ಸೀದಾ ಕೆರೆಗೆ ಉರುಳಿದ ಬಿದ್ದ ನಾಟಾ ಸಾಗಿಸುತ್ತಿದ್ದ ಲಾರಿ

The truck carrying a woods fell into the lake The incident took place near Dugur in Soraba taluk.

ಸೀದಾ ಕೆರೆಗೆ ಉರುಳಿದ ಬಿದ್ದ ನಾಟಾ ಸಾಗಿಸುತ್ತಿದ್ದ ಲಾರಿ

KARNATAKA NEWS/ ONLINE / Malenadu today/ Jun 2, 2023 SHIVAMOGGA NEWS

ನಾಟಾ ತುಂಬಿದ ಲಾರಿಯೊಂದು ಕೆರೆಗೆ ಉರುಳಿಬಿದ್ದ ಘಟನೆ ಸೊರಬ ತಾಲ್ಲೂಕಿನ ದೂಗೂರು ಸಮೀಪ ಸಂಭವಿಸಿದೆ.  ಘಟನೆಯಲ್ಲಿ ಚಾಲಕನಿಗೆ ಗಾಯಗಳಾಗಿವೆ. ನಿನ್ನೆ ಸಂಜೆ ಈ ಘಟನೆ ಸಂಭವಿಸಿದ್ದು, ದೂಗೂರು ರಸ್ತೆಯಲ್ಲಿ ಓಡಾಡುತ್ತಿದ್ದವರು, ಘಟನೆ ಬೆನ್ನಲ್ಲೆ ಚಾಲಕನನ್ನ ರಕ್ಷಿಸಿದ್ದಾರೆ. ಆತನನ್ನ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ನಡೆದಿದ್ದೇಗೆ ಘಟನೆ? 

ಸೊರಬ ಕಡೆಯಿಂದ ಸಾಗರದತ್ತ ನಾಟಾ ತುಂಬಿಕೊಂಡು ಲಾರಿ ಸಾಗುತ್ತಿತ್ತು. ಉಳುವಿ- ದೂಗೂರು ನಡುವೆ ಇರುವ ಕೆರೆಯ ಬಳಿಯಲ್ಲಿ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದೆ. ಸ್ಥಳಕ್ಕೆ ಸೊರಬ ಠಾಣೆ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. 

ಇದನ್ನು ಸಹ ಓದಿ :  ಚೀಲೂರು ಡಬ್ಬಲ್​ ಅಟ್ಯಾಕ್! ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲಿನ ದಾಳಿಯಲ್ಲಿ ಯಾರೆಲ್ಲಾ ಆರೋಪಿಗಳು ಗೊತ್ತಾ? ಫಿಟ್ ಆದನಾ ಹೆಬ್ಬೆಟ್ಟು ಮಂಜಾ?

ದಾವಣಗೆರೆ ಯಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ತಂದೆಯೇ ತನ್ನಿಬ್ಬರು ಅವಳಿ ಮಕ್ಕಳನ್ನ ಕೊಂದಿರುವ ಬಗ್ಗೆ ವರದಿಯಾಗಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಹತ್ತಿರ ಈ ಕೃತ್ಯವೆಸಗಿದ್ದು, ಆತ ದಾವಣಗೆರೆ ನಗರದ ಆಂಜನೇಯ ಬಡಾವಣೆ ನಿವಾಸಿಯಾಗಿದ್ಧಾನೆ. ನಾಲ್ಕು ವರ್ಷದ ನಾಲ್ಕು ತಿಂಗಳ ಮಕ್ಕಳು ಮೃತರಾಗಿದ್ದಾರೆ. 

ಇದನ್ನು ಸಹ ಓದಿ :  ಚೀಲೂರು ಡಬ್ಬಲ್​ ಅಟ್ಯಾಕ್! ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲಿನ ದಾಳಿಯಲ್ಲಿ ಯಾರೆಲ್ಲಾ ಆರೋಪಿಗಳು ಗೊತ್ತಾ? ಫಿಟ್ ಆದನಾ ಹೆಬ್ಬೆಟ್ಟು ಮಂಜಾ?

