ಸಾಗರ-ಶಿವಮೊಗ್ಗ | ಬಸ್‌ನಲ್ಲಿ ಸೀಟಿಗಾಗಿ ನಿಲ್ಲದ ಮಹಿಳಾ ಕದನ | ಇತ್ಯರ್ಥ ಬರಬೇಕಾಯ್ತು ಪೊಲೀಸ್‌ | ಏನಿದು ಘಟನೆ

fight broke out on a KSRTC bus from Sagar to Shivamogga over a free ticket seat, causing the driver to take the bus to the Sagar Pete police station.

ಸಾಗರ-ಶಿವಮೊಗ್ಗ | ಬಸ್‌ನಲ್ಲಿ ಸೀಟಿಗಾಗಿ ನಿಲ್ಲದ ಮಹಿಳಾ ಕದನ | ಇತ್ಯರ್ಥ ಬರಬೇಕಾಯ್ತು ಪೊಲೀಸ್‌ | ಏನಿದು ಘಟನೆ
KSRTC bus from Sagar to Shivamogga, Sagar Pete police station.

SHIVAMOGGA | MALENADUTODAY NEWS | Jun 1, 2024  ಮಲೆನಾಡು ಟುಡೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನಲ್ಲಿ ಫ್ರೀಟಿಕೆಟ್‌ ಸೀಟಿನ ವಿಚಾರಕ್ಕೆ ಗಲಾಟೆ ನಡೆದು, ಚಾಲಕ ಬಸನ್ನ ವಿಧಿಯಿಲ್ಲದೇ ಸಾಗರ ಪೇಟೆ ಪೊಲೀಸ್‌ ಠಾಣೆಗೆ ತಂದು ನಿಲ್ಲಿಸಿದ ಘಟನೆಯೊಂದು ನಡೆದಿದೆ. ನಡೆದಿದ್ದೇನು ಎಂಬುದನ್ನ ನೋಡುವುದಾದರೆ 

ನಿನ್ನೆ ದಿನ ಸಾಗರ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಿಂದ ಶಿವಮೊಗ್ಗ ಗಾಡಿ ಹೊರಟಿತ್ತು. ಸಹಜವಾಗಿಯೇ ಸಾಗರದಿಂದ ಶಿವಮೊಗ್ಗಕ್ಕೆ ಬರುವ ಲಾಸ್ಟ್‌ ಬಸ್‌ಗಳು ಸಿಕ್ಕಾಪಟ್ಟೆ ರಶ್‌ ಇರುತ್ತವೆ. ನಿನ್ನೆಯು ಸರ್ಕಾರಿ ಬಸ್‌ ರಶ್‌ ಆಗಿತ್ತು. ಈ ನಡುವೆ ಬಸ್‌ನಿಲ್ದಾಣದಿಂದ ಹೊರಡುವಾಗಲೇ ಡ್ರೈವರ್‌ ಹಿಂಬದಿಯ ಮಹಿಳಾ ಪ್ರಯಾಣಿಕರು ಸೀಟಿಗಾಗಿ ಜಗಳ ಆರಂಭಿಸಿದರು. ಡ್ರೈವರ್‌ ಸೀಟ್‌ ಕಡೆಯಿಂದ ಹತ್ತಿ ಬಂದು ಬ್ಯಾಗ್‌ ಇಟ್ಟಿದ್ದರೂ ಅದನ್ನ ತೆಗೆದು ಕುಳಿತಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದರೆ, ಮತ್ತೊಬ್ಬಾಕೆ, ಯಾಕೆ ಕುಳಿತವರ ಕಾಲು ತುಳಿಯುತ್ತಿದ್ದೀರಾ ಎಂದು ದೂರುತ್ತಿದ್ದಳು. ಇದರು ನಡುವೆ ಹೊಡೆಯುತ್ತೇನೆ ನೋಡು, ಇದೆ ನಿಂಗೆ ಅಂತಾ ಮಹಿಳೆಯೊಬ್ಬರು ಹೇಳಿದ್ದಾರೆ. ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಮಹಿಳಾ ಕದನ ತಾರಕಕ್ಕೇರಿದೆ. ಮಧ್ಯ ಪ್ರವೇಶಿಸಿದ ಕಂಡೆಕ್ಟರ್‌ ಹಾಗೂ ಡ್ರೈವರ್‌ ಮಾತಿಗೂ ಜಗಳ ಮಾಡಿಕೊಳ್ತಿದ್ದ ಮಹಿಳೆಯರು ಸೊಪ್ಪುಹಾಕಲಿಲ್ಲ. 

