ಇಂಡುವಳ್ಳಿ ಪಿಡಿಒ ಸಸ್ಪೆಂಡ್​! ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟ ಜಿಲ್ಲಾಡಳಿತ

Induvalli PDO suspended! District administration warns officials

ಇಂಡುವಳ್ಳಿ ಪಿಡಿಒ ಸಸ್ಪೆಂಡ್​! ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟ ಜಿಲ್ಲಾಡಳಿತ

KARNATAKA NEWS/ ONLINE / Malenadu today/ May 7, 2023 GOOGLE NEWS

ಸೊರಬ /ಶಿವಮೊಗ್ಗ/ಅನಾರೋಗ್ಯದವೆಂದು ಚುನಾವಣಾ ಕಾರ್ಯದಿಂದ ದೂರವುಳಿಯಲು ಯತ್ನಿಸಿದ ಹಾಗೂ ಸುಳ್ಳು ಪ್ರಮಾಣ ಪತ್ರ ನೀಡಿದ ಆರೋಪದಲ್ಲಿ  ಇಂಡುವಳ್ಳಿ ಪಿಡಿಒ ಉಮೇಶ್ ಡಿ. ಗೌಡ‌ರನ್ನ ಅಮಾನತ್ತು ಮಾಡಲಾಗಿದೆ.  ಈ ಸಂಬಂಧ ಜಿಲ್ಲಾ ಪಂಚಾಯತ್ ಸಿಇಒ ಆದೇಶವನ್ನು ಮಾಡಿದ್ದಾರೆ. 

narendramodi/  ನರೇಂದ್ರ ಮೋದಿ ನಮಸ್ಕಾರವನ್ನು ಮನೆಮನೆಗೂ ತಲುಪಿಸಿ ಎಂದು ಟಾಸ್ಕ್​ ಕೊಟ್ಟ ಪ್ರಧಾನಿ!  ಮೋದಿ ಮಾತಿನ ಪೂರ್ತಿ ವಿವರ ಇಲ್ಲಿದೆ

ಏನಿದು ಪ್ರಕರಣ

ಇಂಡುವಳ್ಳಿ ಪಿಡಿಒ, ಶಾಸಕ ಕುಮಾರ ಬಂಗಾರಪ್ಪ ಅವರ ಮಾಜಿ ಆಪ್ತ ಸಹಾಯಕ ಉಮೇಶ್ ಡಿ.ಗೌಡರ್‌ ಅವರನ್ನು ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಅಮಾನತು ಮಾಡಿದ್ದಾರೆ.  ಇದಕ್ಕೂ ಮೊದಲು ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಉಮೇಶ್​,  ಅನಾರೋಗ್ಯದ ಕಾರಣ ರಜೆ ಪಡೆದಿದ್ದೇನೆ  ಎಂದು ವೈದ್ಯಕೀಯ ಪ್ರಮಾಣ ಪತ್ರದೊಂದಿಗೆ ಏ.20ರಂದು  ಉತ್ತರಿಸಿದ್ದರು.

ಪ್ರಮಾಣಪತ್ರದ ಬಗ್ಗೆ ಬಂದಿತ್ತು ಅನುಮಾನ

ಉಮೇಶ್ ಸಲ್ಲಿಸಿದ್ದ ಪ್ರಮಾಣ ಪತ್ರದ ನೈಜತೆ ಬಗ್ಗೆ ಪರಿಶೀಲಿಸುವಂತೆ ಮೆಗ್ಗಾನ್ ಅಸ್ಪತ್ರೆ ಸರ್ಜನ್ ಡಾ.ಸಿದ್ದನಗೌಡ ಪಾಟೀಲ್‌ ಅವರಿಗೆ ಜಿಪಂ ಸಿಇಒ ಸೂಚನೆ ನೀಡಿದ್ದರು. ಮೆಗ್ಗಾನ್ ಆಸ್ಪತ್ರೆ ಕೀಲು ಮತ್ತು ಮೂಲೆ ತಜ್ಞ ಡಾ.ಲೋಹಿತ್ ಕುಮಾರ್, ಉಮೇಶ್ ಆರೋಗ್ಯ ಪರೀಕ್ಷಿಸಿ ಅವರಿಗೆ ಕೀಲು ಮತ್ತು ಮೂಳೆ ಸಂಬಂಧಿತ ಯಾವುದೇ ಸಮಸ್ಯೆಗಳಿಲ್ಲ ಎಂದು ವರದಿ ನೀಡಿದ್ದರು. ಆಗ ಕೂಡಲೇ ಕೆಲಸಕ್ಕೆ  ಹಾಜರಾಗುವಂತೆ ಸೂಚಿಸಲಾಗಿತ್ತು. 

