ಮೃತ ವಾಲ್ಮೀಕಿ ಅಭಿವೃದ್ಧಿ ನಿಗಮದ ಆಧಿಕಾರಿಯ ಪತ್ನಿ ಆರೋಗ್ಯದಲ್ಲಿ ಏರುಪೇರು

officer of the valmiki Development Corporation Chandrashekharan's wife, Kavita, fell ill and was taken to the hospital after vomiting. Her family says she hasn't been eating well since the incident.

ಮೃತ ವಾಲ್ಮೀಕಿ ಅಭಿವೃದ್ಧಿ ನಿಗಮದ ಆಧಿಕಾರಿಯ ಪತ್ನಿ ಆರೋಗ್ಯದಲ್ಲಿ ಏರುಪೇರು
Chandrashekharan wife, Kavita, valmiki Development Corporation

SHIVAMOGGA | MALENADUTODAY NEWS | Jun 1, 2024  ಮಲೆನಾಡು ಟುಡೆ

ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್‌ ರವರ ಪತ್ನಿಯ ಆರೋಗ್ಯದಲ್ಲಿ ದಿಢೀರ್‌ ಏರುಪೇರಾಗಿ ಅಸ್ವಸ್ಥಗೊಂಡಿದ್ದು ಅವರನ್ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. 

ಅಧಿಕಾರಿ ಆತ್ಮಹತ್ಯೆಯ ಬೆನ್ನಲ್ಲೆ ಹಲವಾರು ಮುಖಂಡರು ಮೃತರ ಮನೆಗೆ ಭೇಟಿಕೊಡುತ್ತಿದ್ದಾರೆ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರ್ಕಾರ ಇದುವರೆಗೂ ಯಾವುದೇ ಪರಿಹಾರ ಘೋಷಿಸಿಲ್ಲ. ಇನ್ನೊಂದೆಡೆ ಮುಖಂಡರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳುತ್ತಿರುವುದಷ್ಟೆ ಅಲ್ಲದೆ ಸಹಾಯ ಹಸ್ತ ನೀಡುವ ಮಾತನಾಡುತ್ತಿದ್ದಾರೆ.ಈ ಪೈಕಿ ಕೆಎಸ್‌ ಈಶ್ವರಪ್ಪ ತಮ್ಮ ಕೈಲಾದಷ್ಟು ನೆರವು ಎಂದು ಮೂರು ಲಕ್ಷ ರೂಪಾಯಿ ಮೃತರ ಕುಟುಂಬಕ್ಕೆ ನೀಡಿದ್ದಾರೆ. ಹಾಗೆ ಸರ್ಕಾರದ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದಿದ್ದಾರೆ. 

ಈ ನಡುವೆ ಇವತ್ತು ಚಂದ್ರಶೇಖರನ್‌ರವರ ಪತ್ನಿ ಕವಿತಾರವರ ಆರೋಗ್ಯದಲ್ಲಿ ಏರುಪೇರಾಗಿದೆ. ವಾಂತಿಯಾದ ಹಿನ್ನೆಲೆಯಲ್ಲಿ ಅವರು ಅಸ್ವಸ್ಥಗೊಂಡಿದ್ದು, ಅವರನ್ನ ಅವರ ಪುತ್ರ ಅಲ್ಲಿಯೇ ಇದ್ದ ಆಟೋವೊಂದರಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆ ನಂತರ ಅವರು ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಹೀಗಾಗಿ ಅಸ್ವಸ್ಥರಾಗಿದ್ದಾರೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.  

officer of the valmiki Development Corporation Chandrashekharan's wife, Kavita, fell ill and was taken to the hospital after vomiting. Her family says she hasn't been eating well since the incident.