KARNATAKA NEWS/ ONLINE / Malenadu today/ Nov 15, 2023 SHIVAMOGGA NEWS
Shivamogga | Malnenadutoday.com | ಶಿವಮೊಗ್ಗ ಪೊಲೀಸರು ಮಲ್ಲನ ಹತ್ಯೆ ಕೇಸ್ ಸಂಬಂಧ ಮತ್ತೊಂದು ಸುದ್ದಿಕೊಟ್ಟಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲಾ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೊದಲು ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
READ : ಮಲ್ಲನ ಕೊಲೆ ಪ್ರಕರಣ | ನಾಲ್ವರು ಅರೆಸ್ಟ್ ! | SP ಮಿಥುನ್ ಕುಮಾರ್ ಹೇಳಿದ್ದೇನು?
ಮಲ್ಲ ಅಲಿಯಾಸ್ ಮಲ್ಲೇಶ್ನ ಪ್ರೀತಿಯ ಕಿರುಕುಳಕ್ಕೆ ಸ್ವಾತಿ ಎಂಬಾಕೆ ಸಾವನ್ನಪ್ಪಿದ್ದಳು. ಆತ್ಮಹತ್ಯೆ ಮಾಡಿಕೊಂಡಿದ್ದ ಆಕೆ, ಡೆತ್ನೋಟ್ನಲ್ಲಿ ಮಲ್ಲೇಶ್ ಕಾರಣ ಎಂದು ಬರೆದಿದ್ದಳು. ಈಕೆಯ ಸಾವಿನಿಂದ ನೊಂದಿದ್ದ ಸಹೋದರರು ಅಂದೇ ಮಲ್ಲೇಶ್ನನ್ನ ಮುಗಿಸುವುದಾಗಿ ಶಪಥ ಮಾಡಿದ್ದರಂತೆ. ಅದರಂತೆ ನಿನ್ನೆ ಮಲ್ಲೇಶ್ ಆರೋಪಿಗಳಿಗೆ ಸೈಟ್ ಆಗಿದ್ದಾನೆ. ಆತನ ಚಲನವಲನ ಗಮನಿಸಿ ಆರೋಪಿಗಳು ಚಿಕ್ಕಲ್ನಲ್ಲಿ ಮಲ್ಲೇಶ್ನನ್ನ ಹೊಡೆದು ಹಾಕಿದ್ದರು..
READ : ಮಲ್ಲನ ಲವ್ ಸ್ಟೋರಿ ಮತ್ತು ಪಾತಾಳಿ ರಿವೆಂಜ್! ವಿದ್ಯಾನಗರ, ಗಾಂಧಿಬಜಾರ್, ಚಿಕ್ಕಲ್! ನಿನ್ನೆಯಿಡಿ ನಡೆದಿದ್ದೇನು?
ಪ್ರಕರಣ ದಾಖಲಿಸಿದ್ದ ಶಿವಮೊಗ್ಗ ಪೊಲೀಸರು ವಿಶೇಷ ತಂಡದ ಮೂಲಕ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಶ್ರೇಯಸ್ ಅಲಿಯಾಸ್ ಪಾತಾಳಿ, ಕಾರ್ತಿಕ್, ಸೇರಿದಂತೆ ಏಳು ಮಂದಿಯನ್ನ ಅರೆಸ್ಟ್ ಮಾಡಿದ್ದಾರೆ. ಇವರ ಬಗ್ಗೆ ಇನ್ನಷ್ಟು ವಿಚಾರ ಬಯಲಿಗೆ ಬರಬೇಕಿದೆ.