ವಿಜಯೇಂದ್ರ ವಿಜಯಕ್ಕೆ ಹೊರಗಿನಿಂದ ಬಂದಿದ್ಧಾರೆ ಸಾವಿರಾರು ಜನ/ ಶಿಕಾರಿಪುರದಲ್ಲಿ ಸ್ವಾಭಿಮಾನದ ಸವಾಲು! ಸಂವಾದದಲ್ಲಿ  ನಾಗರಾಜ್ ಗೌಡ ಹೇಳಿದ್ದೇನು? 

ಈ ನಡುವೆ ಕಳೆದ ಏ.25ರಂದು `ಉಮೇಶ್' ಪತ್ನಿ ಸೊರಬ ತಾಪಂ ಇಒಗೆ ಪತ್ರ ಬರೆದು ನನ್ನ ಪತಿಯನ್ನು ಶಿರಸಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಎರಡು ಕೈಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅವರು ಗುಣಮುಖರಾದ ಬಳಿಕ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದರು. 

ಎರಡನೇ ಸಲವು ತಪ್ಪು ಮಾಹಿತಿ ದೃಢ

ಆದರೆ 'ಉಮೇಶ್ ಒಂದೇ ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅವರಿಗೆ ಆರೋಗ್ಯ ಸರಿಯಿಲ್ಲ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಮತ್ತೊಂದು ದೂರು ದಾಖಲಾಗಿತ್ತು. ಈ  ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಸಿಮ್ಸ್‌ನಲ್ಲಿ ಅವರ ಆರೋಗ್ಯ ಪರೀಕ್ಷೆ ಮಾಡಲಾಗಿತ್ತು. ಈ ವೇಳೆ ಅವರು ತಪ್ಪು ಮಾಹಿತಿ ನೀಡಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ.

ಮಾಜಿ ಶಾಸಕರ ತೋಟದ ಮನೆಗೆ ನುಗ್ಗಿ ಒಂದು ಕೆಜಿ ಚಿನ್ನ ದರೋಡೆ! ಬಂದೂಕು ತೋರಿಸಿ 15 ಜನರ ತಂಡದ ಕೃತ್ಯ!

narendramodi/  ನರೇಂದ್ರ ಮೋದಿ ನಮಸ್ಕಾರವನ್ನು ಮನೆಮನೆಗೂ ತಲುಪಿಸಿ ಎಂದು ಟಾಸ್ಕ್​ ಕೊಟ್ಟ ಪ್ರಧಾನಿ!  ಮೋದಿ ಮಾತಿನ ಪೂರ್ತಿ ವಿವರ ಇಲ್ಲಿದೆ



ಪ್ರಧಾನಿ ನರೇಂದ್ರ ಮೋದಿ ಆಯನೂರಿಗೆ ಆಗಮಿಸಿದ್ಧಾರೆ. ತುಂಬಿದ ಸಭೆಯಲ್ಲಿ ಮೋದಿ ಮೋದಿ ಮೋದಿ ಎಂಬ ಘೋಷಣೆಗಳ ಜೊತೆಜೊತೆಗೆ ಮಾತು ಆರಂಭಿಸಿದ ಅವರು, ಇಲ್ಲಿನ ಮಹನೀಯರು ಹಾಗೂ ದೇವತೆಗಳನ್ನು ಸ್ಮರಿಸಿದರು. ಅವರ ಮಾತಿನ ಪೂರ್ಣ ವಿವರ ಇಲ್ಲಿದೆ. 

 ಮಲೆನಾಡಿನ ಮಡಿಲು ಸೌಂದರ್ಯದ ಹೊನಲು, ಶಿವಮೊಗ್ಗದ ಜನತೆಗೆ ನಮಸ್ಕಾರಗಳು, ಕುವೆಂಪುರವರ ಈ ನೆಲೆಗೆ ನಾನು ಶ್ರದ್ಧಾಪೂರ್ವಕವಾಗಿ ನಮಸ್ಕರಿಸುತ್ತೇವೆ, ದೇವಿ ಸಿಗಂದೂರು ಚೌಡೇಶ್ವರಿಗೂ ತಲೆಭಾಗಿ ನಮಸ್ಕರಿಸುತ್ತೇನೆ. ಕೋಟೆ ಆಂಜನೇಯ ಸ್ವಾಮಿ ಶಿವಮೊಗ್ಗದಲ್ಲಿ, ಆ ದೇವರಿಗೆ ಇವತ್ತು ಇಡೀ ಹಿಂದೂಸ್ತಾನ ಪ್ರಣಾಮ ಮಾಡುತ್ತಿದೆ. ಪೂಜ್ಯ ಶ್ರೀಧರಸ್ವಾಮಿಯವರಿಗೂ ಶ್ರದ್ಧೆಯಿಂದ ನಮಸ್ಕರಿಸುತ್ತೇನೆ. ನ

