ಅರ್ಜುನನನ್ನ ಕೊಂದಿದ್ದು ಯಾರು? ಕಾಕನಕೋಟೆ ಆಪರೇಷನ್ ಖೆಡ್ಡಾ ಮತ್ತೆ ಬೇಕಿದೆ ! ಏಕೆ ಗೊತ್ತಾ ಜೆಪಿ ಬರೆಯುತ್ತಾರೆ

Arjuna elephant carrying Mysore ambari was killed by a wild elephant. Who is responsible for the incident that took place in the wild elephant operation?

ಅರ್ಜುನನನ್ನ ಕೊಂದಿದ್ದು ಯಾರು? ಕಾಕನಕೋಟೆ ಆಪರೇಷನ್  ಖೆಡ್ಡಾ ಮತ್ತೆ ಬೇಕಿದೆ ! ಏಕೆ ಗೊತ್ತಾ ಜೆಪಿ ಬರೆಯುತ್ತಾರೆ

SHIVAMOGGA  |   Dec 5, 2023 |  ಕಾಕನಕೋಟೆ ಆಪರೇಷನ್  ಖೆಡ್ಡಾ ಮಾದರಿಯಲ್ಲಿ ಮತ್ತೊಮ್ಮೆ  ಆನೆಗಳ ಸೆರೆಹಿಡಿಯುವುದು ಸರ್ಕಾರಕ್ಕೆ ಅನಿವಾರ್ಯ. .ರೇಡಿಯೋ ಕಾಲರ್ ಹಾಕಿ ಕಣ್ಣೊರಿಸುವ ಕೆಲಸವನ್ನು ಅರಣ್ಯಾಧಿಕಾರಿಗಳು ಕೈಬಿಡಬೇಕು.ಯಾಕೆ ಗೊತ್ತಾ? ಜೆಪಿ ಬರೆಯುತ್ತಾರೆ.

ರಾಜ್ಯ ಅರಣ್ಯ ಇಲಾಖೆ ಸರ್ಕಾರೇತರ ಸಂಸ್ಥೆಗಳ ಅದೀನದಲ್ಲಿದೆಯೋ ಅಥವಾ ಸರ್ಕಾರದ ಅದೀನದಲ್ಲಿದೆಯೋ ಎಂಬುದೇ ಅನುಮಾನವಾಗಿದೆ. ಅರಣ್ಯ ಇಲಾಖೆಯ ಯಾವುದೇ ವಿಚಾರಗಳಿಗೂ ಎನ್ ಜಿ ಓ ಸಂಸ್ಥೆಗಳ ತಗಾದೆಗಳು  ತಜ್ಞರು ಕೊಡುವ ಸಲಹೆಗಳಿಂದ ಇಲಾಖೆಯ ಹಾದಿ ದಿಕ್ಕು ತಪ್ಪುತ್ತಿದೆ.

ಹಾಗಂತೆ ಎಲ್ಲಾ ಎನ್ ಜಿ ಓ ಸಂಸ್ಥೆಗಳ ವಿರುದ್ಧ ಇದು ಆರೋಪವಲ್ಲ. ಕೇವಲ ವಿರೋಧಕ್ಕೆ ವಿರೋಧ ಎಂಬುದಾದರೆ..ಅದರಲ್ಲಿ ಅರ್ಥವಿಲ್ಲ. ಕಾಡಾನೆಗಳನ್ನು ಸೆರೆ ಹಿಡಿದರೆ ಅದನ್ನು ಪುನಃ ಕಾಡಿಗೆ ಬಿಡಿ ಎನ್ನುವ ಪ್ರಾಣಿ ಪ್ರೀಯರಿಗೆ ನಿಜವಾಗ್ಲೂ ಮಾನವ ಮತ್ತು ವನ್ಯಜೀವಿ ಸಂಘರ್ಷದ ಗಂಭೀರ ಪರಿಣಾಮಗಳು ಅರಿವಿಗೆ ಬರುತ್ತಿಲ್ಲವೇಕೆ. ಅದರಲ್ಲೂ ಮುಖ್ಯವಾಗಿ ಕಾಡಾನೆಗಳ ಹಿಂಡಿನ ದಾಳಿ ರೈತರ ಬದುಕನ್ನು ಹೈರಾಣಾಗಿಸಿದೆ. ಪೂರ್ವಜರ ಕಾಲದಲ್ಲಿ ಇವೆಲ್ಲವೂ ಆನೆ ಓಡಾಡುವ ಪ್ರದೇಶಗಳಾಗಿದ್ದವು. ಈಗ ಮಾನವ ಅವುಗಳ ನೆಲೆಯಲ್ಲೇ ಬದುಕು ಕಟ್ಟಿಕೊಂಡಿರೋದ್ರಿಂದ..ಸಂಘರ್ಷ ದಿನದಿನಕ್ಕೂ ಹೆಚ್ಚುತ್ತಿದೆ.

