ಮೊಬೈಲ್‌ ನುಂಗಿದ ಶಿವಮೊಗ್ಗ ಜೈಲಿನ ಕೈದಿ ಯಾರು ಗೊತ್ತಾ? ಏನಿದು ಹೊಟ್ಟೆಯಲ್ಲಿ ರಿಂಗಾ..ರಿಂಗಾ ಸ್ಟೋರಿ

Do you know who is the inmate of Shimoga jail who swallowed the mobile phone? Shimoga Central Jail, Sogane Jail, Pingara Bar, Victoria Hospital Bangalore, Parappana Agrahara Jail,

ಮೊಬೈಲ್‌ ನುಂಗಿದ ಶಿವಮೊಗ್ಗ  ಜೈಲಿನ ಕೈದಿ ಯಾರು ಗೊತ್ತಾ? ಏನಿದು ಹೊಟ್ಟೆಯಲ್ಲಿ ರಿಂಗಾ..ರಿಂಗಾ ಸ್ಟೋರಿ
mobile phone, Shimoga Central Jail, Sogane Jail, Pingara Bar, Victoria Hospital Bangalore, Parappana Agrahara Jail,

SHIVAMOGGA | MALENADUTODAY NEWS | May 4, 2024  

ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿನ ಕೈದಿಯೊಬ್ಬ ಮೊಬೈಲ್‌ ನುಂಗಿದ ಸ್ಟೋರಿಯೊಂದು ಹರಿದಾಡುತ್ತಿದೆ. ಅದರ ವಿವರವನ್ನು ಮಲೆನಾಡು ಟುಡೆ ಪಡೆದುಕೊಂಡಿದೆ. ನಿಮಗೆಲ್ಲಾ ಈ ಹಿಂದೆ ಬಿಹೆಚ್‌ ರಸ್ತೆ ಪಿಂಗಾರ ಬಾರ್‌ ಸಮೀಪ ನಡೆದ ಕೊಲೆ ಪ್ರಕರಣವೊಂದು ನೆನಪಿರಬಹುದು. ಅದರ ಆರೋಪಿ ಪರಶುರಾಮ ಮೊಬೈಲ್‌ ನುಂಗಿದ ಕೈದಿ ಕಥೆಯ ಹೀರೋ.. ಕಳೆದ ಮಾರ್ಚ್‌ ತಿಂಗಳಿನಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ಶಿವಮೊಗ್ಗ ಪೊಲೀಸರ ರೇಡ್‌ ನಡೆದಿತ್ತು. ಚುನಾವಣಾ ಹಿನ್ನೆಲೆಯಲ್ಲಿ ಶಿವಮೊಗ್ಗ ಎಸ್‌ಪಿ ನೇತೃತ್ವದಲ್ಲಿ ಈ ರೇಡ್‌ ನಡೆದಿತ್ತು. ಆದರೆ ರೇಡ್‌ ನಲ್ಲಿ ಬೀಡಿ ಬೆಂಕಿಪೊಟ್ಟಣ ಬಿಟ್ರೆ ಬೇರೆನು ಸಿಕ್ಕಿರಲಿಲ್ಲ. 

 

ಇದಾದ ಕೆಲದಿನಗಳ ನಂತರ ಅಂದರೆ ಮಾರ್ಚ್‌ 28 ನೇ ತಾರೀಖು ಕೈದಿ ಪರಶುರಾಮ ಹೊಟ್ಟೆ ನೋವ್ತಿದೆ. ಕಲ್ಲು ನುಂಗಿಬಿಟ್ಟಿದ್ದೇನೆ ಸರ್‌ ಎಂದು ಜೈಲಿನ ಸಿಬ್ಬಂದಿಯ ಬಳಿ ತೋಡಿದ್ದಾನೆ. ವಿಪರೀತ ಹೊಟ್ಟೆನೋವಿನ ಕಾರಣಕ್ಕೆ ಆತನನ್ನ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವತ್ತು ಅಲ್ಲಿ ನಡೆದ ಸ್ಕ್ಯಾನಿಂಗ್‌ ಪರೀಕ್ಷೆಯಲ್ಲಿ ಆತನ ಹೊಟ್ಟೆಯೊಳಗೆ ಏನೋ ಕಲ್ಲು ರೀತಿಯ ವಸ್ತು ಇರುವುದು ಗೊತ್ತಾಗಿತ್ತು.  ಹೀಗಾಗಿ ಆತನನ್ನ ಹೈಯರ್‌ ಸೆಂಟರ್‌ಗೆ ರೆಫರ್‌ ಮಾಡಲಾಗಿತ್ತು. ಪ್ರಕ್ರಿಯೆಗಳನ್ನ ಮುಗಿಸಿ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಪರಶು ರಾಮನನ್ನ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.  

 

ಏಪ್ರಿಲ್​​ 3ರಂದು ಬೆಂಗಳೂರು ಕೇಂದ್ರ ಕಾರಾಗೃಹದ ಹಿರಿಯ ಮುಖ್ಯ ವೈದ್ಯಾಧಿಕಾರಿ ಪರೀಕ್ಷಿಸಿ ಏಪ್ರಿಲ್​​ 6ರಂದು ವಿಕ್ಟೋರಿಯಾ ಆಸ್ಪತ್ರೆಗೆ ಅಡ್ಮಿಟ್​​ ಮಾಡಿದ್ದರು. ಸ್ಕ್ಯಾನಿಂಗ್​ ಮಾಡಿದಾಗ ಹೊಟ್ಟೆಯಲ್ಲಿ ಏನೋ ವಸ್ತು​ ಇರುವುದು ಪತ್ತೆಯಾಗಿದೆ. ಆನಂತರ ಆತನನ್ನ ಆಪರೇಷನ್‌ಗೆ ಒಳಪಡಿಸಿ ಹೊಟ್ಟೆಯಲ್ಲಿದ್ದ ವಸ್ತುವನ್ನ ಹೊರಕ್ಕೆ ತೆಗೆಯಲಾಗಿತ್ತು. ಆಗ ನೋಡಿದರೆ, ಆತನ ಹೊಟ್ಟೆಯಲ್ಲಿದ್ದಿದ್ದು ವಸ್ತುವಲ್ಲ, ಕಲ್ಲಲ್ಲ, ಮೊಬೈಲ್‌ ಆಗಿತ್ತು. 

 

ಹೆಬ್ಬೆರಳ ಗಾತ್ರದ ಮೊಬೈಲ್‌ ಬರುತ್ತದೆಯಂತೆ ಅಂತಹದ್ದೊಂದು ಮೊಬೈಲ್‌ನ್ನ ಪರಶುರಾಮ ಇಟ್ಕೊಂಡಿದ್ದ. ರೇಡ್‌ಗೆ ಹೆದರಿ ಅದನ್ನ ನುಂಗಿಬಿಟ್ಟಿದ್ದ. ಆ ಬಳಿಕ ಇಷ್ಟೆಲ್ಲಾ ಪಜೀತಿ ಆಗಿದೆ. ಇದೀಗ ಕಾರಾಗೃಹ ಸಿಬ್ಬಂದಿಗೂ ಈತ ತಲೆನೋವು ತಂದಿಟ್ಟಿದ್ದಾನಷ್ಟೆ ಅಲ್ಲದೆ ತನ್ನ ಮೇಲೆ ಇನ್ನೊಂದು ಕೇಸ್‌ ಹಾಕಿಸಿಕೊಂಡಿದ್ದಾರೆ.