ನಾನು ಯಡಿಯೂರಪ್ಪನವರ ಜನ್ಮದಿನದಂದು ಶಿವಮೊಗ್ಗಕ್ಕೆ ಬಂದಿದ್ದೇನೆ. ಕೆಲದಿನಗಳ ಹಿಂದೆ ಈಶ್ವರಪ್ಪನವರೊಂದಿಗೆ ಫೋನ್​ನಲ್ಲಿ ಮಾತನಾಡಿದ್ದೇನೆ. ಶಿವಮೊಗ್ಗವೂ ನಮ್ಮೆಲ್ಲರಿಗೂ ಬಹಳಷ್ಟು ಸ್ನೇಹ, ವಿಶ್ವಾಸ ಹಾಗೂ ಭರವಸೆ ನೀಡಿದೆ. ಇವತ್ತು ನನಗೆ ನಂಬಿಕೆ ಮೂಡಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬರಲಿದೆ ಎಂಬುದು ಖಾತರಿಯಾಗಿದೆ. ಯಡಿಯೂರಪ್ಪನವರು ಕೈಗೊಂಡ ಸಂಕಲ್ಪ ಪೂರ್ಣಗೊಳ್ಳಲಿದೆ. ಪೂರ್ಣ ಕರ್ನಾಟಕ ಹೇಳುತ್ತಿದೆ. ಈ ಭಾರೀಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಹೇಳುತ್ತಿದೆ.

ಕರ್ನಾಟಕದಲ್ಲಿ ಹೋದಲೆಲ್ಲಾ ನನ್ನ ಮೇಲೆ ಎಷ್ಟು ಪ್ರೀತಿಯಿದೆ ಎಂದರೆ, ನನ್ನ ಹಾಗೂ ನಿಮ್ಮಗಳ ಪ್ರೀತಿಯ ನಡುವೆ ಭಾಷೆ ಎಂದು ಅಡ್ಡಿಯಾಗಿಲ್ಲ. ಈ ಪ್ರೀತಿಯನ್ನ ನಾನೆಂದಿಗೂ ಮರೆಯೋದಿಲ್ಲ. ಇಲ್ಲಿಗೆ ಬರುವುದಕ್ಕೂ ಮೊದಲು ಬೆಂಗಳೂರಿನಲ್ಲಿ ಜನತಾ ಜನಾರ್ಧನರರ ದರ್ಶನಕ್ಕೆ ಬಂದಿದ್ದೆ. ಯಾವುದೇ ಪಕ್ಷ ಬೆಳಗ್ಗೆ 11 ಗಂಟೆಗೂ ಮೊದಲು ಯಾವುದೇ ಕಾರ್ಯಕ್ರಮ ಸಂಘಟಿಸಲು ಮುಂದಾಗುವುದಿಲ್ಲ. ಆದರೆ ಇವತ್ತು ನಾನು ಬೆಳಗ್ಗೆ ಬೆಳಗ್ಗೆ ಜನತೆಯ ದರ್ಶನಕ್ಕೆ ಹೊರಟಿದ್ದೆ, ಈಶ್ವರ ರೂಪಿ ಜನರು ಪುಷ್ಟವೃಷ್ಟಿ ಮಾಡಿದರು. ಇವತ್ತು ಬಹಳಷ್ಟು ದೂರದ ರೋಡ್​ ಶೋ ಇತ್ತು. ಆದರೆ ಇವತ್ತು ನೀಟ್ ಎಕ್ಸಾಮ್​ ಇದೆ ಎಂದು ಗೊತ್ತಾಯ್ತು. ಹಾಗಾಗಿ ನಾನು ಹೇಳಿದೆ, ಇವತ್ತು ಮಕ್ಕಳ ಎಕ್ಸಾಮ್​ ಇದೆ ನಮ್ಮ ಪರೀಕ್ಷೆ ಮೇ 10 ಕ್ಕಿದೆ. ಹಾಗಾಗಿ ಮಕ್ಕಳ ಎಕ್ಸಾಮ್​ಗೆ ಅವಕಾಶ ಕಲ್ಪಿಸಬೇಕು ಎಂದೆ. ಅದೇ ಕಾರಣಕ್ಕೆ ಬೆಳಗ್ಗೆ ಬೆಳಗ್ಗೆ ನಾವು ರೋಡ್ ಶೋ  ಆಯೋಜಿಸಿದ್ದವು. ಆದರೆ ಬೆಂಗಳೂರಿನಲ್ಲಿ ಸಿಕ್ಕ ಪ್ರೋತ್ಸಾಹ ಮರೆಯಲಾಗದು. ನಾನು ಕರ್ನಾಟಕಕ್ಕೆ ಋಣಿಯಾಗಿದ್ದೇನೆ. 

