ಕೃಷಿಹೊಂಡಕ್ಕೆ ಬಿದ್ದ ಕಾಡುಕೋಣ! ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕುನಲ್ಲಿ ಘಟನೆ

Shimoga: A bison died after falling into an agricultural pond in Soraba taluk of Shivamogga district

ಕೃಷಿಹೊಂಡಕ್ಕೆ ಬಿದ್ದ ಕಾಡುಕೋಣ! ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕುನಲ್ಲಿ ಘಟನೆ

SHIVAMOGGA  |  Jan 6, 2024  | ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕುನಲ್ಲಿ ಕೃಷಿ ಹೊಂಡದಲ್ಲಿ ಕಾಡುಕೋಣ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.  ತಾಲೂಕಿನ ಅಂದವಳ್ಳಿ ಗ್ರಾಮದಲ್ಲಿ ಈ ಘಟನೆ  ನಡೆದಿದೆ.

ಕಾಡುಕೋಣ!

ಇಲ್ಲಿನ ನಿವಾಸಿ ರೇಣುಕಮ್ಮ ಕೃಷ್ಣಪ್ಪ ಎಂಬವರ ಜಮೀನಿನ ಕೃಷಿ ಹೊಂಡದಲ್ಲಿ ಕಳೆದ ಗುರುವಾರ ರಾತ್ರಿ ನೀರು ಕುಡಿಯಲು ಬಂದ ಸಂದರ್ಭದಲ್ಲಿ  ಕಾಡುಕೋಣ ಕೃಷಿ ಹೊಂಡಕ್ಕೆ ಬಿದ್ದಿದೆ ಎನ್ನಲಾಗುತ್ತಿದೆ. ಇನ್ನೂ ಕೃಷಿ ಹೊಂಡದಲ್ಲಿ ಸುಮಾರು 10 ಅಡಿ ಆಳದಷ್ಟು ನೀರು ತುಂಬಿದ್ದರಿಂದ ಕಾಡುಕೋಣ ಅಲ್ಲಿಯೇ ಸಾವನ್ನಪ್ಪಿದೆ. 

READ : ರಂಗಾಯಣದಲ್ಲಿ ನಾಟಕ ಸಿದ್ಧತಾ ಶಿಬಿರ ! ಇಲ್ಲಿದೆ ವಿಶೇಷ ಅವಕಾಶ

ಶುಕ್ರವಾರ ಮನೆಯವರು ಕಾಡುಕೋಣ ಸತ್ತುಬಿದ್ದಿರುವುದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.  



ಇನ್ನೂ  ಕಾಡುಕೋಣಕ್ಕೆ ಸುಮಾರು 6 ವರ್ಷ ಇರಬಹುದು. ಒಂದೂವರೆ ಟನ್ ತೂಕವಿದೆ ಎಂದು ಮಾಹಿತಿ ನೀಡಿದ ಅರಣ್ಯ ಅಧಿಕಾರಿಗಳು  ಜೆಸಿಬಿ ಯಂತ್ರದ ಮೂಲಕ ಕಾಡುಕೋಣ ಕಳೇಬರವನ್ನು ಕೃಷಿ ಹೊಂಡದಿಂದ ಹೊರತೆಗೆದು  ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರು.. 

ಬಳಿಕ ಕಳೆಬರವನ್ನು ಅಲ್ಲಿಯೇ ಸಮೀಪದ ಅಂದವಳ್ಳಿ ಕಾಡಿನಲ್ಲಿ ಹೂತುಹಾಕಲಾಯಿತು. ಡಿಸಿಎಫ್ ಸಂತೋಷ್ ಕೆಂಚಪ್ಪ, ಎಸಿಎಫ್ ರವಿಕುಮಾ‌ರ್, ವಲಯ ಅರಣ್ಯ ಅಧಿಕಾರಿ ಜಾವಿದ್ ಭಾಷಾ ಅಂಗಡಿ, ಉಪ ವಲಯದ ಅರಣ್ಯ ಅಧಿಕಾರಿ ಶರಣಪ್ಪ, ಅರಣ್ಯ ರಕ್ಷಕ ಹರೀಶ್, ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜಗದೀಶ್, ಪಿಡಿಒ ನಾರಾಯಣಮೂರ್ತಿ, ಗ್ರಾಮ ಲೆಕ್ಕಿಗ ರಮೇಶ್, ಕರಿಬಸಪ್ಪ, ಗಿರಿಗೌಡ ಮೊದಲಾದವರಿದ್ದರು.