ಕುವೆಂಪು ವಿವಿ ಕುಲಪತಿಗೆ ಮುತ್ತಿಗೆ ! ಎನ್​ಎಸ್​ಯುಐ ಪ್ರತಿಭಟನೆ ! ಕಾರಣವೇನು?

NSUI protest at Kuvempu University What is the reason?

ಕುವೆಂಪು ವಿವಿ ಕುಲಪತಿಗೆ ಮುತ್ತಿಗೆ ! ಎನ್​ಎಸ್​ಯುಐ ಪ್ರತಿಭಟನೆ ! ಕಾರಣವೇನು?

KARNATAKA NEWS/ ONLINE / Malenadu today/ Jul 7, 2023 SHIVAMOGGA NEWS 

ಶಿವಮೊಗ್ಗ ದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಇವತ್ತ ಎನ್​​ಎಸ್​​ಯುಐ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು . ಕುಲಪತಿ ಪ್ರೊ.ವೀರಭದ್ರಪ್ಪನವರಿಗೆ ವಿದ್ಯಾರ್ಥಿಗಳು ಮುತ್ತಿಗೆ ಹಾಕಿದರು. ಕುಲಪಿತಗಳ ಕಾರು ಕುವೆಂಪು ಶತಮಾನೋತ್ಸವ ಭವನದ‌ಆಡಳಿತ ಕಚೇರಿಗೆ ಬರುತ್ತಲೇ ಘೋಷಣೆ ಕೂಗಿದ ವಿದ್ಯಾರ್ಥಿಗಳು, ದಿಕ್ಕಾರ ಕೂಗಿದರಷ್ಟೆ ಅಲ್ಲದೆ ವೀರಭದ್ರಪ್ಪರವರಿಗೆ ಮುತ್ತಿಗೆ ಹಾಕಿದರು. 

ಇದಕ್ಕೂ ಮೊದಲು ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಅವ್ಯವಸ್ಥೆ ಸರಿಪಡಿಸಬೇಕು ಮತ್ತು ಅಕ್ರಮ ತಡೆಗಟ್ಟಬೇಕೆಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ ಎಸ್ ಯು ಐ)  ಪ್ರತಿಭಟನೆ ನಡೆಸಿತು. ರಾಜ್ಯದಲ್ಲಿ ಕುವೆಂಪು ವಿವಿಗೆ ಒಳ್ಳೆಯ ಹೆಸರಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವಿವಿಯಲ್ಲಾಗುತ್ತಿರುವ ಅಹಿತಕರ ಬೆಳವಣಿಗೆಗಳಿಂದ ವಿವಿ ಗೌರವಕ್ಕೆ ಧಕ್ಕೆಯಾಗುತ್ತಿರುವುದಲ್ಲದೆ, ವಿದ್ಯಾರ್ಥಿಗಳ ಅಭ್ಯುದಯಕ್ಕೆ ಆತಂಕವಾಗುತ್ತಿದೆ ಎಂದು ಎನ್​ಎಸ್​ಯು ಐ ಆರೋಪಿಸಿದೆ. ಈ ಮೊದಲೆ ಮೂರು-ನಾಲ್ಕು ಬಾರಿ ಇದೇ ವಿಷಯವಾಗಿ ತಮಗೆ ಮನವಿಯನ್ನು ಸಹ ನೀಡಿದ್ದೇವೆ ತಾವುಗಳು ನಮ್ಮ ಯಾವುದೇ ಬೇಡಿಕೆಗಳನ್ನು ಈಡೇರಿಸದಿರುವುದ್ಲು ಸಾಕಷ್ಟು ಅನುಮಾನಕ್ಕೆ ದಾರಿಮಾಡಿಕೊಟ್ಟಂತಾಗಿದೆ

ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ, ಪೀಠೋಪಕರಣಗಳ ಕೊರತೆ ಇದೆ,  ದುರಸ್ತಿಗೆ ಬಿದ್ದಿರುವ ಜೆರಾಕ್ಸ್ ಯಂತ್ರಗಳ ಕೊರತೆ, ಗ್ರಂಥಾಲಯದಲ್ಲಿ ಪುಸ್ತಕಗಳ ಕೊರತೆ  ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಕಟ್ಟಡ ದುರಸ್ಥಿ ಇದ್ದು ತರಗತಿಯಲ್ಲಿ ವಿದ್ಯಾರ್ಥಿಗಳು ಪಾಠ ಪ್ರವಚನಗಳಿಗೆ ಗಮನ ಕೊಡಲು ಸಾಧ್ಯವಾಗುತಿಲ್ಲ ಎಂದು ಆರೋಪಿಸಿದೆ. ಕೂಡಲೆ ಕುಲಪತಿಗಳು ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಬೇಕು ಈಡೇರಿಸದಿದ್ದಲಿ ್ಲ  ವಿ ವಿ ಯ ಎಲ್ಲಾ ವಿಧ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನೆಡೆಸಲಾಗುವುದು ಎಂದು ಸಂಘಟನೆಯ ಮುಖಂಡರು ಎಚ್ಚರಿಸಿದ್ದಾರೆ. 


