KARNATAKA NEWS/ ONLINE / Malenadu today/ Nov 16, 2023 SHIVAMOGGA NEWS
Shivamogga | Malnenadutoday.com | ಶಿವಮೊಗ್ಗ ಜಿಲ್ಲೆ ಗಾಜನೂರು ಅಂಗಡಿಯೊಂದರಲ್ಲಿ ಕನ್ನ ಹಾಕಿದ ಕಳ್ಳರು, ಅಂಗಡಿಯಲ್ಲಿದ್ದ 2 ಕೇಸ್ ಕಿಂಗ್ಫಿಶರ್ ಬಿಯರ್ ಕದ್ದೊಯ್ದ ಘಟನೆ ಬಗ್ಗೆ ವರದಿಯಾಗಿದೆ.
ಈ ಸಂಬಂಧ ತುಂಗಾನಗರ ಪೊಲೀಸ್ ಸ್ಟೇಷನ್ ನಲ್ಲಿ IPC 1860 (U/s-380,457) ಅಡಿಯಲ್ಲಿ ಎಫ್ಐಆರ್ FIR ದಾಖಲಾಗಿದೆ
ಏನಿದು ಕೇಸ್
ಕಳೆದ 10 ನೇ ತಾರೀಖು ನಡೆದ ಘಟನೆ ಸಂಬಂಧ ದೂರು ದಾಖಲಾಗಿದ್ದು ಅದರ ಪ್ರಕಾರ ನೋಡುವುದಾದರೆ, ಆರೋಪಿಗಳು ಇಲ್ಲಿನ MSIL ಅಂಗಡಿಯೊಂದರ ಬೀಗ ಮುರಿದು ಒಳಕ್ಕೆ ನುಗ್ಗಿದ್ದಾರೆ. ಬಳಿಕ ಅಲ್ಲಿದ್ದ ಸಿಸಿಟಿವಿ ಡಿವಿಆರ್ಗಳನ್ನ ಕದ್ದ ಕಳ್ಳರು ಬಳಿಕ 2 ಕೇಸ್ ಕಿಂಗ್ಫಿಷರ್ ಬಿಯರ್ ಬಾಕ್ಸ್ ಕದ್ದು ಪರಾರಿಯಾಗಿದ್ದಾರೆ.ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