ಮನೆಮುಂದೆ ಬಂದು ಮಾರಕಾಸ್ತ್ರಗಳಿಂದ ಬೆದರಿಕೆ | ಬೈಕ್‌, ಗ್ಲಾಸ್‌ ಜಖಂ | ಕಡ್ಡಿ ಮಧು ಸೇರಿ 7 ಮಂದಿ ವಿರುದ್ಧ ಕೇಸ್‌

Vinobanagar Police Station, and an FIR has been registered under various sections of the IPC, including charges of causing damage, criminal intimidation, intentional insult, rioting, and unlawful assembly

ಮನೆಮುಂದೆ ಬಂದು ಮಾರಕಾಸ್ತ್ರಗಳಿಂದ ಬೆದರಿಕೆ | ಬೈಕ್‌, ಗ್ಲಾಸ್‌ ಜಖಂ | ಕಡ್ಡಿ ಮಧು ಸೇರಿ 7 ಮಂದಿ ವಿರುದ್ಧ ಕೇಸ್‌
Vinobanagar Police Station, criminal intimidation

SHIVAMOGGA | MALENADUTODAY NEWS | Jun 1, 2024  ಮಲೆನಾಡು ಟುಡೆ

ಹೊಸಮನೆಯಲ್ಲಿ ಹಾವಳಿ ಮಾಡಿದ ಘಟನೆ ಬೆನ್ನಲ್ಲೆ ಅದೇ ಹೊತ್ತಿನಲ್ಲಿ ವಿನೋಬನಗರದ ಮನೆಯೊಂದರ ಬಾಗಿಲು ತಟ್ಟಿ ಮಚ್ಚು ಲಾಂಗು ಹಿಡಿದು ಜೀವಬೆದರಿಕೆ ಹಾಕಿದ ಘಟನೆ ಸಂಬಂಧ ವಿನೋಬನಗರದ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. ಬಹುತೇಕ ಒಂದೇ ಗ್ಯಾಂಗ್‌ ಈ ಕೃತ್ಯ ಎಸೆಗಿರುವ ಅನುಮಾನವೂ ಇದೆ.  

ಇನ್ನೂ ಪ್ರಕರಣದ ವಿವರ ನೋಡುವುದಾದರೆ,  ಶಿವಮೊಗ್ಗ ನಗರದ ವಿನೋಬನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿರುವ ಮನೆಯೊಂದರ ಬಳಿ  ಇಪ್ಪೊಂಬತ್ತನೇ ತಾರೀಖು ತಡರಾತ್ರಿ ಎರಡು ಗಂಟೆ ಸುಮಾರಿಗೆ ಕಡ್ಡಿ ಮಧು , ಸೀನಾ, ಕಪಾಲಿ, ಬಾಬು, ಸುಕೇಶ, ಯಶವಂತ, ಕಾರ್ತಿಕ್‌ ಹಾಗೂ ಇತರರು ಲಾಂಗು, ಮಚ್ಚುಗಳನ್ನ ತೋರಿಸಿ ಮನೆ ಮಾಲೀಕನಿಗೆ ಹೆದರಿಸಿದ್ದಾರೆ. ಅಲ್ಲದೆ ಅಲ್ಲಿದ್ದ ಬೈಕ್‌ವೊಂದನ್ನ ಜಖಂಗೊಳಿಸಿರುವ ಆರೋಪಿಗಳು ಮನೆಯ ಗ್ಲಾಸ್‌ಗಳನ್ನು ಕಲ್ಲಿಂದ ಪುಡಿ ಮಾಡಿದ್ದಾರೆ. 

ಆರು ತಿಂಗಳ ಹಿಂದೆ ನಡೆದಿರುವ ಕಿರಿಕ್‌ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಈ ರೀತಿಯಾಗಿ ತಡರಾತ್ರಿ ಬಂದು ಬೆದರಿಕೆ ಹಾಕಿರುವ ವಿಚಾರ ಗೊತ್ತಾಗಿದ್ದು, ಸದ್ಯ ಪೊಲೀಸರಿಗೆ ಮನೆ ಮಾಲೀಕರು ದೂರು ನೀಡಿದ್ದಾರೆ. ದೂರಿಗೆ ಪೂರಕವಾಗಿ  IPC 1860 (U/s-427,506,504,143,147,148,149) ಅಡಿಯಲ್ಲಿ ಐವತ್ತು ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಮೊತ್ತದಷ್ಟು ಹಾನಿ ಉಂಟು ಮಾಡಿದ ಆರೋಪ (2 ವರ್ಷ ಶಿಕ್ಷೆ) ಕ್ರೈಂ ಮಾಡುವ ಉದ್ದೇಶದೊಂಧಿಗೆ ಅಪರಾಧ ಕೃತ್ಯವೆಸಗಿದ ಆರೋಪ (2 ವರ್ಷ ಶಿಕ್ಷೆ) ಉದ್ದೇಶಪೂರ್ವಕವಾಗಿ ಅವಮಾನ ಮಾಡಿ ಶಾಂತಿ ಭಂಗ ಮಾಡುವ ಯತ್ನ (2 ವರ್ಷ ಶಿಕ್ಷೆ) ಅಕ್ರಮವಾಗಿ ಕಟ್ಟಿಕೊಂಡ ಕೂಟದಲ್ಲಿ ಭಾಗಿಯಾದ ಆರೋಪ (6 ತಿಂಗಳು ಶಿಕ್ಷೆ ) ದೊಂಬಿ ಮಾಡಿದ ಆರೋಪ (2 ವರ್ಷ ಶಿಕ್ಷೆ) ಮಾರಕ ಆಯುಧಗಳನ್ನು ಹಿಡಿದು ದೊಂಬಿ ಮಾಡಿದ ಆರೋಪ (3ವರ್ಷ ಶಿಕ್ಷೆ) ಹಾಗೂ ಒಂದೆ ಉದ್ದೇಶಕ್ಕಾಗಿ ಎಲ್ಲರೂ ಸೇರಿಕೊಂಡು ಕೃತ್ಯವೆಸಿಗದ ಆರೋಪದ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. 

Vinobanagar Police Station, and an FIR has been registered under various sections of the IPC, including charges of causing damage, criminal intimidation, intentional insult, rioting, and unlawful assembly