ಇಡೀ ರಾಜ್ಯ ಸ್ನೇಹ, ವಿಶ್ವಾಸ ತೋರುತ್ತಿದೆ. ಇವತ್ತು ಶಿವಮೊಗ್ಗದ ಈ ನೆಲದಿಂದ, ರೈತ ಬಂದು ಯಡಿಯೂರಪ್ಪನವರ ನೆಲದಿಂದ ಇಡೀ ಕರ್ನಾಟಕಕ್ಕೆ ವಿಶ್ವಾಸ ನೀಡುತ್ತೇನೆ. ಅಸಲಿ ಗ್ಯಾರಂಟಿ ನೀಡುತ್ತೇನೆ. ನೀವು ಕೊಟ್ಟ ಪ್ರೀತಿ, ಆಶೀರ್ವಾದವನ್ನು ಕರ್ನಾಟಕದ ಅಭಿವೃದ್ಧಿಯನ್ನು ಮಾಡಿ, ಬಡ್ಡಿ ಸಮೇತ ನಿಮಗೆ ಹಿಂತಿರುಗಿಸುತ್ತೇನೆ 

ಕಾಂಗ್ರೆಸ್​ ತನ್ನ ಸುಳ್ಳನ್ನು ಹರಡಲು ಒಂದು ಇಕೋ ಸಿಸ್ಟಮ್​ ಮಾಡಿತ್ತು. ಸುಳ್ಳಿನ ಬಲೂನ್​ಗಳನ್ನ ಸೃಷ್ಟಿಸಲಾಗುತ್ತಿದೆ. ಸುಳ್ಳಿನ ಗಾಳಿ ತುಂಬಿ ಬಲೂನ್​ಗಳನ್ನ ಹರಿಬಿಡಲಾಗುತ್ತಿದೆ. ಬೇರೆಯದ್ದೆ ಸತ್ಯವನ್ನ ಹೊಂದಿರುವ ಸುಳ್ಳನ್ನು ಹರಿಬಿಡಲಾಗುತ್ತಿದೆ. ಆದರೆ ರಾಜ್ಯದ ಜನತೆಗೆ ಕಾಂಗ್ರೆಸ್​ನ ಸುಳ್ಳಿನ ಅಸಲಿಯತ್ತು ಗೊತ್ತಿದೆ. ಜನತೆಯ ನಿರ್ಧಾರ ಕಾಂಗ್ರೆಸ್​ನ ಸುಳ್ಳಿನ ಬಲೂನ್​ನನ್ನ ಒಡೆದು ಚೂರು ಚೂರು ಮಾಡುತ್ತದೆ. ಹಾಗಾಗಿ ಕಾಂಗ್ರೆಸ್​ ಹೆದರಿದೆ, ಹೀಗಾಗಿ ಒಬ್ಬರ ವಿರುದ್ಧ ಇನ್ನೊಬ್ಬರು ಆರೋಪ ಮಾಡಲು ಶುರುಮಾಡಿದ್ದಾರೆ. 

ಬಂದು ಭಗಿನಿಯರೇ ಈ ಕ್ಷೇತ್ರ, ದೇಶದಲ್ಲೆ ವಿಶಿಷ್ಟ ಕ್ಷೇತ್ರವಾಗಿದೆ. ಇಲ್ಲಿಯ ಫಸಲು ಸಾಕಷ್ಟು ವಿಶೇಷವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯ ಅಡಿಕೆ ಆಮದು ನೀತಿಯನ್ನು ಒಮ್ಮೆ ತುಲನೆ ಮಾಡಿ ನೋಡಿ, ಆಗ ನಿಮಗೆ ಅರ್ಥವಾಗುತ್ತದೆ ಯಾವ ಪಕ್ಷ ನಿಮಗೆ ಆತ್ಮೀಯವಾಗಿದೆ ಎಂದು ಗೊತ್ತಾಗುತ್ತದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, ಅಡಿಕೆ ಆಮದು ಸಮಸ್ಯೆ ಎದುರಾಗಿತ್ತು. ಆಗ ಅವರು ಗುಜರಾತ್​ಗೆ ಬಂದು ಅಡಿಕೆ ಆಮದು ಸಮಸ್ಯೆಯ ವಿಚಾರವಾಗಿ ಮಾತನಾಡಲು ಬಂದಿದ್ದರು. ಆಗ ಅವರು ಹೇಳಿದಂತೆ ನಾನು ನಡೆದುಕೊಂಡಿದೆ. 

