ಸೊರಬ ತಾಲ್ಲೂಕಿನಲ್ಲಿ ಬಹಿಷ್ಕಾರದ ದೂರು! ಹಳ್ಳಿಗಳಲ್ಲಿ ಪೊಲೀಸ್ ಪಂಚಾಯಿತಿ! ಇಲಾಖೆ ನೀಡಿದ ಸೂಚನೆ ಏನೇನು ಗೊತ್ತಾ?

In Soraba taluka, police officials visited the spot and inspected it.

ಸೊರಬ ತಾಲ್ಲೂಕಿನಲ್ಲಿ ಬಹಿಷ್ಕಾರದ ದೂರು! ಹಳ್ಳಿಗಳಲ್ಲಿ ಪೊಲೀಸ್ ಪಂಚಾಯಿತಿ! ಇಲಾಖೆ ನೀಡಿದ ಸೂಚನೆ ಏನೇನು ಗೊತ್ತಾ?
ಸೊರಬ ತಾಲ್ಲೂಕಿನಲ್ಲಿ ಬಹಿಷ್ಕಾರದ ದೂರು! ಹಳ್ಳಿಗಳಲ್ಲಿ ಪೊಲೀಸ್ ಪಂಚಾಯಿತಿ! ಇಲಾಖೆ ನೀಡಿದ ಸೂಚನೆ ಏನೇನು ಗೊತ್ತಾ?

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ಜಿಲ್ಲೆ ಸೊರಬ ಪಟ್ಟಣದಲ್ಲಿ ಇತ್ತೀಚೆಗೆ ಪೊಲೀಸ್ ಇಲಾಖೆ ನಡೆಸಿದ್ದ ಜನಸಂಪರ್ಕ ಸಭೆಯಲ್ಲಿ 15ಕ್ಕೂ ಹೆಚ್ಚು ದೂರುಗಳು, ತಮ್ಮ ತಮ್ಮ ಊರುಗಳಲ್ಲಿ ಬಹಿಷ್ಕಾರ ಹಾಕಿರುವ ಬಗ್ಗೆ ಬಂದಿತ್ತು. ಈ ಸಂಬಂದ ಮಲೆನಾಡು ಟುಡೆ. ತಂಡ ಕೂಡ ಸುದ್ದಿ ಬರೆದಿತ್ತು. ಇದರ ಬೆನ್ನಲ್ಲೆ ಎಸ್​ಪಿ ಮಿಥುನ್​ಕುಮಾರ್​, ಬಹಿಷ್ಕಾರದ ದೂರು ಕೇಳಿಬಂದಿರುವ ಊರುಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದರು. ಅದರಂತೆ, ಶಿವಮೊಗ್ಗ ಪೊಲೀಸ್ ಇಲಾಖೆಯ ತಂಡ, ಸೊರಬ ತಾಲ್ಲೂಕಿನ  ಉಳವಿ, ಗುಡವಿ, ಮಳಲಗದ್ದೆ, ಕುದುರೆಗಣಿ ಮತ್ತು ಬರಗಿ  ಗ್ರಾಮಗಳಿಗೆ ಭೇಟಿ  ನೀಡಿದೆ. 

READ | ಎಸ್​ಪಿ ಜನಸಂಪರ್ಕ ಸಭೆಯಲ್ಲಿ ಬಹಿಷ್ಕಾರದ ದೂರು! ಸೊರಬದಲ್ಲಿ 15 ಕ್ಕೂ ಹೆಚ್ಚು ಕುಟುಂಬಕ್ಕೆ ನಿರ್ಬಂಧದ ಕಟ್ಟಳೆ ಏಕೆ? ಏನಿದು ವರದಿ?

ನಿನ್ನೆ  ಶಿವಾನಂದ ಮದರಕಂಡಿ, ಪೊಲೀಸ್ ಉಪಾಧೀಕ್ಷಕರು, ಶಿಕಾರಿಪುರ ಉಪ ವಿಭಾಗ ರವರ ನೇತೃತ್ವದಲ್ಲಿ,  ಭಾಗ್ಯವತಿ, ಪೊಲೀಸ್ ವೃತ್ತ ನಿರೀಕ್ಷಕರು, ಸೊರಬ ವೃತ್ತ ಮತ್ತು ನಾಗರಾಜ್ ಹೆಚ್,ಎನ್ ಪೊಲೀಸ್ ಉಪ ನಿರೀಕ್ಷಕರು, ಸೊರಬ ಪೊಲೀಸ್ ಠಾಣೆ ಹಾಗೂ ನಾಗರಾಜ್ ಅನ್ವೇಕರ್, ಸೊರಬ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳು, ಸಂಜಯ್ ವ್ಯವಸ್ಥಾಪಕ ನಿರ್ದೇಶಕರು ಸೊರಬ ತಾಲ್ಲೂಕು ಪಂಚಾಯತ್, ರವಿ ಚಂದ್ರ ಉಳವಿ ಪಿಡಿಒ, ಮಲ್ಲಮ್ಮ ಕಬ್ಬೂರ್ ಗುಡವಿ ಪಿಡಿಒ ಮತ್ತು ಗ್ರಾಮ ಲೆಕ್ಕಿಗರ ತಂಡ  ಉಳವಿ, ಗುಡವಿ, ಮಳಲಗದ್ದೆ, ಕುದುರೆಗಣಿ ಮತ್ತು ಬರಗಿ  ಗ್ರಾಮಗಳಿಗೆ ಭೇಟಿ  ನೀಡಿ ಸಾರ್ವಜನಿಕರ ಜೊತೆಗೆ ಸಭೆ ನಡೆಸಿದೆ. 

