ಕಟ್ಟಿದ್ದ ಒಂದೇ ಕಂತಿನಿಂದ ಬಂತು ಇನ್ಸುರೆನ್ಸ್​ನ ₹18 ಲಕ್ಷ ರೂಪಾಯಿ! ಸಾವಿನ ನಂತರವೂ ತಾಯಿಗೆ ಆಧಾರವಾದ ಮಗ!

A woman in Soraba taluka has received insurance money of Rs 18 lakh ಸೊರಬ ತಾಲ್ಲೂಕಿನ ಮಹಿಳೆಯೊಬ್ಬರಿಗೆ 18 ಲಕ್ಷ ರೂಪಾಯಿ ಇನ್ಸುರೆನ್ಸ್​ನ ಹಣ ಲಭ್ಯವಾಗಿದೆ

ಕಟ್ಟಿದ್ದ ಒಂದೇ ಕಂತಿನಿಂದ ಬಂತು  ಇನ್ಸುರೆನ್ಸ್​ನ ₹18 ಲಕ್ಷ ರೂಪಾಯಿ! ಸಾವಿನ ನಂತರವೂ ತಾಯಿಗೆ ಆಧಾರವಾದ ಮಗ!

KARNATAKA NEWS/ ONLINE / Malenadu today/ Aug 29, 2023 SHIVAMOGGA NEWS  

ದುಡಿಮೆಯ ಆಧಾರವಾಗಿದ್ದ ಮನೆಯ ಮಗ ನಿಧನವಾದರೇ, ಆ ಕುಟುಂಬದ ಸ್ಥಿತಿ ಏನಾಗಬಹುದು ಎಂಬುದು ಎಲ್ಲರಿಗೂ ಗೊತ್ತಿರುತ್ತದೆ. ಅಂತಹ ಸ್ಥಿತಿಯಲ್ಲಿದ್ದ ಕುಟುಂಬವೊಂದಕ್ಕೀಗ ವಿಮೆಯ ಹಣವೊಂದು ಲಾಟರಿಯಂತೆ ಬಂದು ಬದುಕಿಗೆ ಆಧಾರವಾಗಿದೆ. 

ಏನಿದು ಪ್ರಕರಣ!

ಶಿವಮೊಗ್ಗ ಜಿಲ್ಲೆ ಆಯನೂರಿನ ಬಾರ್​ವೊಂದರಲ್ಲಿ ಸುನಿಲ್ ಎಂಬವರು ಕೆಲಸ ಮಾಡುತ್ತಿದ್ದರು. ಕಳೆದ ವರ್ಷ  ಸೊರಬದ ಸಾರೇಕೊಪ್ಪಕ್ಕೆ ದೀಪಾವಳಿ ಹಬ್ಬಕ್ಕೆಂದು ಹೊರಟಿದ್ದ ಸುನೀಲ್​, ಶಿರಾಳಕೊಪ್ಪ ಬಳಿ ಸಂಭವಿಸಿದ ಆಕ್ಸಿಡೆಂಟ್​ನಲ್ಲಿ ಸಾವನ್ನಪ್ಪಿದ್ದರು. ಮನೆಯಲ್ಲಿ ಸುನಿಲ್ ಒಬ್ಬನೆ ದುಡಿಯುತ್ತಿದ್ದ. ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಆತನಿಲ್ಲದ ಆತನ ತಾಯಿ ಮುಂದೇಗೆ ಬದುಕು ಎಂದು ದುಃಖದಲ್ಲಿದ್ದರು. 

ಈ ನಡುವೆ ಪುತ್ರನ ಬ್ಯಾಂಕ್​ ಅಕೌಂಟ್ ಕ್ಲೋಸ್ ಮಾಡಿಸಲೆಂದು ಸುನೀಲ್​ರವರ ತಾಯಿ ಕರ್ನಾಟಕ ಬ್ಯಾಂಕ್​ಗೆ ಬಂದಿದ್ಧಾರೆ. ಈ ವೇಳೆ ಅವರಿಗೆ ಬ್ಯಾಂಕ್ ಅಧಿಕಾರಿಗಳು ತಿಳಿಸಿದ ಸುದ್ದಿ, ಆ ತಾಯಿ ಕಣ್ಣಲ್ಲಿ ನೀರು ತರಿಸಿತ್ತು.

ಸಾಯುವುವದಕ್ಕೂ ಮೊದಲು ಸುನೀಲ್, ವರ್ಷಕ್ಕೆ 300 ರೂ.ಗಳ ಕೆಬಿಎಲ್ ಸುರಕ್ಷಾ ಪಾಲಿಸಿ ಹಾಗೂ ವಾರ್ಷಿಕ 25 ಸಾವಿರ ರೂ.ಗಳ ವಿಮಾ ಪಾಲಿಸಿ ತೆಗೆದುಕೊಂಡಿದ್ದ. ಅದರ ಒಂದು ಕಂತು ಕಟ್ಟಿದ್ದ ಕೂಡ.  ಆದರೆ ದುರದೃಷ್ಟವಶಾತ್ ಆಕ್ಸಿಡೆಂಟ್​ನಲ್ಲಿ ಸಾವನ್ನಪ್ಪಿದ್ದ. ಸುನೀಲ್​ರವರ ತಾಯಿಗೆ ಈ ವಿಷಯ ತಿಳಿಸಿದ  ಬ್ಯಾಂಕ್ ಸಿಬ್ಬಂದಿ ತಾಯಿ ಸವಿತಾ ಅವರಿಗೆ ಕೆಬಿಎಲ್ ಸುರಕ್ಷಾ ಪಾಲಿಸಿಯಿಂದ 10 ಲಕ್ಷ ಹಾಗೂ ಇನ್ನೊಂದು ಪಾಲಿಸಿಯಿಂದ 8 ಲಕ್ಷ ರೂ.ಗಳ ಚೆಕ್ ಹಸ್ತಾಂತರಿಸಿದ್ದಾರೆ. 

ಬ್ಯಾಂಕ್ ಅಧಿಕಾರಿಗಳ ಪ್ರಾಮಾಣಿಕ ಸೇವೆ ಹಾಗೂ ಸುನೀಲ್​ನ ಮುಂಜಾಗ್ರತೆಯಿಂದಾಗಿ ತಾಯಿ ಸವಿತಾರಿಗೆ ಇದೀಗ ಆರ್ಥಿಕವಾಗಿ ಬಲ ಬಂದಂತಾಗಿದೆ. ಅಲ್ಲದೆ ಘಟನೆ ಇನ್ಸುರೆನ್ಸ್​ನ ಮಹತ್ವ ಸಾರುತ್ತಿದೆ


ಇನ್ನಷ್ಟು ಸುದ್ದಿಗಳು