ಮಲಗಿದ್ದ ವೇಳೆ ಕಚ್ಚಿದ ಹಾವು! ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಯುವತಿ ಸಾವು!

Snake bites while sleeping! Young woman dies due to lack of timely treatment

ಹಂಚಿಕೊಳ್ಳಿ
WhatsApp Facebook X Telegram
ಸುದ್ದಿ ಸಾರಾಂಶ

Snake bites while sleeping! Young woman dies due to lack of timely treatment

KARNATAKA NEWS/ ONLINE / Malenadu today/ May 23, 2023 SHIVAMOGGA NEWS

ಸೊರಬ/ ಮಲಗಿದ್ದಾಗ ಹಾವು ಕಚ್ಚಿದ್ದ,  ಬಳಿಕ ಅನಾರೋಗ್ಯಕ್ಕೀಡಾಗಿ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಸೊರಬ ತಾಲ್ಲೂಕಿನ ಆನವಟ್ಟಿ ಹೋಬಳಿಯಲ್ಲಿ ಸಂಭವಿಸಿದೆ

ನಡೆದಿದ್ದೇನು?

ಇಲ್ಲಿನ ನಿವಾಸಿ ಯುವತಿ, ಕಳೆದ ನಾಲ್ಕು ದಿನದ ಹಿಂದೆ, ಮಲಗಿದ್ಧಾಗ ಹಾವು ಕಚ್ಚಿದೆ ಎಂದು ಪೋಷಕರಿಗೆ ತಿಳಿಸಿದ್ಧಾರೆ. ಆದರೆ ಪೋಷಕರಿಗೆ ಹಾವು ಕಾಣಿಸದ ಹಿನ್ನೆಲೆಯಲ್ಲಿ ತಪ್ಪಾಗಿ ಭ್ರಮಿಸಿರಬೇಕು ಎಂದು ಭಾವಿಸಿ ಸುಮ್ಮನಾಗಿದ್ದರು. ಆದರೆ ಯುವತಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ದಿನ ಕಳೆದ ಬಳಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ಧಾರೆ. ಮೊದಲು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿದ ಪೋಷಕರು ನಂತರ ಶಿಕಾರಿಪುರ ಆಸ್ಪತ್ರೆಗೆ ದಾಖಲಿಸಿದ್ಧಾರೆ., ಅಲ್ಲಿಂದ  ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಯುವತಿಯನ್ನ ಅಡ್ಮಿಟ್ ಮಾಡಿದ್ದಾರೆ. ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವನ್ನಪ್ಪಿದ್ದಾರೆ.  

ಐಎಎಸ್ ಪರೀಕ್ಷೆ ಪಾಸಾದ ಶಿವಮೊಗ್ಗದಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಡಿಸಿಎಫ್​ ಪುತ್ರಿ

ಶಿವಮೊಗ್ಗ, ಜಿಲ್ಲೆಯಲ್ಲಿ ಡಿಸಿಎಫ್​ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಐಎಂ ನಾಗರಾಜ್​ರವರ ಪುತ್ರಿ ಐಎನ್​ ಮೇಘನಾ  ಕೇಂದ್ರ ಲೋಕಾಸೇವಾ ಆಯೋಗ ನಡೆಸುವ ಯುಪಿಎಸ್​ಸಿ ಪರೀಕ್ಷೆಯಲ್ಲಿ  ಪಾಸ್ ಆಗಿದ್ದಾರೆ. ಇವತ್ತು ಅವರ ಫಲಿತಾಂಶ ಹೊರಬಿದ್ದಿದ್ದು 617 ರ್ಯಾಂಕ್ ಪಡೆದಿದ್ದಾರೆ. 

ಈ ಹಿಂದೆಯು ಕಳೆದ ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದ ಮೇಘನಾ ಸಂದರ್ಶನ ಎದುರಿಸಿದ್ದರು. ಇದು ಅವರ ಎರಡನೇ ಪ್ರಯತ್ನವಾಗಿದೆ. ಬೆಂಗಳೂರಲ್ಲಿರುವ  ಇನ್‌ಸೈಟ್ಸ್ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ ತರಬೇತಿ  ಅವರ ತರಭೇತಿ ಪಡೆದಿದ್ಧಾರೆ. 

ಶಿವಮೊಗ್ಗದ ಪೇಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬೆಂಗಳೂರಿನ  ಬಿಎಂಎಸ್ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಇನ್ನೂ ಮಗಳ ಸಾಧನೆಗೆ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದು, ಅಧಿಕಾರಿಯಾಗಿ ಹೊರಹೊಮ್ಮುವ ವಿಶ್ವಾಸ ವ್ಯಕ್ತಪಡಿಸಿದ್ಧಾರೆ. 

 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor