ಸೊರಬ ದ್ಯಾಮವ್ಯ, ಸಾಗರ ಮಾರಿಕಾಂಬೆಯ ದರ್ಶನ ಪಡೆದು ಹಾಡಿ ನಲಿದ ಶಿವಣ್ಣ! ದೇಣಿಗೆ ಕೊಟ್ಟು ಶಿವಮೊಗ್ಗದ ಬಾಂಧವ್ಯ ಕೊಂಡಾಡಿದ ಬಂಗಾರಪ್ಪರ ಅಳಿಯಂದಿರು

Actor Shivarajkumar visits Soraba Dyamavva, Sagara Marikambe

ಸೊರಬ ದ್ಯಾಮವ್ಯ, ಸಾಗರ ಮಾರಿಕಾಂಬೆಯ ದರ್ಶನ ಪಡೆದು ಹಾಡಿ ನಲಿದ ಶಿವಣ್ಣ! ದೇಣಿಗೆ ಕೊಟ್ಟು ಶಿವಮೊಗ್ಗದ ಬಾಂಧವ್ಯ ಕೊಂಡಾಡಿದ ಬಂಗಾರಪ್ಪರ ಅಳಿಯಂದಿರು
ಸೊರಬ ದ್ಯಾಮವ್ಯ, ಸಾಗರ ಮಾರಿಕಾಂಬೆಯ ದರ್ಶನ ಪಡೆದು ಹಾಡಿ ನಲಿದ ಶಿವಣ್ಣ! ದೇಣಿಗೆ ಕೊಟ್ಟು ಶಿವಮೊಗ್ಗದ ಬಾಂಧವ್ಯ ಕೊಂಡಾಡಿದ ಬಂಗಾರಪ್ಪರ ಅಳಿಯಂದಿರು
ಸೊರಬ ದ್ಯಾಮವ್ಯ, ಸಾಗರ ಮಾರಿಕಾಂಬೆಯ ದರ್ಶನ ಪಡೆದು ಹಾಡಿ ನಲಿದ ಶಿವಣ್ಣ! ದೇಣಿಗೆ ಕೊಟ್ಟು ಶಿವಮೊಗ್ಗದ ಬಾಂಧವ್ಯ ಕೊಂಡಾಡಿದ ಬಂಗಾರಪ್ಪರ ಅಳಿಯಂದಿರು

ಶಿವಮೊಗ್ಗ  ಜಿಲ್ಲೆಗೆ ಮತ್ತೆ ನಿನ್ನೆ ಶಿವರಾಜ್ ಕುಮಾರ್ ಭೇಟಿಕೊಟ್ಟಿದ್ದರು. ಈ ಸಲ ಯಾವುದೇ ಸಿನಿಮಾ ಪ್ರಮೋಶನ್​ಗಾಗಿ ಅವರು ಭೇಟಿ ನೀಡಿರಲಿಲ್ಲ. ಬದಲಾಗಿ, ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಕುಬಟೂರಿನ ದ್ಯಾಮವ್ವ ಜಾತ್ರೆ ಹಾಗೂ ಸಾಗರ ತಾಲ್ಲೂಕಿನ ಮಾರಿಜಾತ್ರೆ ನೋಡಲು ಶಿವಣ್ಣ ಬಂದಿದ್ದರು. 

ರಾಜ್ಯದ ಕೊಡಗು-ಕೇರಳ ಬಾರ್ಡರ್​ನಲ್ಲಿ ಮತ್ತೆ ಪ್ರತ್ಯಕ್ಷವಾದ ನಕ್ಸಲ್​​ ತಂಡ

ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬೆ ಜಾತ್ರೆಗೆ ಆಗಮಿಸಿದ ಅವರು ಮತ್ತು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಮಧುಬಂಗಾರಪ್ಪ ತಾಯಿಯ ದರ್ಶನ ಪಡೆದರು, ಈ ವೇಳೇ  ಶಿವಣ್ಣನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಹಲವರು ಶಿವಣ್ಣರ ಜೊತೆ ಸೆಲ್ಪಿ ಕ್ಲಿಕ್ಕಿಸಿದರೇ , ಶಿವಣ್ಣರವರು ಸಹ ಮಾರಿಕಾಂಬೆಯ ದರ್ಶನ ಪಡೆದು, ಅಭಿಮಾನಿಗಳ ಜೊತೆ ಸಂಭ್ರಮ ಹಂಚಿಕೊಂಡರು. ಶಿವಮೊಗ್ಗ ಜಿಲ್ಲೆಗೆ ಬಂದಾಗ ತಮಗಾಗುವ ಆಪ್ತ ಅನುಭವವನ್ನು ಹಂಚಿಕೊಂಡರ ಅವರು, ಈ ತಾಯಿಯ ಜಾತ್ರೆಯಲ್ಲಿ ನನ್ನದೊಂದು ಅಳಿಲು ಸೇವೆಯಿದೆ. ಆ ಸೇವೆಯು ತಾಯಿಗೆ ಸಲ್ಲಲ್ಲಿ, ಅದರಿಂದ ನಾಲ್ಕು ಜನರಿಗೆ ಒಳ್ಳೆಯದಾಗಲಿ ಎಂದರು. 

ಬಂಗಾರಪ್ಪರ ಅಳಿಯಂದಿರಿಂದ ತಲಾ 5 ಲಕ್ಷ ರೂಪಾಯಿಗೆ ದೇಣಿಗೆ

ಇನ್ನೂ ಸೊರಬ ತಾಲ್ಲೂಕಿನ  ಆನವಟ್ಟಿ ಸಮೀಪದ ಕುಬಟೂರಿನಲ್ಲಿ ನಡೆಯುತ್ತಿರುವ  ದ್ಯಾಮವ್ವದೇವಿ ಜಾತ್ರೆಗೂ ಶಿವಣ್ಣ ಭೇಟಿಕೊಟ್ಟಿದ್ದರು. ಅವರಷ್ಟೆ ಅಲ್ಲದೆ  ಟಿಪಿಎಂಎಲ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ತಿಲಕ್ ಕುಮಾರ್ ಸಹ ಭೇಟಿಕೊಟ್ಟಿದ್ದರು. ಈ ವೇಳೇ  ನಟ ಶಿವರಾಜ್ ಕುಮಾರ್‌ ಅವರು ದೇವಸ್ಥಾನಕ್ಕೆ 5 ಲಕ್ಷ ರೂಪಾಯಿ ದೇಣಿಗೆ ನೀಡಿದರು, ಇದೇ  ವೇಳೆ ತಿಲಕ್‌ ಕುಮಾರ್ ಅವರು ದಂಪತಿ ಸಹ 5 ಲಕ್ಷ ದೇಣಿಗೆ ದೇವಸ್ಥಾನ ಸಮಿತಿಗೆ ನೀಡಿದರು. ಇನ್ನೂ ಶಿವಣ್ಣ ತಮ್ಮ 'ವೇದ' ಚಿತ್ರದ 50ನೇ ದಿನ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು.

JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!

ನಂದಿನಿ ಜಂಬೋ ಪಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಳ!

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com