ರಬ್ಬರ್ ತೋಟದಲ್ಲಿ ಕೇರಳದ ಕಣ್ಣೂರು ಮೂಲದ ವ್ಯಕ್ತಿಯ ಕೊಲೆ! ಎಸ್​ಪಿ ಮಿಥುನ್ ಕುಮಾರ್ ಮಾಹಿತಿ!

Malenadu Today

CHIKKAMAGALURU  |   Dec 5, 2023 |  ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ನಲ್ಲಿ ವ್ಯಕ್ತಿಯೊಬ್ಬರನನ್ನ ಕೊಲೆ ಮಾಡಲಾಗಿದೆ. 

ರಬ್ಬರ್ ಪ್ಲಾಂಟ್​ನಲ್ಲಿ ಕೇರಳದ ವ್ಯಕ್ತಿ ಕೊಲೆ

ಸೊರಬ ತಾಲ್ಲೂಕನಲ್ಲಿ ಕೇರಳ ಮೂಲದ ವ್ಯಕ್ತಿಗಳು ರಬ್ಬರ್​ ತೋಟದಲ್ಲಿ ಕೆಲಸ ಮಾಡುತ್ತಿದ್ದರು.ಇವರ ನಡುವಿನ ವ್ಯಾಜ್ಯ ಕೊಲೆಗೆ ಕಾರಣ ಎನ್ನಲಾಗುತ್ತಿದೆ. 

READ : ನಾಯಿ ಬೊಗಳಿದ್ದಕ್ಕೆ ಬೈಗುಳ! ಸಿಟ್ಟಾಗಿ ನೆರೆಮನೆಯವನ ಮೇಲೆ ಆ್ಯಸಿಡ್ ಎರಚಿದ ವ್ಯಕ್ತಿ!

ಕೇರಳ ರಾಜ್ಯ ಕಣ್ಣೂರು

ಕೇರಳ ರಾಜ್ಯ ಕಣ್ಣೂರುನವನಾದ ಶಿಜು ಎಂಬ 42 ವರ್ಷದ ವ್ಯಕ್ತಿ ಕೊಲೆಯಾದವರು. ಸದ್ಯ ಈ ಸಂಬಂಧ ಎಸ್​ಪಿ ಮಿಥುನ್ ಕುಮಾರ್ ಮಾದ್ಯಮಗಳಿಗೆ ವಾಟ್ಸ್ಯಾಪ್ ಮೂಲಕ ಮಾಹಿತಿ ನೀಡಿದ್ದು,  ಘಟನೆ ಸಂಬಂಧ ಓರ್ವ ಆರೋಪಿಯನ್ನ ವಶಕ್ಕೆ ಪಡೆಯಲಾಗಿದೆ. ಘಟನೆಗೆ ವೈಯಕ್ತಿಕ ವಿಚಾರ ಕಾರಣವಾಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಇಬ್ಬರು ಸಹ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.  

 

Share This Article