ನಿರ್ದಿಷ್ಟ ಮನೆಗಳನ್ನ ಟಾರ್ಗೆಟ್ ಮಾಡಿ ಕಲ್ಲು ತೂರಿದ ಆರೋಪ!

In Shivamogga city, selected houses have been targeted and stone-pelted.

ನಿರ್ದಿಷ್ಟ ಮನೆಗಳನ್ನ ಟಾರ್ಗೆಟ್ ಮಾಡಿ ಕಲ್ಲು ತೂರಿದ ಆರೋಪ!

KARNATAKA NEWS/ ONLINE / Malenadu today/ May 11, 2023 GOOGLE NEWS  

ಶಿವಮೊಗ್ಗ/ ಇಲ್ಲಿನ ಜೆಸಿನಗರದಲ್ಲಿ ಆಯ್ದ ಮನೆಗಳನ್ನು ಟಾರ್ಗೆಟ್ ಮಾಡಿ ರಾತ್ರಿ ಹೊತ್ತು ಕಲ್ಲು ತೂರಾಟ ಮಾಡಲಾಗ್ತಿದೆ ಎಂದು ಆರೋಪಿಸಲಾಗಿದೆ. ಕಳೆದ ಮೂರು ನಾಲ್ಕು ತಿಂಗಳಿಂದ ಮನೆಯ ಮೇಲೆ ಕಲ್ಲುಗಳು ಬಂದು ಬೀಳುತ್ತಿದ್ದು, ಒಕ್ಕಲೆಬ್ಬಿಸುವ ಉದ್ದೇಶಕ್ಕಾಗಿ ಹೀಗೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. 

ಚೋರಡಿಯಲ್ಲಿ ಅಪಘಾತ/ ಮೆಗ್ಗಾನ್​ ಆಸ್ಪತ್ರೆಗೆ ಬಿವೈ ರಾಘವೇಂದ್ರ, ಬಿ.ವೈ ವಿಜಯೇಂದ್ರ ದೌಡು/ಸಾವು ನೋವಿನ ಬಗ್ಗೆ ಎಸ್​ಪಿ ಮಿಥುನ್ ಕುಮಾರ್  ಕೊಟ್ಟ ನಿಖರ ಮಾಹಿತಿ ಇಲ್ಲಿದೆ 

ಮಾರನವಮಿ ಬೈಲ್ ಬಳಿ ಇರುವ ಕೆಲವು ಮನೆಗಳ ಮೇಲೆ ಉದ್ದೇಶಪೂರ್ವಕವಾಗಿ ದುಷ್ಕರ್ಮಿಗಳು ಕಲ್ಲು ತೂರುತ್ತಿದ್ದಾರೆ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಬಿಯರ್ ಬಾಟಲಿ ಸೇರಿದಂತೆ ಇಟ್ಟಿಗೆ, ತೆಂಗಿನ ಚಿಪ್ಪು ಹೀಗೆ ಸಿಕ್ಕಿದ್ದನ್ನ ಈ ಮನೆಗಳ ಮೇಲೆ ತೂರಲಾಗುತ್ತಿದೆ ಎಂದು ದೂರಲಾಗಿದೆ. ಈ ಸಂಬಂಧ ಎಸ್​ಪಿಯುವರಿಗೆ ಈ ಹಿಂದೆ ದೂರು ನೀಡಿ ಮನವಿ ಮಾಡಲಾಗಿತ್ತಂತೆ. ಸ್ಥಳೀಯ ಪೊಲೀಸರು ಬೀಟ್ ವ್ಯವಸ್ಥೆಯನ್ನ ಮಾಡಿದ್ದರು ಸಹ ದುಷ್ಕರ್ಮಿಗಳು ಪತ್ತೆಯಾಗಿಲ್ಲ. ಮನೆಗಳನ್ನ ಖಾಲಿ ಮಾಡಿಸುವ ಉದ್ದೇಶದಿಂದಲೇ ಈ ರೀತಿ ಕೃತ್ಯವೆಸಗಲಾಗುತ್ತಿದ್ದು, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ಧಾರೆ. 