ಕಾಂಗ್ರೆಸ್​ ವಿದೇಶದಿಂದ ಕಡಿಮೆ ಬೆಲೆಯಿಂದ ಅಡಿಕೆ ಆಮದು ಮಾಡಿಕೊಳ್ಳಲು ಮುಂದಾಗಿತ್ತು. ಆದರೆ ಇದು ಮಲೆನಾಡಿನ ಅಡಿಕೆ ಬೆಲೆ ಮೇಲೆ ಪರಿಣಾಮ ಬೀರಿತ್ತು. ಆದರೆ ಕಾಂಗ್ರೆಸ್ ಇದರ ಬಗ್ಗೆ ಗಮನವನ್ನೇ ಹರಿಸಿಲ್ಲ. ಆದರೆ ನನ್ನನ್ನ ಆಯ್ಕೆ ಮಾಡಿ ದೆಹಲಿಗೆ ಕಳುಹಿಸಿದಾಗ ಅಡಿಕೆ ಆಮದು ಮೇಲೆ ಮಿಮಿಮಮ್​ ಇಂಪೋರ್ಟ್​ ಬೆಲೆಯನ್ನ ಕೆಜಿಗೆ 350 ನಷ್ಟು ಇರಿಸಿದೆ.  ಇಷ್ಟು ದೊಡ್ಡ ಮೊತ್ತ ಕೊಟ್ಟು ಆಮದು ಮಾಡುವ ದೈರ್ಯ ಯಾರು ತೋರುತ್ತಾರೆ. ಇದರ ಫಲ ಕರ್ನಾಟಕದ ರೈತರಿಗೆ ಸಿಕ್ಕಿದೆ. 

ಇದರ ಜೊತೆಯಲ್ಲಿ ಬಿಜೆಪಿ ಸರ್ಕಾರ, ಕೃಷಿ ಆಧಾರಿತ ರಪ್ತು ಯೋಜನೆಯನ್ನು ಕೈಗೊಳ್ಳುತ್ತಿದೆ. ಕೊರೊನಾ ಕಾಲದಲ್ಲಿ ದಾಖಲೆ ಪ್ರಮಾಣದಲ್ಲಿ ಕೃಷಿ ಆಧಾರಿತ ರಪ್ತುವನ್ನು ಕೈಗೊಂಡಿದ್ದೇವೆ. ಇದರ ಲಾಭ ರೈತರಿಗೆ ಅನುಕೂಲವಾಗಿದೆ. ಬೀಜದಿಂದ ಬಜಾರ್​ನವರೆಗೂ ಹಲವು ಅನುಕೂಲಗಳನ್ನ ಬಿಜೆಪಿ ಸರ್ಕಾರ ನೀಡಿದೆ. 2 ಸಾವಿರ ಕ್ಕೂ ಅಧಿಕ ವಿಭಿನ್ನ ಬೀಜಗಳನ್ನ ತಯಾರು ಮಾಡಿದ್ಧೇವೆ, ಉಕ್ರೇನ್ ಹಾಗೂ ರಷ್ಯಾದ ಸಂಕಷ್ಟದಿಂದ ರಸಗೊಬ್ಬರದ ಬೆಲೆ ಗಗನಕ್ಕೆ ಏರಿದೆ. ಆದರೆ ಇದರ ಪರಿಣಾಮ ರೈತರ ಮೇಲೆ ಬೀರಲು ನಾವು ಬಿಡಲಿಲ್ಲ. ಯೂರಿಯಾ ಬೆಲೆ ಏರಿಕೆಯಿಂದ 2 ಲಕ್ಷ ಕೋಟಿ ರೂಪಾಯಿ ಹೊರೆ ರೈತರ ಮೇಲೆ ಬೀರುತ್ತಿತ್ತು. ಆದರೆ, ನಿಮ್ಮ ಮಗ ದಹೆಲಿಯಲ್ಲಿ ಕುಳಿತಿದ್ದ, ಆ ಭಾರ ರೈತರ ಮೇಲೆ ಬೀರಲು ಬಿಡಲಿಲ್ಲ. 



