ಕಾಂಗ್ರೆಸ್​ ನವರು ಪೊರಕೆ ಹಿಡಿದು ಬಂದ್ರು! ಬಿಜೆಪಿಯವರು ಗೋಮೂತ್ರ ಸಿಂಪಡಿಸಿದರು! ಚಕ್ರವರ್ತಿ ಸೂಲಿಬೆಲೆ ಉಪನ್ಯಾಸದ ವೇಳೆ ಹೈಡ್ರಾಮಾ!

KARNATAKA NEWS/ ONLINE / Malenadu today/ Aug 30, 2023 SHIVAMOGGA NEWS   

ಶಿವಮೊಗ್ಗದಲ್ಲಿ ನಡೆಯುತ್ತಿರುವ ಚಕ್ರವರ್ತಿ ಸೂಲಿಬೆಲೆಯವರು ನಡೆಸಿಕೊಡುತ್ತಿರುವ ಇನ್ನೂ ಮಲಗಿದರೆ ಏಳುವಾಗ ಭಾರತ ಇರುವುದಿಲ್ಲ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ನಿನ್ನೆ ಎರಡು ಘಟನೆಗಳು ವಿಶೇಷವಾಗಿ ನಡೆದವು. 

Shivamogga Malenadu Today

ಒಂದು ಕಡೆ ಸಾಮಾಜಿಕ ಜಾಲಾತಾಣದಲ್ಲಿ ಮಹಿಳೆ ಹಾಕಿದ್ದ ಸಂದೇಶಕ್ಕೆ ಅವಹೇಳಕಾರಿಯಾಗಿ ಪ್ರತಿಕ್ರಿಯೆ ನೀಡಿದ ಆರೋಪದಡಿಯಲ್ಲಿ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಅವರ ವಿರುದ್ಧ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

Shivamogga Malenadu Today

ನಗರದ ಕರ್ನಾಟಕ ಸಂಘ ಭವನದಲ್ಲಿ ನಡೆಯುತ್ತಿದ್ದ ಉಪನ್ಯಾಸ ಕಾರ್ಯಕ್ರಮದ ಸಮೀಪ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಕೈಯಲ್ಲಿ ಪೊರಕೆ ಹಿಡಿದು ದಿಕ್ಕಾರ ಕೂಗಿ ದರು. ತಕ್ಷಣವೇ  ಚಕ್ರವರ್ತಿ ಸೂಲಿಬೆಲೆ ಅವರನ್ನು ಬಂಧಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದ್ರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.

Shivamogga Malenadu Today

 ಇತ್ತ ಕಾಂಗ್ರೆಸ್ ಪ್ರತಿಭಟನೆ ನಡೆಯುತ್ತಿರುವಾಗಲೇ, ಇನ್ನೊಂದೆಡೆ ನಮೋ ಬ್ರಿಗೇಡ್ ಕಾರ್ಯಕರ್ತರು ಮೋದಿಗೆ ಜೈಕಾರ ಹಾಕಿ ಜೈ ಶ್ರೀರಾಂ ಘೋಷಣೆಯೊಂದಿಗೆ ಚಕ್ರವರ್ತಿ ಸೂಲಿಬೆಲೆ ಪರವಾಗಿ ಘೋಷಣೆ ಹಾಕಿದರು.  

Shivamogga Malenadu Today

ಗೋಮೂತ್ರ ಶುದ್ದೀಕರಣ

ಇನ್ನೂಂದೆಡೆ  ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದೊಯ್ದ ಬೆನ್ನಲ್ಲೆ  ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಸ್ಥಳದಲ್ಲಿ ಬಿಜೆಪಿ ಮತ್ತು ನಮೋ ಬ್ರಿಗೇಡ್‌ ಕಾರ್ಯಕರ್ತರು ಗೋಮೂತ್ರ ಸಿಂಪಡಿಸಿದ ಘಟನೆಯು  ನಡೆಯಿತು. 

Shivamogga Malenadu Today

Shivamogga Malenadu Today

ಇನ್ನಷ್ಟು ಸುದ್ದಿಗಳು 


 

 

Leave a Comment