Electricity price hike karnataka 2023/  ವಿದ್ಯುತ್​ ದರ ಏರಿಕೆ ಶಾಕ್/  ಪವರ್ ಬಿಲ್​ ಹೆಚ್ಚಿಸಿದ ಕೆಇಆರ್​ಸಿ

ಚುನಾವಣೆ ಮುಗಿದು ಇವತ್ತಷ್ಟೆ ಫಲಿತಾಂಶ ಹೊರಬೀಳಲಿದೆ. ಇದರ ನಡುವೆ  ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ),  ವಿದ್ಯುತ್ ಬಳಕೆಗೆ ವಿಧಿಸುವ ವಿದ್ಯುತ್​ ದರವನ್ನು  ಹೆಚ್ಚಿಸಲು ಅನುಮತಿ ನೀಡಿದೆ. 

ಏ‍ಪ್ರಿಲ್ 1ರಿಂದಲೇ ಹೊಸ ದರ ಪೂರ್ವಾನ್ವಯವಾಗಲಿದೆ. ಕೆಇಆರ್‌ಸಿ ದರ ಏರಿಕೆಗೆ ಒಪ್ಪಿಗೆ ಸೂಚಿಸಿದೆ.  

ಪ್ರತಿ ಯೂನಿಟ್‌ಗೆ ಸರಾಸರಿ 70 ಪೈಸೆ ವಿದ್ಯುತ್‌ ದರ ಹೆಚ್ಚಿಸಲು ಒಪ್ಪಿಗೆ ನೀಡಿದೆ. ಪ್ರತಿ ಯೂನಿಟ್‌ಗೆ ₹1.39 ಹೆಚ್ಚಿಸುವಂತೆ (ಶೇ 16.83) ಎಸ್ಕಾಂಗಳು ಬೇಡಿಕೆ ಸಲ್ಲಿಸಿದ್ದವು. ಏಪ್ರಿಲ್‌ ತಿಂಗಳ  ಗ್ರಾಹಕರ ಬಿಲ್‌ಗಳಲ್ಲಿ ಶೇ 8.31ರಷ್ಟು ಹೆಚ್ಚಳವಾಗಲಿದೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಪ್ರತಿ ಯೂನಿಟ್‌ಗೆ ಸರಾಸರಿ 35 ಪೈಸೆಯಷ್ಟು (ಶೇ 4.33) ವಿದ್ಯುತ್‌ ದರ ಹೆಚ್ಚಿಸಲಾಗಿತ್ತು. ನಂತರ, ಅಕ್ಟೋಬರ್‌ 1ರಂದು ಇಂಧನ ಹೊಂದಾಣಿಕೆ ಶುಲ್ಕವನ್ನು (ಎಫ್‌ಎಸಿ) ಪರಿಷ್ಕರಿಸಲಾಗಿತ್ತು. ಇದರಿಂದ, ವಿವಿಧ ಎಸ್ಕಾಂಗಳು ಪ್ರತಿ ಯೂನಿಟ್‌ಗೆ 24 ಪೈಸೆಯಿಂದ 43 ಪೈಸೆಯವರೆಗೆ ದರ ಹೆಚ್ಚಿಸಿದ್ದವು. ಬಳಿಕ, ಡಿಸೆಂಬರ್‌ನಲ್ಲಿ ಬೆಸ್ಕಾಂ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ ಮಾತ್ರ ವಿದ್ಯುತ್ ಹೊಂದಾಣಿಕೆ ವೆಚ್ಚ ಕಡಿತಗೊಳಿಸಲಾಗಿತ್ತು.