ಕಾಂಗ್ರೆಸ್​ನ ಕಮಿಷನ್​ ಕಾಲದ ಯುಗದಲ್ಲಿ, ರೈತರು ಬ್ಯಾಂಕಿಂಗ್​ ಸಿಸ್ಟಮ್​ನಿಂದ ಹೊರಕ್ಕೆ ಇದ್ದರು, ನಾವು ಕಿಸಾನ್ ಕ್ರೆಡಿಟ್ ಕಾರ್ಡ್​ ಜಾರಿಗೆ ತಂದಿದ್ದೇವೆ, ಪಿಎಂ ಕಿಸಾನ್​ ಸಮ್ಮಾನ್​ ನೀತಿಯಿಂದ 18 ಕೋಟಿ ರೂಪಾಯಿ ಕರ್ನಾಟಕದ ರೈತರ ಅಕೌಂಟ್​ಗೆ ಜಮಾ ಮಾಡಿದ್ದೇವೆ. ಶಿವಮೊಗ್ಗ ಅಕ್ಕಾಮಹಾದೇವಿಯವರ ಜನ್ಮಭೂಮಿ. ಅವರ ಶಕ್ತಿಯನ್ನು ಪರಾಮರ್ಶಿಸಿ ಜಗತ್ಜ್ಯೋತಿ ಬಸವಣ್ಣರವರು ಅವರನ್ನು ಅಕ್ಕಾ ಎಂದು ಕರೆಯುತ್ತಿದ್ದರು. ಅವರ ವಚನಗಳನ್ನು ಕೇಳುವ ಅದೃಷ್ಟ ನಮಗೆ ಸಿಕ್ಕಿದೆ ಎಂದರು. 

ಬಿಜೆಪಿ ಆದುನಿಕ ವ್ಯವಸ್ಥೆಯಲ್ಲಿ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಯಾವುದೇ ಅಡೆತಡೆ ಆಗುತ್ತಿಲ್ಲ. ಇದರಿಂದ ಅವರಿಗೆ ಇನ್ನಷ್ಟು ಸಾಧನೆ ಮಾಡಲು ಅವಕಾಶ ಸಿಗುತ್ತಿದೆ. ಪ್ರತಿ ಕ್ಷೇತ್ರದಲ್ಲಿಯು ಇದರಿಂದ ಮಹಿಳೆಯರ ಕ್ರಾಂತಿಯಾಗುತ್ತಿದೆ.  ಮಹಿಳೆಯರಿಗಾಗಿ ಸೈನಿಕರ ಸ್ಕೂಲ್​ನ್ನ ಕೂಡ ತೆರೆಯಲಾಗಿದೆ. ಅವರುಗಳ ಮೇಲೆ ಅಕ್ಕಾಮಹಾದೇವಿಯವರ ಆಶೀರ್ವಾದ ಇದೆ.  ಇದೇ ನಾರಿಯ ಶಕ್ತಿ ಭಾರತವನ್ನು ವಿಶ್ವದಲ್ಲಿ ಮತ್ತಷ್ಟು ಮುಂದಕ್ಕೆ ತೆಗೆದುಕೊಂಡು ಹೋಗಲಿದೆ. 



ನಾನು ಫಸ್ಟ್ ಟೈಂ ವೋಟರ್​​ಗಳ ಬಳಿ ಒಂದು ಸವಾಲನ್ನು ಮಾಡುತ್ತೇನೆ. ಭಷ್ಟ್ರಾಚಾರ ಹಾಗೂ ತುಷ್ಟಿಕರಣವನ್ನು ಹೊಂದಿರುವ ಕಾಂಗ್ರೆಸ್​ ಅಭಿವೃದ್ದಿಯನ್ನು ಕೈಗೊಳ್ಳಲು ಸಾಧ್ಯವೆ. ನಿಮ್ಮ ತಂದೆ, ತಾಯಿ, ಹಿರಿಯರು ಅನುಭವಿಸಿದ ಸಂಕಷ್ಟವನ್ನು ನಿಮ್ಮ ಮೋದಿ ನಿವಾರಿಸಿದ್ದಾರೆ. ಏಕೆಂದರೆ, ನೀವು ಮುಂದೆ ಬರಲು ಸಾಧ್ಯವಾಗಲಿ ಎಂಬ ಕಾರಣಕ್ಕಾಗಿ.. 

