೇನು‌ ಪುಕ್ಸಟೆ ಸಿಕ್ತಿವಾ ಅವರಿಗೆ .ಒಂದೇ ಒಂದು ದಿನ ಹೋಗಿ ಪಾರ್ಲಿಮೆಂಟ್ ನಲ್ಲಿ ಮಾತನಾಡಿಲ್ಲ ಇವರಿಗೆ ನಾಚಿಕೆ ಆಗಬೇಕು ಎಂದ ಸಚಿವರು ಕಾನೊನು ತಜ್ಞರನ್ನು ಇಟ್ಟುಕೊಂಡು ಜನರ ಪರವಾಗಿ ಏನೇನು ಕೆಲಸ ಮಾಡಬೇಕೋ ಮಾಡ್ತೀನಿ ಎಂದರು