ಶಿವಮೊಗ್ಗದಲ್ಲಿ ಭಾರೀ ಗಾಳಿ , ಮಳೆ, ಗುಡುಗು ಸಿಡಿಲು! ತೀರ್ಥಹಳ್ಳಿ ರಸ್ತೆಯಲ್ಲಿ  ನೆಲಕ್ಕುರುಳಿದ ವಿದ್ಯುತ್ ಕಂಬ, ತೆಂಗಿನ ಮರ ! ಸಂಚಾರಕ್ಕೆ ತಡೆ 

ಶಿವಮೊಗ್ಗ/ ಜಿಲ್ಲೆಯಲ್ಲಿ ಮೋಚಾ ಚಂಡಮಾರುತ ಎಫೆಕ್ಟ್​ನಿಂದ ಭಾರೀ ಗಾಳಿ ಮಳೆಯಾಗುತ್ತಿದೆ. ಶಿವಮೊಗ್ಗ ನಗರದಲ್ಲಿಯೇ ಭಾರೀ ಗುಡುಗು ಸಿಡಿಲಿನ ಜೊತೆ ಗಾಳಿ ಮಳೆಯಾಗುತ್ತಿದೆ. ವಿಪರೀತ ಗಾಳಿಯಿಂದಾಗಿ ವಿದ್ಯುತ್​ ಕಂಬಗಳಿಗೆ ಹಾನಿಯಾಗುತ್ತಿದೆ. ಇನ್ನೂ ವರುಣನ ಅಬ್ಬರ ಜೋರಾಗಿದೆ. 

ನಾಳೆ ಮತ ಎಣಿಕೆ/ ಎಲೆಲ್ಲಿ 144 ಸೆಕ್ಷನ್​?/ ಎಷ್ಟು ಸುತ್ತು ನಡೆಯುತ್ತೆ ಕೌಂಟಿಂಗ್/  ಯಾವ ರೀತಿ ನಡೆಯುತ್ತೆ ! ವಿವರ ಇಲ್ಲಿದೆ

ಅತ್ತ ಜಿಲ್ಲೆ ವಿವಿಧ ತಾಲ್ಲೂಕಿನಲ್ಲಿ ಅಬ್ಬರದ ಮಳೆಯಾದ ಬಗ್ಗೆ ವರದಿಯಾಗಿದೆ. ವಿಪರೀತ ಎನ್ನುವಷ್ಟು ಗಾಳಿ ಬೀಸುತ್ತಿದ್ದು, ಮರಗಳಲ್ಲಿನ ಹಣ್ಣು ಕಾಯಿಗಳು ನೆಲಕ್ಕೆ ಬೀಳುತ್ತಿವೆ. ತೆಂಗಿನ ಮರಗಳಿಂದ ತೆಂಗಿನ ಕಾಯಿಗಳು ರಸ್ತೆ ಮೇಲೆ ಬೀಳುತ್ತಿವೆ. 

ಇನ್ನೂ ಮಳೆ ಹಾಗೂ ಗಾಳಿಯ ಅಬ್ಬರಕ್ಕೆ ತೀರ್ಥಹಳ್ಳಿ ರಸ್ತೆಯಲ್ಲಿ ವಿದ್ಯುತ್​ ಕಂಬಗಳು ಧರೆಗೆ ಉರುಳಿವೆ, ಇದರಿಂದಾಗಿ ರಸ್ತೆ ಸಂಚಾರ ಬಂದ್ ಆಗಿದೆ. ಗಾಜನೂರು ಸಮೀಪ ಹಳೆ ಹೊನ್ನಾಪುರದ ಬಳಿಯಲ್ಲಿ ತೆಂಗಿನ ಮರಗಳು ಹಾಗೂ ಅಡಿಕೆ ಮರಗಳು ರಸ್ತೆ ಮೇಲೆ ಉರುಳಿದೆ. ಅಲ್ಲದೆ ವಿದ್ಯುತ್ ಕಂಬಗಳು ರಸ್ತೆ ಮಧ್ಯೆ ತುಂಡಾಗಿ ಬಿದ್ದಿದೆ. ಪರಿಣಾಮ ತೀರ್ಥಹಳ್ಳಿಗೆ ಹೋಗುವ ರಸ್ತೆ ಸಂಚಾರಕ್ಕೆ ತಡೆಯಾಗಿದೆ. 