READ | Shivamogga City Assembly Constituency : ಬದಲಾಯ್ತು ಗುಜರಾತ್ ಮಾಡಲ್! ಶಿವಮೊಗ್ಗಕ್ಕೆ ಈಶ್ವರಪ್ಪರವರೇ ನಿಕ್ಕಿ? ಅತಿರಥ ಮಹಾರಥರ ನಡುವೆ ಟಿಕೆಟ್​ ಗೆದ್ದರೇ ಅನುಭವಿ ನಾಯಕ? JP EXCLUSIVE

ಊರಿನ ಅರಳಿಕಟ್ಟೆ, ದೇವಾಲಯ ಹಾಗೂ  ಪ್ರಮುಖ ಸ್ಥಳಗಳಲ್ಲಿ ಜನರೊಂದಿಗೆ ಸಮಸ್ಯೆ ಹಾಗೂ ವಿಚಾರ ಕಲೆಹಾಕಿದ ಪೊಲೀಸ್ ಅಧಿಕಾರಿಗಳು,  ಬಗರ್ ಹುಕುಂ , ಗೋಮಾಳ ಮತ್ತು ಇತರೆ ಜಮೀನು ವ್ಯಾಜ್ಯಗಳಿಗೆ ಕುರಿತಂತೆ ಗ್ರಾಮಸ್ಥರು ಮತ್ತು ಕೆಲವು ಕುಟುಂಬಗಳ ಮದ್ಯೆ  ಬಿನ್ನಾಭಿಪ್ರಾಯವಿರುವುದನ್ನು ಗಮನಿಸಿದ್ದಾರೆ. ಅಲ್ಲದೆ ಈ ರೀತಿಯ ಬಹಿಷ್ಕಾರದಂತಹ ಘಟನೆಗಳು ಆಗಬಾರದು ಎಂದು ಗ್ರಾಮಸ್ಥರು, ಗ್ರಾಮ ಸಮಿತಿ ಸದಸ್ಯರು ಮತ್ತು ಮುಖಂಡರುಗಳ ಸಭೆ ನಡೆಸಿ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದ್ದಾರೆ. 

  • 1) ಮನುಷ್ಯ ಸಂಘ ಜೀವಿಯಾಗಿರುವುದರಿಂದ ಗ್ರಾಮಗಳಲ್ಲಿ ಎಲ್ಲಾ ಗ್ರಾಮಸ್ಥರು  ಒಟ್ಟಾಗಿ ಸಹಬಾಳ್ವೆಯಿಂದ ಇರುವುದರಿಂದ ಸಮಾಜದಲ್ಲಿ ಶಾಂತಿ ಮತ್ತು  ನೆಮ್ಮದಿಯಿಂದಿರಲು ಸಾಧ್ಯವಿರುತ್ತದೆ.
  • 2) ಗ್ರಾಮಗಳಲ್ಲಿ ಗ್ರಾಮಸ್ಥರು ಕೆಲವು ಕುಟುಂಬಗಳಿಗೆ ನಿಬಂಧನೆಗಳನ್ನು ಹಾಕುವುದು ಮತ್ತು ದಂಡ ವಿಧಿಸುವುದು ಒಂದು ಸಾಮಾಜಿಕ ಪಿಡುಗಾಗಿದ್ದು, ಈ ರೀತಿ ಮಾಡುವುದು ಕಾನೂನು ರೀತ್ಯಾ ಅಪರಾಧವಾಗಿದ್ದು, ಈ ರೀತಿಯ ಯಾವುದೇ ಪ್ರಕರಣಗಳು ವರದಿಯಾದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈ ಗೊಳ್ಳಲಾಗುತ್ತದೆ.
  • 3) ಗ್ರಾಮ / ಕುಟುಂಬಗಳ ಮಧ್ಯೆ ಬಗರ್ ಹುಕುಂ, ಗೋಮಾಳ ಮತ್ತು ಇತರೆ ಜಮೀನು ವ್ಯಾಜ್ಯಗಳಿಗೆ ಕುರಿತಂತೆ ಯಾವುದೇ  ವ್ಯಾಜ್ಯಗಳು /  ಬಿನ್ನಾಭಿಪ್ರಾಯಗಳಿದ್ದಲ್ಲಿ ಗ್ರಾಮಗಳಲ್ಲಿ ನಿಬಂಧನೆಗಳನ್ನು ವಿಧಿಸದೇ ನ್ಯಾಯಾಲಯದ ಮೊರೆ ಹೋಗಿ / ಸಂಬಂಧಪಟ್ಟ ಇಲಾಖೆಗಳ ಮುಖಾಂತರ ಕಾನೂನು ರೀತ್ಯವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು. 
  • 4) ಗ್ರಾಮಸ್ಥರು ಯಾವುದೇ ರೀತಿಯ ಸಮಸ್ಯೆ ಇದ್ದಲ್ಲಿ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳ ಪಿಎಸ್ಐ / ಪಿಐ ರವರನ್ನು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಭೇಟಿ ಮಾಡುವುದು ಅಥವಾ ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿರುತ್ತದೆ.
  • 5) ಯಾವುದೇ ತುರ್ತು ಸಂದರ್ಭದಲ್ಲಿ  ಸಹಾಯಕ್ಕಾಗಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ / 112 ಸಹಾಯವಾಣಿ / ಕಂಟ್ರೋಲ್ ರೂಮ್ ಗೆ ಸಂಪರ್ಕಿಸಿ ಸಹಾಯವನ್ನು ಪಡೆಯ ಬಹುದಾಗಿರುತ್ತದೆ ಎಂದು ತಿಳಿಸಿರುತ್ತಾರೆ.

READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!