ಅಮರ್​ ಎಂಬಾತ  ಹರಿಹರದ ಕಾರ್ಗಿಲ್ ಫ್ಯಾಕ್ಟರಿಯಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಕೆಲಸ ಮಾಡುತ್ತಿದ್ಧಾನೆ.  ಈತ ವಿಜಯಪುರದ ಜಯಲಕ್ಷ್ಮಿ ಎಂಬಾಕೆಯನ್ನು ಮದುವೆಯಾಗಿದ್ದ, ಇವರಿಬ್ಬರಿಗೆ ಇಬ್ಬರು ಅವಳಿ ಮಕ್ಕಳು ಜನಿಸಿದ್ದರು. ಈ ಮಧ್ಯೆ ಪತ್ನಿ ವಿಜಯಲಕ್ಷ್ಮೀ ತವರಿಗೆ ಹೋಗಿದ್ದಾರೆ. ಗಂಡ ಹೆಂಡತಿ ನಡುವೆ ಯಾವ ಕಾರಣಕ್ಕೆ ವೈಮನಸ್ಯವಿತ್ತು ಎಂಬುದು ಸ್ಪಷ್ಟವಾಗಿಲ್ಲ.  ಮಕ್ಕಳು ಅಮರ್ ತಾಯಿ ಸಾವಿತ್ರಮ್ಮರ ಜೊತೆ ಇದ್ದರು. 

ಮೊಬೈಲ್​ ಕಳೆದುಕೊಂಡ ಬೆನ್ನಲ್ಲೆ ಅಕೌಂಟ್​ನಲ್ಲಿದ್ದ ಲಕ್ಷ ರೂಪಾಯಿನೂ ಮಾಯವಾಯ್ತು! ಹೀಗೂ ಮಾಡ್ತಾರೆ ಎಚ್ಚರ!

ಇದರ ನಡುವೆ ಅಜ್ಜಿ ಜೊತೆ ಮಲಗಿದ್ದ ಇಬ್ಬರು ಮಕ್ಕಳನ್ನ ತನ್ನ ಕಾರಿನಲ್ಲಿ ಕರೆದೊಯ್ದ ಅಮರ್​  ಚಳಗೇರಿ ಟೋಲ್ ಸಮೀಪ ಕರೆದುಕೊಂಡು ಹೋಗಿ ಸರ್ವಿಸ್ ರಸ್ತೆ ಯಲ್ಲಿ ಕಾರು ನಿಲ್ಲಿಸಿ ಮಕ್ಕಳಿಬ್ಬರಿಗೂ ಟಿಕ್ಸ್‌ ಟೇಪ್‌ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಆ ನಂತರ ಪತ್ನಿಗೆ ಫೋನ್ ಮಾಡಿ ಮಕ್ಕಳನ್ನು ಕೊಂದು ಹಾಕಿರುವುದಾಗಿ ತಿಳಿಸಿದ್ದಾನೆ.

ಆರ್​ಎಂ ಮಂಜುನಾಥ್​ ಗೌಡರಿಗೆ ಕೆಪಿಸಿಸಿಯಿಂದ ಸಿಕ್ತು ಮಹತ್ತರ ಜವಾಬ್ದಾರಿ!

ಸದ್ಯ ಪ್ರಕರಣ ಸಂಬಂಧ ಆರೋಪಿಯನ್ನು ದಾವಣಗೆರೆ ವಿದ್ಯಾನಗರ ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಅಲ್ಲದೆ ಮಕ್ಕಳು ಬುದ್ದಿ ಮಾಂದ್ಯರು ಎಂಬ ಕಾರಣಕ್ಕೆ ಈ ಕೃತ್ಯವೆಸಗಿರುವ ಬಗ್ಗೆ ಆತ ಪೊಲೀಸರಿಗೆ ತಿಳಿಸಿದ್ಧಾನೆ ಎನ್ನಲಾಗುತ್ತಿದೆ