ಬಾಳೆ ಮುರಿದು, ಅಡಿಕೆ ಕಡಿದು, ಪಂಪ್​ಸೆಟ್​ ಒಡೆದು, ಪೈಪ್​ ಕದ್ದೊಯ್ದ ದುಷ್ಕರ್ಮಿಗಳು!

ಹಂಚಿಕೊಳ್ಳಿ
WhatsApp Facebook X Telegram
ಬಾಳೆ ಮುರಿದು, ಅಡಿಕೆ ಕಡಿದು, ಪಂಪ್​ಸೆಟ್​ ಒಡೆದು, ಪೈಪ್​ ಕದ್ದೊಯ್ದ ದುಷ್ಕರ್ಮಿಗಳು!
Shimoga news Areca Nut Theft Copper Utensils Theft Woman Narrowly Escapes Chain Snatching Attempt in Soraba While Riding Scooty

Areca and Banana Crops / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸೊರಬ ತಾಲೂಕಿನ ತತ್ತೂರು -ವಡ್ಡಿಗೇರಿ ಗ್ರಾಮದ ರೈತ ರಮೇಶ್ ಅವರ ತೋಟದಲ್ಲಿ ಕಿಡಿಗೇಡಿಗಳು ಗಿಡಗಳನ್ನು ಅಡಿಕೆ ಹಾಗೂ ಬಾಳೆ ಧ್ವಂಸಗೊಳಿಸಿ, ಕೊಳವೆಬಾವಿಯ ವಿದ್ಯುತ್ ವೈರ್, ಪೈಪ್‌ಗಳನ್ನು ಕಳವು ಮಾಡಿದ ಘಟನೆ ಬಗ್ಗೆ ನಿನ್ನೆ ದಿನ ವರದಿಯಾಗಿದೆ.

ತೋಟದಲ್ಲಿದ್ದ ಅಡಿಕೆ ಹಾಗೂ ಬಾಳೆ ಗಿಡಗಳನ್ನು ಬೇರು ಸಮೇತ ಕಿತ್ತು ಎಸೆದಿರುವ ದುಷ್ಕರ್ಮಿಗಳು ಮತ್ತೊಂದಿಷ್ಟು ಗಿಡಗಳನ್ನು ಮುರಿದು ಹಾಳು ಮಾಡಿದ್ದಾರೆ. ಜೊತೆಗೆ ಕೊಳವೆಬಾವಿಯ ವಿದ್ಯುತ್ ವೈರ್, ಪೈಪ್‌ಗಳನ್ನು ಕಳವು ಮಾಡಿ, ಸ್ವಿಚ್​ ಬೋರ್ಡ್‌ನ್ನು ಧ್ವಂಸಗೊಳಿಸಿರುವುದಾಗಿ ರೈತ ರಮೇಶ್ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಸೊರಬ ತಾಲೂಕಿನ ತತ್ತೂರು ಗ್ರಾಮದ ಸರ್ವೇ ನಂ.166/1ರ ಒಂದು ಎಕರೆ .166/100 10 ಗುಂಟೆ ಜಮೀನಿನ ಸರ್ವೇ ವೇಳೆ ಎಂಟು ಗುಂಟೆ ಒತ್ತುವರಿ ಜಮೀನು ತಮ್ಮ ಪಾಲಿಗೆ ಬಂದಿತ್ತು. ಈ ವಿಚಾರವಾಗಿ ಒತ್ತುವರಿ ದಾರರಿಂದ ತೊಂದರೆ ಎದುರಾಗುತ್ತಿತ್ತು. ಈ ಹಿಂದೆಯೂ ತಮ್ಮ ತೋಟದ ಅಡಿಕೆ ಗಿಡಗಳನ್ನು ಕತ್ತರಿಸಿದ್ದರಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಅಡಿಕೆ ಗಿಡಗಳನ್ನು ಕಡಿದಂತೆ ನಿನ್ನನ್ನೂ ಕಡಿಯುತ್ತೇನೆ ಎಂದು ಜೀವ ಬೆದರಿಕೆಯನ್ನೂ ಹಾಕಲಾಗಿತ್ತು ಎಂದು ಆರೋಪಿಸಿದ್ದಾರೆ.

ಈಗ ನಡೆದಿರುವ ಕೃತ್ಯದಲ್ಲೂ ಅವರದ್ದೇ ಕೈವಾಡ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ ರಮೇಶ್, ಈ ಘಟನೆಯಿಂದ ಅಂದಾಜು 1.50 ಲಕ್ಷ ನಷ್ಟ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor