ಕಳೆನಾಶಕ ಸಿಂಪಡಣೆ ವೇಳೆ ಜಾಗ್ರತೆ! ಸಾವು ಸಂಭವಿಸುತ್ತೆ! / ಕಾಂಗ್ರೆಸ್ ಅಧಿಕಾರದಲ್ಲಿ ಇರೋದಿಲ್ಲ: BYR/ ಎಣ್ಣೆ ಅಂಗಡಿ ಎತ್ತಂಗಡಿ ಮಾಡಿ/ ಕಣ್ಣು ಕೊಟ್ಟ ದೇವರಾಜ್!TODAY@NEWS

Here is a brief account of various news stories from Malnad including Shivamogga ಶಿವಮೊಗ್ಗ ಸೇರಿದಂತೆ ಮಲೆನಾಡಿನ ವಿವಿಧ ಸುದ್ದಿಗಳ ಸಂಕ್ಷಿಪ್ತ ವಿವರ ಇಲ್ಲಿದೆ

ಕಳೆನಾಶಕ ಸಿಂಪಡಣೆ ವೇಳೆ ಜಾಗ್ರತೆ! ಸಾವು ಸಂಭವಿಸುತ್ತೆ! / ಕಾಂಗ್ರೆಸ್ ಅಧಿಕಾರದಲ್ಲಿ ಇರೋದಿಲ್ಲ: BYR/ ಎಣ್ಣೆ ಅಂಗಡಿ ಎತ್ತಂಗಡಿ ಮಾಡಿ/ ಕಣ್ಣು ಕೊಟ್ಟ ದೇವರಾಜ್!TODAY@NEWS

KARNATAKA NEWS/ ONLINE / Malenadu today/ Aug 30, 2023 SHIVAMOGGA NEWS   

ಕಳೆನಾಶಕ ಸಿಂಪಡಣೆ ವೇಳೆ ಎಷ್ಟು ಜಾಗ್ರತೆ ವಹಿಸಿದರು ಸಾಲದು. ಇದಕ್ಕೆ ಸಾಕ್ಷಿ ಎಂಬಂತೆ,  ಮುಂಜಾಗ್ರತಾ ಕ್ರಮ ವಹಿಸದ ಪರಿಣಾಮ  ಮೂರ್ನಾಲ್ಕು ದಿನದಲ್ಲಿ ಕಿಡ್ನಿ, ಲಿವರ್, ಶ್ವಾಸಕೋಶ ನಿಷ್ಕ್ರಿಯಗೊಂಡು ಯುವಕನೊಬ್ಬ ಸಾವನ್ನಪ್ಪಿದ್ದ ಘಟನೆ ಹಾಸನ ತಾಲ್ಲೂಕಿನ ಕಾರ್ಲೆ ಗ್ರಾಮದಲ್ಲಿ ಸಂಭವಿಸಿದೆ. 

 ಕೀರ್ತಿ (23) ಮೃತ ಯುವಕ, ಕಳೆದ ಒಂದು ವಾರದಿಂದ ಈತ ಸತತವಾಗಿ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಶುಂಠಿ ಬೆಳೆಗೆ ಕಳೆ ನಾಶಕ ಸಿಂಪಡಣೆ ಮಾಡುತ್ತಿದ್ದ.  ಈ ವೇಳೆ ಬಾಯಿ ಮತ್ತು ಮೂಗಿಗೆ ಮಾಸ್ಕ್  ಸಹ ಹಾಕಿರಲಿಲ್ಲ. ಪರಿಣಾಮ ಕಳೆನಾಶಕ ದೇಹ ಹೊಕ್ಕಿದ್ದು,  ವಾಂತಿ, ಸುಸ್ತಿನಿಂದ ಬಳಲಿದ್ದಾನೆ. ಬಳಿಕ ಯುವಕನನ್ನ  ಆಸ್ಪತ್ರೆಗೆ ದಾಖಲಿಸಿದ್ದು, ಮೂರ್ನಾಲ್ಕು ದಿನದಲ್ಲಿ ಕಿಡ್ನಿ, ಲಿವರ್, ಶ್ವಾಸಕೋಶ ನಿಷ್ಕ್ರಿಯಗೊಂಡು ಮೃತಪಟ್ಟಿದ್ದಾನೆ. 


ಸಾವಿನಲ್ಲಿಯು ಸಾರ್ಥಕಥೆ

ದಿನಾಂಕ 20/08/2023 ರಂದು ಆಯತಪ್ಪಿ ಬಿದ್ದು ತಲೆಯ ಹಿಂಭಾಗಕ್ಕೆ ಪೆಟ್ಟು ಮಾಡಿಕೊಂಡಿದ್ದ  ದೇವರಾಜ್ ಎಂ.ಎಸ್ ಎಂಬವರು ತಮ್ಮ ಸಾವಿನಲ್ಲಿಯು ಸಾರ್ಥಕಥೆ ಮೆರೆದಿದ್ದಾರೆ. ನಿನ್ನೆ ಅವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ವೇಳೆ ಅವರ  ಆಸೆಯಂತೆ  ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ಇಬ್ಬರು ಅಂಧರ ಬಾಳಿಗೆ ಬೆಳಕಾಗುವ ಉದ್ದೇಶದೊಂದಿಗೆ ಮೃತರ 02 ಕಣ್ಣುಗಳನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ನೇತ್ರನಿಧಿಗೆ ದಾನ ಮಾಡಲಾಗಿದೆ.




ಕಾಂಗ್ರೆಸ್ ಅಧಿಕಾರದಲ್ಲಿ ಇರೋದಿಲ್ಲ

ಮುಂಬರುವ ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರೋದಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಸೊರಬದಲ್ಲಿ ಹೇಳಿದ್ದಾರೆ. ನಿನ್ನೆ  ತಾಲೂಕು ಬಿಜೆಪಿಯಿಂದ ಆಯೋಜಿಸಿದ್ದ ಪಕ್ಷ ಬೆಂಬಲಿತ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು,  ಆಡಳಿತ ಪಕ್ಷದವರು ಆಪರೇಷನ್ ಕಾಂಗ್ರೆಸ್ ಮಾಡುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದಿಲ್ಲ ಎಂದು ತಿಳಿಸಿದರು 




 ಎಣ್ಣೆ ಅಂಗಡಿಗೆ ವಿರೋಧ

ಸಾಗರ ಪೇಟೆಯ ಖಾಸಗಿ ಬಸ್ ನಿಲ್ದಾಣದ ಎದುರು ಮದ್ಯದಂಗಡಿ ತೆರೆಯುವುದನ್ನು ವಿರೋಧಿಸಿ  ನಿನ್ನೆ ಮಂಗಳವಾರ ಸ್ಥಳೀಯರು ಪ್ರತಿಭಟನೆ ನಡೆಸಿದರು. ಅಲ್ಲದೆ ಈ ಸಂಬಂಧ ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು. ಬಸ್ ನಿಲ್ದಾಣದ ಎದುರು ಮದ್ಯದಂಗಡಿ ತೆರೆಯುವುದರಿಂದ ಕುಡಿದ ಅಮಲಿನಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆ ಎಂದು ಆರೋಪಿಸಿದ ಮಹಿಳೆಯರು ಮದ್ಯದಂಗಡಿ ವರ್ಗಾವಣೆ ಮಾಡದಿದ್ದರೇ, ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ರು.  

ಇನ್ನಷ್ಟು ಸುದ್ದಿಗಳು