READ : ಬಾನುಮತಿ ಆನೆ ಬಾಲ ಕಟ್ ಮಾಡಿದ್ದು ಯಾರು? ಸತ್ಯ ಹೊರಬಿತ್ತು! ಏನಿದು ರಿಪೋರ್ಟ್!

ನಾವೇನು ಮಾಡೋದಕ್ಕೆ ಸಾಧ್ಯ. ಅವುಗಳ ವ್ಯಾಪ್ತಿ ಪ್ರದೇಶಗಳಲ್ಲಿ ಓಡಾಡುತ್ತಿದ್ದರೆ..ಓಡಾಡಲಿ ಬಿಡಿ ಎಂದು ಕೈತೊಳೆದುಕೊಂಡು ಕೂತರೆ...ಮಾನವ ಮತ್ತು ಆನೆಯ ಸಂಘರ್ಷ ತಪ್ಪಿಸಲು ಸಾಧ್ಯವೇ...ಇತ್ತಿಚ್ಚಿನ ದಿನಗಳಲ್ಲಂತೂ ಕಾಡಾನೆ ಸೆರೆ ಹಿಡಿದರೆ..ಅದನ್ನು ಪುನಃ ಕಾಡಿಗೆ ಬಿಡಲಾಗುತ್ತಿದೆ.ಅಥವಾ ಹಿಮ್ಮೆಟ್ಟಿಸಲಾಗುತ್ತಿದೆ. ಸೆರೆ ಸಿಕ್ಕ ಆನೆಗೆ ರೇಡಿಯೋ ಕಾಲರ್ ಅಳವಡಿಸಿ ದೂರದ ಕಾಡಿಗೆ ಬಿಡಲಾಗುತ್ತೆ.  ಆ ಕಾಡಾನೆ ತನ್ನ ಮೂಲ ನೆಲೆಯನ್ನು ಹುಡುಕಿಕೊಂಡು ವಾಪಸ್ಸು ಬಂದ ಸಾಕಷ್ಟು ನಿದರ್ಶನಗಳು ಕಣ್ಣ ಮುಂದಿದೆ. 

ಹಿಮ್ಮೆಟ್ಟಿಸಿದ ಆನೆ ಪುನಃ ಅದೇ ಸ್ಥಳಕ್ಕೆ ವಾಪಸ್ಸು ಬಂದ್ರೆ ಸರ್ಕಾರ ಕಾರ್ಯಾಚರಣೆಗೆ ವ್ಯಯಿಸಿದ ಲಕ್ಷಾಂತರ ರೂಪಾಯಿ ಹಣ ಹೊಳೆಯಲ್ಲಿ ಹುಳಿ ಹಿಂಡಿದಂತಾಗುತ್ತದೆ. ಹೀಗಾಗಿ ಆನೆ ಹಿಮ್ಮೆಟ್ಟಿಸುವ ಅಥವಾ ಸೆರೆ ಹಿಡಿಯುವ ಕಾರ್ಯಾಚರಣೆಗಳು ಸಫಲತೆ ಕಾಣುತ್ತಿಲ್ಲ.ದಿನದಿನಕ್ಕೂ ಸಂಘರ್ಷ ಹೆಚ್ಚುತ್ತಿರುವುದರಿಂದಲೇ ಇಲ್ಲಿ ಸಾಕಾನೆಗಳು ಕಾಡಾನಿಗಳು ಪ್ರಾಣ ಕಳೆದುಕೊಳ್ಳುತ್ತಿವೆ ಅದೇ ರೀತಿ ಆನೆ ಸಿಬ್ಬಂದಿಗಳು ಕೂಡ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 

ಯಾರು ರಾಜ್ಯದಲ್ಲಿ ಹೆಚ್ಚಾಗಿರುವ ಕಾಡಾನೆಗಳ ಸಂಖ್ಯೆಯ ಬಗ್ಗೆ ಅವುಗಳು ಮಾನವ ಪ್ರದೇಶಕ್ಕೆ ಲಗ್ಗೆ ಇಡುತ್ತಿರುವ ಬಗ್ಗೆಯಾಗಲಿ..ಇದಕ್ಕೆ ಪೂರಕವಾಗಿ ಪರಿಹಾರ ಕಂಡುಕೊಳ್ಳುವ ಮಾರ್ಗದ ಬಗ್ಗೆಯಾಗಲಿ ಗಂಭೀರವಾಗಿ ಯೋಚಿಸುತ್ತಿಲ್ಲ. ಪ್ರಾಜೆಕ್ಟ್ ಎಲಿಫೆಂಟ್ ಮತ್ತು ಎಲಿಫೆಂಟ್ ಟಾಸ್ಕ್ ಫೋರ್ಸ್ ಗಳು ಆನೆಗಳ ವಿಚಾರದಲ್ಲಿ ತಮ್ಮ ಗಟ್ಟಿತನ ಪ್ರದರ್ಶಿಸಬೇಕಿದೆ. 