ಕಾಂಗ್ರೆಸ್ ಎಂದಿಗೂ ಯುವಕರ ಬಗ್ಗೆ ಯೋಚಿಸಲಿಲ್ಲ. ಆದರೆ ಇದು ಬಿಜೆಪಿ ಸರ್ಕಾರ. ಪ್ರತಿ ಎರಡು ದಿನಗಳಲ್ಲಿ ಒಂದು ಕಾಲೇಜು ಸೃಷ್ಟಿಯಾಗುತ್ತಿದೆ. ಪ್ರತಿ ಒಂದು ವಾರದಲ್ಲಿ ಒಂದು ವಿವಿ ಸ್ಥಾಪನೆಯಾಗಿದೆ. ಕಳೆದ 9 ವರ್ಷಗಳಲ್ಲಿ 300 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜು ಸ್ಥಾಪಿಸಲಾಗಿದೆ. ಪತ್ರ ವ್ಯವಹಾರದಲ್ಲಿ ಸುತ್ತಾಡುವುದನ್ನು ತಪ್ಪಿಸಿದೆ. ಗ್ರೂಪ್​ ಡಿ ಹುದ್ದೆಯಲ್ಲಿ ಸಂದರ್ಶನದ ಸಮಸ್ಯೆಯನ್ನು ತಪ್ಪಿಸಿದೆ. ಆದರೆ ಬ್ಯಾಂಕ್​ನಲ್ಲಿ ಸಾಲ ಪಡೆಯಲು ಗ್ಯಾರಂಟಿ ನೀಡಲು ಯುವಕನೊಬ್ಬ ಎಷ್ಟು ಸಮಸ್ಯೆಯಾಗುತ್ತದೆ ಎಂದು ಅರ್ಥ ಮಾಡಿಕೊಳ್ಳಲಿಲ್ಲ. ಆದರೆ ಮುದ್ರಾ ಯೋಜನೆ ಮೂಲಕ ದೇಶಧ ನೌಜವಾನ್​ಗೆ ಯಾವುದೇ ಗ್ಯಾರಂಟಿಯಿಲ್ಲದೇ 20 ಲಕ್ಷ ರೂಪಾಯಿ ಸಾಲ ನೀಡಲಾಗುತ್ತಿದೆ.  ಇದರಿಂದ ದೇಶದ ಯುವಕರು ಹೊಸ ಉದ್ದಿಮೆಯನ್ನು ಸ್ಥಾಪಿಸಲು ಅನುಕೂಲವಾಗಿದೆ. 

ಕಾಂಗ್ರೆಸ್​ನ ಅಭಿವೃದ್ಧಿ ಬರೀ ಪೇಪರ್​ನಲ್ಲಿರುತ್ತದೆ .ಕಾಂಗ್ರೆಸ್ ಕರ್ನಾಟಕದಲ್ಲಿ ಭರವಸೆ ನೀಡಿದೆ. ಮುಂದಿನ 5 ವರ್ಷದಲ್ಲಿ 10 ಲಕ್ಷ ನೌಕರಿ ನೀಡುತ್ತದೆ ಎಂದು ಗ್ಯಾರಂಟಿ ನೀಡಿದೆ. ಆದರೆ ಇದು ಸುಳ್ಳು ಎಂದು ಗೊತ್ತಾಗುತ್ತದೆ. ಒಂದು ವರ್ಷದಲ್ಲಿ 2 ಲಕ್ಷ ನೌಕರಿ ಎಂಬುದು ದೊಡ್ಡ ಸುಳ್ಳಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಕೇವಲ ಮೂರುವರೆ ವರ್ಷ ಅಧಿಕಾರದಲ್ಲಿತ್ತು. ಕೊರೊನಾ ಮಹಾಮಾರಿ ಸಂಕಷ್ಟದಲ್ಲಿದ್ದ ಸಮಯದಲ್ಲಿ ಅಧಿಕಾರದಲ್ಲಿತ್ತು. ಇದರ ಹೊರತಾಗಿಯು, ಬಿಜೆಪಿ ಸರ್ಕಾರ ಪ್ರತಿ ವರ್ಷ 13 ಲಕ್ಷಕ್ಕೂ ಫಾರ್ಮಲ್​ ಜಾಬ್​ ಸೃಷ್ಟಿಸಿದೆ. ಆದ್ದರಿಂದ ಕಾಂಗ್ರೆಸ್​ಗೆ ಅಧಿಕಾರ ಕೊಟ್ಟರೇ ಅಭಿವೃದ್ಧಿಯನ್ನು ರಿವರ್ಸ್​ ಗೇರ್​ಗೆ ಹಾಕುತ್ತದೆ. 