ಚೋರಡಿ ಅಪಘಾತ/  ಮತ್ತೊರ್ವ ಗಾಯಾಳು ಸಾವು!/ ಮೆಗ್ಗಾನ್​ಗೆ ಜೆಡಿಎಸ್ ಮುಖಂಡರ ಭೇಟಿ

ಶಿವಮೊಗ್ಗ/ ನಿನ್ನೆ ಚೋರಡಿಯಲ್ಲಿ  ಸಂಭವಿಸಿದ ಭೀಕರ ಅಪಘಾತದ ಘಟನೆಯಲ್ಲಿ ಸಾವನ್ನಪ್ಪಿರುವ ಸಂಖ್ಯೆ ಮೂರಕ್ಕೆ ಏರಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಇವತ್ತು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ಧಾರೆ. 

ಚೋರಡಿ ಅಪಘಾತ/ಅಮ್ಮಾ ರಾಘಣ್ಣ ಮಾತಾಡ್ತಿದ್ದೀನಿ! / ದೇವರಾದ ಮೆಗ್ಗಾನ್ ಸಿಬ್ಬಂದಿ/ ಜೀವಕ್ಕೆ ಜೀವ ಕೊಟ್ಟ ಶಿವಮೊಗ್ಗ ಜನ! ಕುಮದ್ವತಿ ಸೇತುವೆ  ಮೇಲೆ ನಡೆದ ಘಟನೆಯ ಪೂರ್ತಿ ಚಿತ್ರಣ 



ನಿನ್ನೆ ಸಂಜೆ ಸುಮಾರು ಆರು ಗಂಟೆಯ ಹೊತ್ತಿಗೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಇವತ್ತು ಶಿಕಾರಿಪುರ ತಾಲೂಕಿನ ಜೋಗಿಹಳ್ಳಿ ಗ್ರಾಮದ ಮಹೇಶ್ (45 ವರ್ಷ) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 

ಸಾರ್ವಜನಿಕರ ಗಮನಕ್ಕೆ/ ಮೇ 15 ರಂದು ಶಿವಮೊಗ್ಗದ ಈ ಭಾಗಗಳಲ್ಲಿ ಪವರ್ ಕಟ್ 



ಶಿವಮೊಗ್ಗ ಸಂತೆಕಡೂರು ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಭದ್ರಾ 1 ಮತ್ತು 2 ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿಯನ್ನು ಮೆಸ್ಕಾಂ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮೆ 15 ರಂದು ಇಡೀ ದಿನ ವಿದ್ಯುತ್ ವ್ಯತ್ಯಯವಾಗಲಿದೆ. 

ಯಾವ್ಯಾವ ಭಾಗದಲ್ಲಿ ವಿದ್ಯುತ್ ಇರೋದಿಲ್ಲ

ಮೇ-15 ರ ಬೆಳಿಗ್ಗೆ 10 ರಿಂದ ಸಂಜೆ 04 ಗಂಟೆವರೆಗೆ ಸಂತೆಕಡೂರು, ಶ್ರೀರಾಮನಗರ, ರಾಂಪುರ, ಕೊರಲಹಳ್ಳಿ, ಕಾಚೀನಕಟ್ಟೆ, ಜ್ಯೋತಿನಗರ, ದೊಡ್ಡಿಬೀಳು, ವಿನಾಯಕನಗರ, ಲಕ್ಕನಕೊಪ್ಪ, ತೋಟದಕೆರೆ, ಹುರಳಿಹಳ್ಳಿ, ಗಣಿದಾಳು, ಉಂಬ್ಳೇಬೈಲು, ಕಣಗಲಸರ, ಮರಾಠಿ ಕ್ಯಾಂಪ್, ಸಾಲಿಗೆರೆ, ಕೈತೊಟ್ಟಲು, ಕಾಕನಹಸೂಡಿ, ಲಿಂಗಾಪುರ, ಸಿದ್ದಮ್ಮಾಜಿ ಹೊಸೂರು  ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. 




ಚೋರಡಿಯಲ್ಲಿ ಭೀಕರ ಅಪಘಾತ/ ಇಷ್ಟಕ್ಕೂ ಹೇಗಾಯ್ತು ಆಕ್ಸಿಡೆಂಟ್ ? ಪ್ರತ್ಯಕ್ಷದರ್ಶಿ ಹೇಳಿದ್ದೇನು



Malenadutoday.com Social media