ಮಳೆಗೆ ಹೊತ್ತಿಕೊಳ್ಳದ ಬೆಂಕಿ! ಅಂತ್ಯಕ್ರಿಯೆ ಅತಂತ್ರ! ತೀರ್ಥಹಳ್ಳಿಯಲ್ಲಿ ಪ್ರತಿವರ್ಷ ಇದೆಂಥಾ ಅವಸ್ಥೆ ?

ತೀರ್ಥಹಳ್ಳಿ/ ಮಲೆನಾಡಲ್ಲಿ ಮಳೆ ಬರದಿರುವುದು ಇದುವರೆಗಿನ ಒಂದು ಸುದ್ದಿಯಾದರೇ, ಮಳೆಗಾಲ ಮುಗಿಯುವರೆಗೂ ಅಂತ್ಯಸಂಸ್ಕಾರ ಮಾಡುವುದೇ ಮಳೆಗಾಲದ ದೊಡ್ಡ ಸಮಸ್ಯೆಯ ಸುದ್ದಿ. ಇದಕ್ಕೆ ಸಾಕ್ಷಿ ಎಂಬಂತೆ ಇವತ್ತು ಕೋಣಂದೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ದೊಡ್ಡ ಕೆರೆ ಗ್ರಾಮದಲ್ಲಿರುವ ಸ್ಮಶಾನದಲ್ಲಿ  ವ್ಯಕ್ತಿಯೊಬ್ಬರ ಅಂತ್ಯ ಕ್ರಿಯೆ ನಡೆಸಲು ಸಂಬಂಧಿಕರು ಇನ್ನಿಲ್ಲದ ತ್ರಾಸ ಪಡಬೇಕಾದ ಸನ್ನಿವೇಶ ಎದುರಾಗಿತ್ತು. ಇಲ್ಲಿನ  ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸಶ್ಮಾನವೇನೋ ಇದೆ. ಅಂತ್ಯಕ್ರಿಯೆಗೆ ಮಂಟಪದ ಮಾದರಿಯಲ್ಲಿ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಆದರೆ  ಮೇಲ್ಚಾವಣಿಯ ಶೀಟುಗಳು ಹಾರಿ ಹೋಗಿದ್ದು, ಮಳೆಯ ನೀರು ಚಿತೆಯ ಮೇಲೆಯೇ ದೋ ಅಂತಾ ಬೀಳುತ್ತಿದೆ. ಇದರ ನಡುವೆ ಅಂತ್ಯಕ್ರಿಯೆ ಮಾಡಬೇಕಾದ ಸನ್ನಿವೇಶ ಎದುರಾಗಿತ್ತು. ಇವತ್ತು ಎಂತಹ ಅವಸ್ಥೆಯಾಗಿತ್ತು ಎಂಬುದನ್ನ ಹೇಳತೀರದು ಎಂದು ಮೃತರ ಕಡೆಯವರು ನೊಂದು ಕೊಂಡು ಹೇಳುತ್ತಿದ್ದಾರೆ. ಸ್ಮಶಾನದಲ್ಲಿ ಸೂಕ್ತ ವ್ಯವಸ್ಥೆ ಹಾಗೂ ನಿರ್ವಹಣೆ ಇಲ್ಲದೆ ಇರುವುದರಿಂದ ಈ ರೀತಿ ಸಮಸ್ಯೆ ಆಗಿದೆ..ಮಲೆನಾಡ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಜೋರಾಗಿ ಸುರಿಯುವ ಮಳೆಯಲ್ಲಿಯೇ ಮೃತರ ಅಂತ್ಯಸಂಸ್ಕಾರ ನಡೆಸಲಾಗಿದೆ.  ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಜನರಿಗೆ  ಎದುರಾಗಿರುವ ಸಮಸ್ಯೆಯನ್ನು ಬಗೆಹರಿಸಿ ಸ್ಮಶಾನಕ್ಕೆ ಸರಿಯಾದ ವ್ಯವಸ್ಥೆ ಮಾಡಿ ಕೊಡುತ್ತಾರ ಕಾದು ನೋಡಬೇಕಿದೆ.