ಹೆಚ್ಚಾಗಿರುವ ಕಾಡಾನೆಗಳ ಪೈಕಿ ಹೆಣ್ಣಾನೆಗೆ ಗರ್ಭಧರಿಸದಂತೆ ಚಿಕಿತ್ಸೆ ನೀಡಲು ಕಾನೂನಿನಲ್ಲಿ ಅವಕಾಶ ಇದೇಯ ಎಂದು ಪರಾಮರ್ಶಿಸಬೇಕಿದೆ. ಇಲ್ಲವೇ ಇದಕ್ಕೆ ಪ್ರಾಣಿ ಪ್ರೀಯರಿಂದ ವಿರೋಧ ವ್ಯಕ್ತವಾದರೆ, ಮತ್ತೊಂದು ಆಪರೇಷನ್ ಖೆಡ್ಡಾವನ್ನು ಸರ್ಕಾರ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ.

READ :ಶಿವಮೊಗ್ಗದಲ್ಲಿಯೇ ಭಯಹುಟ್ಟಿಸ್ತಿವೆ ಕಾಡಾನೆಗಳು! ಇದ್ದ ಊರಿನ ಸಮಸ್ಯೆಗೆ ಆಗದ ಸಕ್ರೆಬೈಲ್ ಆನೆಗಳು!? ಕಾರಣವೇನು?

ಪ್ರತ್ಯೇಕ ಕ್ಯಾಂಪ್ ಗಳನ್ನು ರಚಿಸಿ, ಆನೆಗಳನ್ನು ಪಳಗಿಸಿ ತರಬೇತಿ ನೀಡಲಿ 

ರಾಜ್ಯದಲ್ಲಿ ಮಾನವ ಪ್ರದೇಶದಲ್ಲಿ ಕಂಡು ಬರುವ ಆನೆಗಳನ್ನು ರಾಜ್ಯ ಸರ್ಕಾರ ಹಿಮ್ಮೆಟ್ಟಿಸುವ ಬದಲು ಅವುಗಳನ್ನು ಸೆರೆಹಿಡಿದು ಪಳಗಿಸಿದರೆ, ಕೊಂಚ ಸಂಘರ್ಷದ ವಾತಾವರಣ ತಣ್ಣಗಾಗಬಹುದು. ಇದಕ್ಕೆ ಮತ್ತೆ ಪ್ರತ್ಯೇಕ ಕ್ಯಾಂಪ್ ಗಳನ್ನು ತೆರೆದರೂ ಸರ್ಕಾರಕ್ಕೆ ಹೊರೆಯಾಗುವುದಿಲ್ಲ. ಪಳಗಿಸಿ ತರಬೇತಿ ನೀಡಿದ ಸಾಕಾನೆಗಳನ್ನು ಮುಂದಿನ ದಿನಗಳಲ್ಲಿ ಕಾಡಾನೆ ಕಾರ್ಯಾಚರಣೆಗೂ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ತಲತಲಾಂತರದಿಂದ ಬಂದಿರುವ ಮಾವುತ ಕಾವಾಡಿಗಳ ಆನೆ ಪಳಗಿಸಿ ತರಬೇತಿ ನೀಡುವ ಕಲೆಗೂ ಹೊಸರೂಪವನ್ನು ನೀಡಬಹುದು. ಇದರಿಂದ ಮಾವುತ ಕಾವಾಡಿ ಎಂಬುದು ಮುಂದಿನ ತಲೆಮಾರಿಗೂ ತಲುಪಿಸಬಹುದು. 

