KARNATAKA NEWS/ ONLINE / Malenadu today/ Aug 24, 2023 SHIVAMOGGA NEWS
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ನಂದಿತಾವರೆ ಗ್ರಾಮದ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣವೊಂದರ ಸಂಬಂಧ ಶಿವಮೊಗ್ಗ ಮೂಲದ ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ. ಮೂವರು ಹಣ್ಣಿನ ವ್ಯಾಪಾರಿಗಳಾಗಿದ್ದು, ಆರೋಪಿಗಳ ವಿರುದ್ಧ ಗುರುತರ ಆಪಾದನೆಯು ಕೇಳಿಬಂದಿದೆ.
ಬಂಧಿತರು
ಹಣ್ಣಿನ ವ್ಯಾಪಾರಿಗಳಾದ ಮಹಮ್ಮದ ಕರೀಂ ಅಲಿಯಾಸ್ ಕರೀಂ (22), ಮಹಮ್ಮದ್ ಹಬಾಜ್ ಅಲಿಯಾಸ್ ಶಾಬಾ (21) ಮತ್ತು ತಬ್ರೇಜ್ ಅಹಮ್ಮದ್ (36)
ಆರೋಪಿಗಳಿಂದ ಬೆಲೆಬಾಳುವ ಬಂಗಾರ ವಶ
ಆರೋಪಿಗಳಿಂದ 38 ಗ್ರಾಂ ತೂಕದ ಸುಮಾರು 1,90,000 ಬೆಲೆ ಬಾಳುವ ಬಂಗಾರದ ಆಭರಣಗಳು, ₹3,000 ಬೆಲೆ ಬಾಳುವ ಬೆಳ್ಳಿಯ ಉಡುದಾರ ಮತ್ತು ಕೃತ್ಯಕ್ಕೆ ಉಪಯೋಗಿಸಿದ 2 ಆಟೋಗಳು, 2 ಮೊಬೈಲ್ ಗಳು ಹಾಗೂ ಕಬ್ಬಿಣದ ರಾಡನ್ನು ಅಮಾನತ್ತು ಪಡಿಸಿಕೊಂಡಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
ಏನಾಗಿತ್ತು.
ಆ.11 ರಂದು ರಾತ್ರಿ ಕಳ್ಳರು ಹರಿಹರ ತಾಲ್ಲೂಕಿನ ನಂದಿತಾವರೆ ಗ್ರಾಮದ ನಾಗಮ್ಮ ಮನೆ ಬೀಗವನ್ನು ಮುರಿದು ಒಳ ಪ್ರವೇಶ ಮಾಡಿ, ಮನೆಯಲ್ಲಿದ್ದ 10,000 ರೂ ನಗದು ಹಣ ಹಾಗೂ 2,16,000 ರೂ. ಬೆಲೆಯ ಬೆಳ್ಳಿ-ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.
ಇನ್ನಷ್ಟು ಸುದ್ದಿಗಳು
ಗಾಂಧೀಜಿ ಪ್ರತಿಮೆ ಧ್ವಂಸ! ಆರೋಪಿಗಳ ಪತ್ತೆಗೆ ಮೂರು ಟೀಂ! ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?ಉದ್ಯೋಗಕ್ಕಾಗಿ ಹುಡಕಾಡ್ತಿದ್ದೀರಾ?
ಇಲ್ಲಿದೆ ಅವಕಾಶ! ವಿದ್ಯಾರ್ಹತೆ ಎಸ್ಎಸ್ಎಲ್ಸಿ-ಪದವಿ! ಪೂರ್ತಿ ವಿವರ ಇಲ್ಲಿದೆ
ಶಿವಮೊಗ್ಗ ನಗರದ ಈ ಪ್ರಮುಖ ಭಾಗಗಳಲ್ಲಿ ದಿನವಿಡಿ ಇರೋದಿಲ್ಲ ವಿದ್ಯುತ್! ಯಾವಾಗ? ಎಲ್ಲೆಲ್ಲಿ ? ವಿವರ ಇಲ್ಲಿದೆ