ಅವರ ನೀತಿಯಿಂದ ಹೂಡಿಕೆದಾರರು ಕರ್ನಾಟಕದಿಂದ ಹೊರಕ್ಕೆ ಹೋಗುತ್ತಾರೆ. ಬಿಜೆಪಿ ಹೂಡಿಕೆದಾರರಿಗಾಗಿ ಕೈಗೊಂಡ ನೀತಿಯನ್ನು ಕಾಂಗ್ರೆಸ್ ತೆಗೆದುಹಾಕಲು ಹೊರಟಿದೆ. ಶಿವಮೊಗ್ಗ ಆಟೋಮೊಬೈಲ್​ ಪಾರ್ಟ್​ಗಳ ಹಬ್​ ಆಗಿದೆ. ಮಲೆನಾಡಿನ ಹೆಬ್ಬಾಗಿಲಿನಲ್ಲಿ ಜೋಗವಿದೆ. ಗಂಗಾಸ್ನಾನ ತುಂಗಾಪಾನ ಎಂಬುದು ಇಲ್ಲಿನ ಜನರಿಗೆ ಗೊತ್ತಿದೆ. ರಾಷ್ಟ್ರಕವಿ ಕುವೆಂಪುರವರ ರಾಷ್ಟ್ರಭಕ್ತಿ, ಏಸೂರು ಕೊಟ್ಟರೂ ಈಸೂರು ಬಿಡವು ಎಂಬ ಹೋರಾಟದ ನುಡಿ ನಮಗೆ ಗೊತ್ತಿದೆ. 

ಆದರೆ ಕಾಂಗ್ರೆಸ್​ ನಮ್ಮ ದೈಯ, ನಮ್ಮ ಹೋರಾಟವನ್ನು ಕಡೆಗಣಿಸಿ ತುಷ್ಟೀಕರಣದ ನೀತಿಯನ್ನು ಅನುಸರಿಸುತ್ತಿದೆ. ಆದರೆ ಬಿಜೆಪಿ ನಮ್ಮ ಐತಿಹ್ಯವನ್ನು ಮೆರೆಯುವುದಿಲ್ಲ. ಹಳ್ಳಿ ಅಥವಾ ನಗರ ಯಾವುದೇ ಇರಲಿ. ನಿಮ್ಮ ಒಂದೊಂದು ವೋಟು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಅನುಕೂಲ ಮಾಡಿಕೊಡುತ್ತದೆ. ಮೋದಿ, ಯಡಿಯೂರಪ್ಪ, ಈಶ್ವರಪ್ಪ ಬಂದರು ಎಂದು ಮಲಗಬೇಡಿ, ಬೂತ್​ ಬೂತ್​ಗಳಿಗೆ ಹೋಗಿ ಪ್ರತಿ ಬೂತ್​ಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ, ನಾನು ಫಲಿತಾಂಶವನ್ನು ಖಂಡಿತ ನೋಡುತ್ತೇನೆ. 

ನನ್ನ ಒಂದು ಕೆಲಸಮಾಡಿಕೊಡಿ, ಇದು ನನ್ನ ಖಾಸಗಿ ಕೆಲಸ ಮಾಡಿಕೊಡಿ, ನಿಮ್ಮ ಮೊಬೈಲ್​ನ ಪ್ಲಾಶ್ ಲೈಟ್ ಆನ್​ ಮಾಡಿ ನನಗೆ ಹೇಳಿ, ನಿಮ್ಮ ಧ್ವನಿ ದೆಹಲಿ ತಲುಪಬೇಕು. ನೀವು ಪ್ರತಿಯೊಂದು ಮನೆಗೆ ಹೋಗಬೇಕು. ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಬಂದಿದ್ದರು, ಅವರು ತಮ್ಮ ನಮಸ್ಕಾರವನ್ನು ನಿಮಗೆ ತಲುಪಿಸಿದ್ದಾರೆ ಎಂದು ಹೇಳಬೇಕು. ಪ್ರತಿ ಮನೆಗೂ ನನ್ನ ನಮಸ್ಕಾರ ತಲುಪಬೇಕು. ಆಗ ಪ್ರತಿ ಮನೆಯಲ್ಲಿಯು ನನಗೆ ಇನ್ನಷ್ಟು ಕೆಲಸ ಮಾಡಲು ಆಶೀರ್ವಾದ ಸಿಗುತ್ತದೆ ಎಂದರು  

 

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media