MALENADUTODAY.COM | SHIVAMOGGA CRIME NEWS
ಹಿಂಜಾವೇ ವಿರುದ್ಧ ಮುಸ್ಲೀಮ್ ಸಂಘಟನೆಗಳ ಪ್ರತಿಭಟನೆ
ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಶಿರಾಳಕೊಪ್ಪದಲ್ಲಿ ಹಿಂದೂ ಜಾಗರಣ ವೇದಿಕೆ(ಹಿಂಜಾವೇ) ಬಂದ್ ಹಾಗೂ ಪ್ರತಿಭಟನೆ ನಡೆಸಿದ್ದನ್ನ ಖಂಡಿಸಿ ನಿನ್ನೆ ರಾಳಕೊಪ್ಪದ ಪೊಲೀಸ್ ಠಾಣೆ ಎದುರು ಮುಸ್ಲಿಂ ಮುಖಂಡರು ಪ್ರತಿಭಟನೆ ನಡೆಸಿ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಜ.30 ರಂದು ಹಿಂಜಾವೇ ಬಂದ್ ಪ್ರತಿಭಟನೆ ನಡೆಸಿತ್ತು. ಈ ವೇಳೆ ಸಂಘಟನೆಯ ಮುಖಂಡರು ಮಾಡಿರುವ ಆರೋಪಗಳು ಶುದ್ಧ ಸುಳ್ಳು. ಶಿರಾಳಕೊಪ್ಪ ಪಟ್ಟಣದ ಶಾಂತಿಯುತ ವಾತಾವರಣ ಕಲುಶಿತಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇದರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಕೋಮುವಾದಿ ಶಕ್ತಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲು ಆಗ್ರಹಿಸಲಾಗಿದೆ.
ರಾಜ್ಯದ ಕೊಡಗು-ಕೇರಳ ಬಾರ್ಡರ್ನಲ್ಲಿ ಮತ್ತೆ ಪ್ರತ್ಯಕ್ಷವಾದ ನಕ್ಸಲ್ ತಂಡ
ಭದ್ರಾವತಿಯಲ್ಲಿ ಅಕ್ರಮ ಮದ್ಯ ವಶ
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಭದ್ರಾವತಿ ನಗರದ ಹೊಸ ಸಿದ್ದಾಪು ರದ-ನಂಜಾಪುರ ರಸ್ತೆಯಲ್ಲಿರುವ ಹೋಟೆಲ್ ಮೇಲೆ ನ್ಯೂಟೌನ್ ಪೊಲೀಸರು ದಾಳಿ ನಡೆಸಿ ಅಕ್ರಮ ಮದ್ಯ ವಶಪಡಿಸಿ ಕೊಂಡಿದ್ದಾರೆ. ಈ ವ್ಯಾಪ್ತಿಯಲ್ಲಿ ಬೀಟ್ ಗಸ್ತಿನಲ್ಲಿದ್ದ ಸಿ.ಎಚ್.ಸಿ ಗಂಗಾಧರ್‌ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಮಧ್ಯಾಹ್ನ ಠಾಣಾಧಿಕಾರಿ ರಂಗನಾಥ ಅಂತರ ಗಟ್ಟಿರವರ ಮಾರ್ಗದರ್ಶನದಲ್ಲಿ ಪೊಲೀಸರು ಶಿವಕುಮಾರ್ ಎಂಬು ವರ ಹೋಟೆಲ್ ಮೇಲೆ ದಾಳಿ ನಡೆಸಿದ್ದು, ಒಟ್ಟು ಸುಮಾರು ರು. 702 ರು. ಮೌಲ್ಯದ ಅಕ್ರಮ ಮದ್ಯ ವಶಪ ಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!
ಅಕ್ರಮ ಗೋಮಾಂಸ ವಿಚಾರ ಹಲ್ಲೆ ಮತ್ತು ರಾಜಕಾರಣ
ಭದ್ರಾವತಿಯಲ್ಲಿ ಅಕ್ರಮ ಗೋಮಾಂಸ ಸಾಗಾಟ ವಿಚಾರ ಓರ್ವನ ಮೇಲೆ ಹಲ್ಲೆ ಮಾಡಲಾಗಿದ್ದು, ಸದ್ಯ ಪ್ರಕರಣ ರಾಜಕೀಯ ತಿರುವುಪಡೆದುಕೊಳ್ಳುತ್ತಿದದೆ. ಈ ಸಂಬಂಧ ಪರ ಮತ್ತು ವಿರುದ್ಧ ಕೇಸ್ ದಾಖಲಾಗಿವೆ. ಅಕ್ರಮ ಗೋ ಮಾಂಸ ಸಾಗಾಟ ನಡೆಸುತ್ತಿದ್ದವನ ವಿರುದ್ಧ ಹಾಗೂ ಆತನ ಮೇಲೆ ಹಲ್ಲೆ ಮಾಡಿದ್ದರ ಸಂಬಂಧ ಮತ್ತೊಂದು ಕೇಸ್ ದಾಖಲಾಗಿದೆ. ಅನ್ವರ್ ಕಾಲೋನಿಯಿಂದ ಮೊಪೆಡ್ ನಲ್ಲಿ ಗೋಮಾಂಸವನ್ನು ಸಾಗಿಸ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ತಡೆದು ನಿಲ್ಲಿಸಿದ್ದ ಹಿಂದೂ ಸಂಘಟನೆಗಳು ಆತನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುದು ಆರೋಪ. ಆದರೆ ಆತ ವಾಹವನ್ನು ತಡೆದವರ ಮೇಲೆ ಗಾಡಿ ಹತ್ತಿಸಲು ಮುಂದಾಗಿದ್ದ ಎಂಬುದು ಹಿಂದೂ ಸಂಘಟನೆಗಳ ದೂರು . ಈ ನಡುವೆ ಸ್ಥಳೀಯ ಶಾಸಕ ಸಂಗಮೇಶ್ ಈ ಪ್ರಕರಣದಲ್ಲಿ ಪ್ರವೇಶ ಮಾಡಿದ್ಧಾರೆ. ಹೀಗಾಗಿ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ.
ಜೂಜಾಟಕ್ಕೆ ಹೋಯ್ತು ಪ್ರಾಣ
ಇನ್ನೊಂದೆಡೆ ಭದ್ರಾವತಿಯಲ್ಲಿಯೇ ಹಣಕಾಸಿನ ವಿಚಾರದಲ್ಲಿ ಹುಟ್ಟಿಕೊಂಡ ಸಣ್ಣ ಜಗಳ ಕೊಲೆ ಯಲ್ಲಿ ಅಂತ್ಯಗೊಂಡಿದೆ. ತಾಲೂಕಿನ ರಂಗನಾಥಪುರ ಗ್ರಾಮದಲ್ಲಿ ಜೂಟಾಟದ ವೇಳೆ ನಡೆದ ಜಗಳದಲ್ಲಿ ವೆಂಕಟೇಶ್ ಎಂಬಾತನ ಕೊಲೆಯಾಗಿದೆ ಹಣಕಾಸಿನ ವಿಚಾರದಕ್ಕೆ ಜಗಳ ತಾರಕಕ್ಕೇರಿ ಪ್ರದೀಪ ಮತ್ತು ಪ್ರೇಮ ಎಂಬವರು ತನ್ನ ಗಂಡನ ಮೇಲೆ ದೊಣ್ಣೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ ಎಂದು ಮೃತನ ಪತ್ನಿ ನಾಗರತ್ನ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಂದಿನಿ ಜಂಬೋ ಪಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಳ!
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
