ನಾಯಿ ಬೊಗಳಿದ್ದಕ್ಕೆ ಬೈಗುಳ! ಸಿಟ್ಟಾಗಿ ನೆರೆಮನೆಯವನ ಮೇಲೆ ಆ್ಯಸಿಡ್ ಎರಚಿದ ವ್ಯಕ್ತಿ!

Acid was thrown at a man in NR Pura taluk of Chikkamagaluru district. He has been admitted to The Meggan Hospital in Shivamogga

ನಾಯಿ ಬೊಗಳಿದ್ದಕ್ಕೆ ಬೈಗುಳ! ಸಿಟ್ಟಾಗಿ ನೆರೆಮನೆಯವನ ಮೇಲೆ ಆ್ಯಸಿಡ್ ಎರಚಿದ ವ್ಯಕ್ತಿ!

CHIKKAMAGALURU  |   Dec 5, 2023 | ನಾಯಿ ಬೊಗಳಿದ ವಿಚಾರದಲ್ಲಿ ವ್ಯಕ್ತಿಯೊಬ್ಬ ನೆರೆಮನೆಯ ವ್ಯಕ್ತಿಗೆ ಆ್ಯಸಿಡ್ ಎರಚಿದ ಘಟನೆಯೊಂದರ ಬಗ್ಗೆ ಚಿಕ್ಕಮಗಳೂರು ಜಿಲ್ಲೆ ಎನ್​ಆರ್​ ಪುರ ತಾಲ್ಲೂಕು ನಲ್ಲಿ ವರದಿಯಾಗಿದೆ 

READ : ಅರ್ಜುನನನ್ನ ಕೊಂದಿದ್ದು ಯಾರು? ಕಾಕನಕೋಟೆ ಆಪರೇಷನ್ ಖೆಡ್ಡಾ ಮತ್ತೆ ಬೇಕಿದೆ ! ಏಕೆ ಗೊತ್ತಾ ಜೆಪಿ ಬರೆಯುತ್ತಾರೆ

ಎನ್​ಆರ್​ಪುರ ತಾಲ್ಲೂಕು

ಎನ್.ಆರ್.ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಜೇಮ್ಸ್ ಎಂಬಾತ ಸುಂದರ್ ರಾಜ್ ಎಂಬುವರ ಮೇಲೆ ಆ್ಯಸಿಡ್ ಎರಚಿರುವ ಬಗ್ಗೆ ವರದಿಯಾಗಿದೆ. ಆತನನ್ನು ಶಿವಮೊಗ್ಗ ಜಿಲ್ಲೆ ಮೆಗ್ಗಾನ್​ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಎನ್​ಆರ್ ಪುರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ. 

 

READ : ಕಾಲೇಜಿನ ಕಟ್ಟದಿಂದ ಬಿದ್ದು ವಿದ್ಯಾರ್ಥಿನಿ ಸಾವು! ಶಿಕ್ಷಣ ಸಂಸ್ಥೆಯ ಎದುರು ಪೋಷಕರ ಆಕ್ರೋಶ

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ 

ಘಟನೆಯ ವಿವರ ನೋಡುವುದಾದರೆ, ಸುಂದರ್ ರಾಜ್​ ಎಂಬವರ ಮನೆ ನಾಯಿ ಬೊಗಳುತ್ತಿತ್ತಂತೆ. ಅದಕ್ಕೆ ಸುಂದರ್ ರಾಜ್​ ಬೈಯ್ಯುತ್ತಿದ್ದರಂ  ಅವರ ಮನೆ ನಾಯಿಗೆ ಬೈಯ್ಯುತ್ತಿರುತ್ತಿರುವದನ್ನ ಜೇಮ್ಸ್ ತಮಗೆ ನೆರೆಮನೆಯಾತ ಬೈಯ್ಯುತ್ತಿದ್ದಾನೆ. ನಾಯಿಯ ನೆಪದಲ್ಲಿ ತಮಗೆ ನಿಂದಿಸುತ್ತಿದ್ದಾನೆ ಎಂದು ಸಿಟ್ಟಾಗಿ ಆ್ಯಸಿಡ್ ಎರಚಿರುವ ಬಗ್ಗೆ ವರದಿಯಾಗಿದೆ. ಸದ್ಯ ಈ ಸಂಬಂಧ ಎನ್​ಆರ್​ ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸ್ತಿದ್ದಾರೆ.