ಕಾಡಾನೆಗಳನ್ನು ಸೆರೆ ಹಿಡಿಯದೇ ಹೋದರೆ..ಮಾವುತರು ಎಂಬುದು ಮುಂದಿನ ದಿನಗಳಲ್ಲಿ ಕೇವಲ ನೆನಪುಗಳಾಗಿ ಉಳಿದುಬಿಡುತ್ತಾರೆ. ಅವರು ಬದುಕು, ಆನೆಗಳ ಜೊತೆಗಿನ ಭಾಂದವ್ಯ, ಅವರು ಆನೆ ಪಳಗಿಸಿ ತರಬೇತಿ ನೀಡುವ ಕಲೆಗಳು ಜೀವಂತವಾಗಿರಬೇಕಾದರೆ..ಮತ್ತೊಂದು ಆಪರೇಷನ್ ಖೆಡ್ಡಾಗೆ ಸರ್ಕಾರ ಮುಂದಾಗಬೇಕು

READ : ಸಕ್ರೆಬೈಲ್ ಆನೆ ಬಿಡಾರದಲ್ಲಿ ಮತ್ತೆ ಯಡವಟ್ಟು! ಮದುವೆ ಫೋಟೋ ಶೂಟ್​ ವೇಳೆ ಆನೆಯಿಂದ ಕೆಳಕ್ಕೆ ಬಿದ್ದ ಮಾವುತ! ವಿಡಿಯೋ ಹೇಳಿದ ಸತ್ಯ! JP ಸ್ಟೋರಿ

70 ರ ದಶಕದಲ್ಲಿ ಸೆರೆಹಿಡಿದ ಕಾಡಾನೆಗಳನ್ನು ಬಿಡಾರದ ಸಾಕಾನೆಗಳಾಗಿ ಮಾಡಿಕೊಳ್ಳಲಾಗಿತ್ತು. ದ್ರೋಣ, ಅರ್ಜುನ, ಅಭಿಮನ್ಯು ಸೇರಿದಂತೆ ಹಲವು ಹೆಸರಾಂತ ಆನೆಗಳು ಆ ಖೆಡ್ಡಾದಲ್ಲಿಯೇ ಸೆರೆಯಾಗಿದ್ದವು. ಈಗ ಅರ್ಜುನ ಆನೆಯನ್ನು ಕೊಂದ ಆನೆಯು ದೈತ್ಯವಾಗಿದ್ದು, ಈ ಆನೆಯನ್ನು ಸೆರೆಹಿಡಿದು ಪಳಗಿಸಿದರೆ, ಭವಿಷ್ಯದಲ್ಲಿ ದಸರಾ ಅಂಬಾರಿ ಹೊರುವ ಆನೆಯಾದ್ರೂ ಆಗಬಹುದು. ಹಾಸನ ಕೊಡಗು ಚಿಕ್ಕಮಗಳೂರು ಶಿವಮೊಗ್ಗ ಭಾಗಗಳಲ್ಲಿ ದಿನಂಪ್ರತಿ ಘೀಳಿಡುವ ಕಾಡಾನೆಗಳನ್ನು ಒಟ್ಟಿಗೆ ಸೆರೆಹಿಡಿದು ಬಿಡಾರದ ಆನೆಗಳಾಗಿ ಮಾರ್ಪಡಿಸುವ ಕೆಲಸ ಸರ್ಕಾರ ಮಾಡಬೇಡು..ಇಲ್ಲವೇ..ಆನೆಗಳ ಸಂತಾನೋತ್ಪತ್ತಿಯ ಕಡಿವಾಣಕ್ಕೆ ಏನಾದರೂ ಮಾರ್ಗ ಸೂಚಿಗಳಿದ್ದರೆ ಅದರ ಅನುಷ್ಟಾನಕ್ಕೆ ಮುಂದಾಗಬೇಕು.

ಆದರೆ ಈಗ ಪ್ರಸ್ಥುತ ವಿಷಯವೇನೆಂದರೇ. ಮಾನವ ಪ್ರದೇಶವನ್ನೇ ಆವಾಸ ಸ್ಥಾವವನ್ನಾಗಿಸಿಕೊಂಡಿರುವ ಕಾಡಾನೆಗಳನ್ನು ಸೆರೆಹಿಡಿಯುವುದು ಸರ್ಕಾರರ್ರೆ ಅನಿವಾರ್ಯವಾಗಿದೆ. ಸೆರೆ ಹಿಡಿದ ಕಾಡಾನೆಗಳನ್ನು ರೇಡಿಯೋ ಕಾಲರ್ ಅಳವಡಿಸಿ ಕಾಡಿಗೆ ಬಿಟ್ಟರೆ..ಅದರಿಂದ ಯಾವುದೇ ಪ್ರಯೋಜನವಿಲ್ಲ. ಅಧ್ಯಯನ ಮಾಡುವವವರಿಗೆ ಒಂದು ವಸ್ತು ವಿಷಯ.ವಾಗಬಹುದು. ಆದರೆ ಬದುಕು ಜೀಕುತ್ತಿರುವವರಿಗೆ ಅದು ನಿಜಕ್ಕೂ ಹೋರಾಟವೇ ಆಗಿರುತ್ತದೆ.