ನಿಲ್ದಾಣದಿಂದ ಶಿವಮೊಗ್ಗ ಮಾರ್ಗಕ್ಕೆ ಬರುವ ಹೊತ್ತಿನಲ್ಲಿ ಸಾಗರ ಪೇಟೆ ಪೊಲೀಸ್‌ ಠಾಣೆ ಸಿಗುತ್ತದೆ. ಅಲ್ಲಿಯವರೆಗೂ ಕಾದಿದ್ದ ಕಂಡಕ್ಟರ್‌ ಈಗೇನು ಜಗಳ ನಿಲ್ಲಿಸಿ, ನಮ್ಮ ಡ್ಯೂಟಿ ಮಾಡಲು ಬಿಡುತ್ತೀರೋ ಅಥವಾ ಬಸನ್ನ ಸ್ಟೇಷನ್‌ಗೆ ಹೊಡೆಸುವುದೋ ಎಂದು ಕೇಳಿದ್ದಾನೆ. ಆದಾಗ್ಯು ಮಹಿಳೆಯರು ಸುಮ್ಮನೆ ಇರದೇ ಕಂಡಕ್ಟರ್‌ನ ಮಾತು ಕಿವಿಗೆ ಬೀಳದಂತೆ ಜಗಳವಾಡುತ್ತಿದ್ದರು. ಹಾಗಾಗಿ ಕಂಡಕ್ಟರ್‌ ಚಾಲನಿಗೆ ನೇರವಾಗಿ ಸ್ಟೇಷನ್‌ನೊಳಗೆ ಗಾಡಿ ಹೊಡೆದುಬಿಡು. ಇದು ನಮ್ಮ ಕೈಲಾಗದ ಕೆಲಸ ಪೊಲೀಸರೇ ತೀರ್ಮಾನಿಸಲಿ ಎಂದಿದ್ದಾರೆ. ಡ್ರೈವರ್‌ ಠಾಣೆಯ ಆವರಣದೊಳಗೆ ಬಸ್‌ ತಂದು ನಿಲ್ಲಿಸಿದ್ದ. 

ಇತ್ತ ಠಾಣೆಯಲ್ಲಿದ್ದ ಪೊಲೀಸರಿಗೆ ಗೊಂದಲವಾಗಿತ್ತು. ಸ್ಟೇಷನ್‌ಗೆ ಜೀಪ್‌ ಬರಬೇಕು, ಇದೇನು ಬಸ್‌ ಬಂದಿದೆ ಎಂದು ವಿಚಾರಿಸಲು ಮುಂದಾಗುತ್ತಲೇ ವಿಷಯ ಗೊತ್ತಾಗಿದೆ. ಠಾಣೆಯಲ್ಲಿದ್ದ ಮಹಿಳಾ ಪೊಲೀಸ್‌ ಸಿಬ್ಬಂದಿ ಬಸ್‌ ಬಳಿ ಬಂದು, ಜಗಳ ಮಾಡುತ್ತಿದ್ದವರನ್ನ ಬಸ್‌ನಿಂದ ಕೆಳಕ್ಕೆ ಇಳಿಸಿದ್ದಾರೆ. ಆಗಲ್ಲ , ಹೋಗಲ್ಲ ಎಂದರೂ ಬಿಡದ ಪೊಲೀಸ್‌ ಸಿಬ್ಬಂದಿ ಮೊದಲು ಕೆಳಕ್ಕೆ ಇಳಿಯಿರಿ ಎಂದು ಉಳಿದ ಪ್ರಯಾಣಿಕರಿಗೆ ಆಗುತ್ತಿದ್ದ ಕಿರಿಕಿರಿ ತಪ್ಪಿಸಿದರು. ಅಲ್ಲದೆ ಅಲ್ಲಿಂದ ಬಸ್‌ ಶಿವಮೊಗ್ಗಕ್ಕೆ ಹೊರಟಿತು. 

ಇದರ ನಡುವೆ ಪೇಟೆಯಲ್ಲಿ ಏನೋ ಗಮ್ಮತ್ತಾಗುತ್ತಿದೆ ಎಂದು ನೋಡುತ್ತಿದ್ದ ‍ಸ್ಥಳೀಯರು ನಡೆದ ಘಟನೆಗಳನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದರು. ಅಲ್ಲದೆ ಏತಕ್ಕಾಗಿ ಹೋರಾಟ ಸೀಟಿಗಾಗಿ ಹೋರಾಟ.. ಡಿಮ್ಯಾಂಡ್‌ ಅಪ್ಪಾ ಡಿಮ್ಯಾಂಡೋ ಮಹಿಳಾ ಸೀಟಿಗೆ ಡಿಮ್ಯಾಂಡ್‌ ಎಂದು ತಮಾಷೆ ಮಾಡುತ್ತಿದ್ದರು. ಅಂತಿಮವಾಗಿ ವ್ಯಾಜ್ಯಕ್ಕಿಳಿದವರನ್ನ ಕೆಳಕ್ಕಿಳಿಸಿದ ಮಹಿಳಾ ಸಿಬ್ಬಂದಿ ತಮಾಷೆ ಮಾಡುತ್ತಿದ್ದವರಿಗೂ ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಕಳುಹಿಸಿದರು. ಆ ಬಳಿಕ ಜಗಳ ತೆಗೆದವರಿಗೂ ತಿಳುವಳಿಕೆ ಹೇಳಿ ಕಳುಹಿಸಿದ್ದಾರೆ.  

A fight broke out on a KSRTC bus from Sagar to Shivamogga over a free ticket seat, causing the driver to take the bus to the Sagar Pete police station. The last buses from Sagar to Shivamogga are usually crowded, and yesterday was no exception. Women passengers started fighting over seats, accusing each other of taking seats by placing bags and stepping on toes. T