ಚಂದ್ರಗುತ್ತಿ ರೇಣುಕಾಂಬೆ ಸನ್ನಿಧಿಯಲ್ಲಿ ಹೊಸ್ತಿಲ ಹುಣ್ಣಿಮೆ / ಮುತ್ತೈದೆ ಹುಣ್ಣಿಮೆಯ ವಿಶೇಷತೆ ಏನು ಗೊತ್ತಾ? ಏಕೆ ಆಚರಿಸ್ತಾರೆ ತಿಳಿಯಿರಿ

ಹೊಸ್ತಿಲ ಹುಣ್ಣಿಮಗೆ ಹಲವು ಹೆಸರುಗಳಿವೆ , ಬಯಲು ಸೀಮೆಯಲ್ಲಿ ರಂಡೆ ಹುಣ್ಣಿಮೆ ಎಂದು ಕರೆಯುವ ಪ್ರತೀತಿ ಇದೆ, ಮತ್ತೆ ಕೆಲವೆಡೆ ಬನದ ಹುಣ್ಣಿಮೆ ಎನ್ನಲಾಗುತ್ತದೆ. ಜನಪದಗಳಲ್ಲಿ ಇದಕ್ಕಾಗಿ ಸಾಷಕ್ಟು ಕಥೆಗಳಿವೆ, ದವನದ ಹುಣ್ಣಿಮೆ ಎಂಬ ಪ್ರತೀತಿ ಇದೆ

ಚಂದ್ರಗುತ್ತಿ ರೇಣುಕಾಂಬೆ ಸನ್ನಿಧಿಯಲ್ಲಿ ಹೊಸ್ತಿಲ ಹುಣ್ಣಿಮೆ / ಮುತ್ತೈದೆ ಹುಣ್ಣಿಮೆಯ ವಿಶೇಷತೆ ಏನು ಗೊತ್ತಾ? ಏಕೆ ಆಚರಿಸ್ತಾರೆ ತಿಳಿಯಿರಿ
ಚಂದ್ರಗುತ್ತಿ ಶ್ರೀ ರೇಣುಕಾಂಬಾ ದೇವಿ

ಚಂದ್ರಗುತ್ತಿಯಲ್ಲಿ ಹೊಸ್ತಿಲ್ಲ ಹುಣ್ಣಿಮೆ :  ಶಿವಮೊಗ್ಗ   ಜಿಲ್ಲೆ (shivamogga suddi ) ಸೊರಬ ತಾಲ್ಲೂಕಿನಲ್ಲಿರುv ಪ್ರಸ್ತಿದ್ಧ ಚಂದ್ರಗುತ್ತಿ ಶ್ರೀರೇಣುಕಾಂಬೆ ದೇವಾಲಯದಲ್ಲಿ ನಿನ್ನೆ ಹೊಸ್ತಿಲ ಹುಣ್ಣಿಮೆ ವಿಶೇಷವಿತ್ತು. 

ಇದನ್ನು ಸಹ ಓದಿ : ಸ್ಕೂಲ್​​ನಿಂದ ಮನೆಗೆ ಹೋಗ್ತಿದ್ದವನಿಗೆ ದಾರೀಲಿ ಸಿಕ್ಕಿತು 25 ಸಾವಿರ ಮೌಲ್ಯದ ವಸ್ತು! ಅದರಿಂದಲೇ ವಿದ್ಯಾರ್ಥಿಗೆ ಲಭಿಸಿತು ಗೌರವ

ಈ ಹಿನ್ನೆಲೆಯಲ್ಲಿ  ಸೊರಬ, ಹಾನಗಲ್ಲ, ರಾಣೆಬೆನ್ನೂರು, ಹಿರೇಕರೂರು, ಬ್ಯಾಡಗಿ, ಶಿಕಾರಿಪುರ, ಹರಿಹರ, ದಾವಣಗರ, ವಿಜಯಪುರ, ಬಾಗಲಕೋಟೆ ಸೇರಿದಂತೆ ವಿವಿಧ ಪ್ರದೇಶಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ತೊಟ್ಟಿಲು ಬಾವಿಯ ಬಳಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದ ಭಕ್ತರು,  ಕುಟುಂಬ ಸಮೇತರಾಗಿ ಆಗಮಿಸಿ ಹರಕ ತೀರಿಸಿ, ಸಾಮೂಹಿಕ ಬೋಜನ ಮಾಡಿದ್ರು

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ಇಷ್ಟಕ್ಕೂ ಏನಿದು ಹೊಸ್ತಿಲ ಹುಣ್ಣಿಮೆ : ಜಮದಗ್ನಿ ಮಹರ್ಷಿಗಳ ಬಳಿಯಲ್ಲಿ ಇದ್ದ ಕಾಮದೇನುವನ್ನು ವಶಕ್ಕೆ ಪಡೆದುಕೊಳ್ಳಲು ಮುಂದಾಗಿದ್ದ ಕಾರ್ತವೀರ್ಯಾರ್ಜುನ ತನ್ನ ಸೈನ್ಯದ ಜೊತೆಗೆ ಬಂದು, ಜಮದಗ್ನಿ ಮಹರ್ಷಿಗಳಿಗೆ 21 ಬಾರಿ ಇರಿದು ಕೊಂದನಂತೆ. ಈ ವೇಳೇ ತಾಯಿ ರೇಣುಕಾದೇವಿ, ಅಳುತ್ತಾ ಪರಶುರಾಮನನ್ನ ಕೂಗಿದಳು. ಅಮ್ಮನ ಮೊರೆ ಕೇಳಿ ಬಂದ ಪರಶುರಾಮ, ಕಾರ್ಯವೀರ್ಯಾರ್ಜುನ ಬಳಿಯಲ್ಲಿಯೇ ಇದ್ದ ಅಮೃತ ಕುಂಡವನ್ನು ತಂದು ತಂದೆಯನ್ನು ಬದುಕಿಸಿಕೊಳ್ಳುತ್ತಾನೆ.  ತಾಯಿ ರೇಣಕಾಂಬೆ ವಿದವೆಯಾಗಿ ಮತ್ತೆ ಮುತ್ತೈದೆಯಾದ ದಿನವನ್ನು ಹೊಸ್ತಿಲ ಹುಣ್ಣಿಮೆ, ಬನದ ಹುಣ್ಣಿಮೆ, ರಂಡೆ ಹುಣ್ಣಿಮೆ ಇತ್ಯಾದಿಯಾಗಿ ಜನಪದವಾಗಿ ಜನಮಾನಸದಲ್ಲಿ ಉಳಿದಿದೆ.