ದುಡ್ಡಿನೊಂದಿಗೆ ನಾಪತ್ತೆಯಾಗಿದ್ದ ಬಾಲಕ ಕನ್ಯಾಕುಮಾರಿಯಲ್ಲಿ ಪತ್ತೆ! ಏನಿದು ಸಾಗರ ಗ್ರಾಮಾಂತರದಲ್ಲಿ ನಡೆದ ಪ್ರಕರಣ!

Boy who went missing with money found in Kanyakumari What is the truth of the case that took place in Sagar Rural?

ದುಡ್ಡಿನೊಂದಿಗೆ ನಾಪತ್ತೆಯಾಗಿದ್ದ ಬಾಲಕ ಕನ್ಯಾಕುಮಾರಿಯಲ್ಲಿ ಪತ್ತೆ! ಏನಿದು ಸಾಗರ ಗ್ರಾಮಾಂತರದಲ್ಲಿ ನಡೆದ ಪ್ರಕರಣ!

KARNATAKA NEWS/ ONLINE / Malenadu today/ Jul 11, 2023 SHIVAMOGGA NEWS   

ಶಿವಮೊಗ್ಗ ಜಿಲ್ಲೆ ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದ ಬಾಲಕ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ಸಾಗರ ತಾಲ್ಲೂಕಿನ ಆವಿನಹಳ್ಳಿ ಬಳಿಯ ಗ್ರಾಮವೊಂದರ ಬಾಲಕನನ್ನ ತಮಿಳುನಾಡು ರಾಜ್ಯದ ಕನ್ಯಾಕುಮಾರಿಯಲ್ಲಿ ಪತ್ತೆ ಹಚ್ಚಿದ್ದಾರೆ. ಪೊಲೀಸರ ತಂಡವೊಂದು ಅಲ್ಲಿಗೆ ಹೋಗಿ ಬಾಲಕನನ್ನು ಪತ್ತೆಹಚ್ಚಿ ವಾಪಸ್ ಕರೆತಂದಿದೆ. 

ಸಾಗರ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಎಫ್ಐಆರ್ ದಾಖಲಾಗಿತ್ತು. ಬಾಲಕ ಮನೆಯಿಂದ 11 ಸಾವಿರ ರೂಪಾಯಿ ಹಿಡಿದುಕೊಂಡು ಕಾಣೆಯಾಗಿದ್ದ. ಘಟನೆ ನಡೆದು ತಿಂಗಳ ನಂತರ ಬಾಲಕ ಪತ್ತೆಯಾಗಿದ್ದಾನೆ. ಸದ್ಯ ಆತನ ವಿಚಾರಣೆ ನಡೆಯುತ್ತಿದ್ದು ಯಾವ ಕಾರಣಕ್ಕಾಗಿ ಬಾಲಕ ಮನೆಬಿಟ್ಟಿದ್ದ ಎಂಬಿತ್ಯಾದಿ ವಿಚಾರಗಳು ಇನ್ನಷ್ಟೆ ಗೊತ್ತಾಗಬೇಕಿದೆ.  


ನಿಮ್ಮ ಮೊಬೈಲ್​ಗೂ ಬಂದಿರುತ್ತೆ ಈ ಮೆಸೇಜ್​! ನಂಬಿದ್ರೆ ನಾಮ ಗ್ಯಾರಂಟಿ! ಇಲ್ಲಿದೆ ಸಾಕ್ಷಿ ಓದಿ!

ಶಿವಮೊಗ್ಗ/ ಎಷ್ಟೆ ಬುದ್ದಿವಂತರಿದ್ದರೂ, ಟೆಕ್ನಾಲಿಜಿಯ ಸವಲತ್ತು ಹಾಗೂ ಉತ್ಪನ್ನಗಳಲ್ಲಿ ಯಾವಾಗ ಬೇಕಾದರೂ ಮೋಸವಾಗಬಹುದು.  ನಿಮ್ಮ ಮೊಬೈಲ್​ಗೆ ಬರುವ ಒಂದೇ ಒಂದು ಮೆಸೇಜ್​, ಆಸೆ ತೋರಿಸಿ ನಿಮ್ಮ ಅಕೌಂಟ್​ನ್ನೆ ಖಾಲಿ ಮಾಡಬಹುದು. ಇದಕ್ಕೆ ಪೂರಕವೆಂಬಂತಹ ಘಟನೆಯೊಂದು ಶಿವಮೊಗ್ಗದ ಪೊಲೀಸ್​ ಸ್ಟೇಷನೊಂದರ ವ್ಯಾಪ್ತಿಯಲ್ಲಿ ನಡೆದಿದೆ. 

ಏನಿದು ಪ್ರಕರಣ?

ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾದ ಕೇಸ್​ನಲ್ಲಿ ಬೊಮ್ಮನ ಕಟ್ಟೆಯ ನಿವಾಸಿಯೊಬ್ಬರು ವರ್ಕ್​ ಫ್ರಾಂ ಹೋಂ ಕೆಲಸವನ್ನು ಹುಡುಕುತ್ತಿದ್ದರು. 

ಈ ಸಂದರ್ಭದಲ್ಲಿ ಅವರಿಗೆ ಟೆಲಿಗ್ರಾಂ ಆ್ಯಪ್​ನಲ್ಲಿ ವಿಕ್ಕಿ ಎಂಬ ಹೆಸರಿನಲ್ಲಿ ಮೆಸೇಜ್​ ಬಂದಿದ್ದು, ಟಾಸ್ಕ್​ ಓರಿಯೆಂಟೆಡ್​ ಜಾಬ್​ನ ಪರಿಚಯ ಮಾಡಿದ್ದಾನೆ.  ಮೇಸೆಜ್​ನ್ನ ನಂಬಿದ ಮಹಿಳೆಯು, ಅದರಲ್ಲಿ ತಿಳಿಸಲಾದ  ಟಾಸ್ಕ್​ ಪೂರೈಸಿದ್ದಾರೆ. ತಕ್ಷಣವೇ ದೂರುದಾರರ ಅಕೌಂಟ್​ಗೆ 1500 ರೂಪಾಯಿ ಬಂದಿದೆ. ಹೀಗಾಗಿ ಪೂರ್ತಿಯಾಗಿ ನಂಬಿದ ಮಹಿಳೆಯು ಇನ್ನಷ್ಟು ಟಾಸ್ಕ್​ ನಲ್ಲಿ ಪಾಲ್ಗೊಂಡಿದ್ದಾರೆ. ಅದರಂತೆ ವಸ್ತುಗಳನ್ನು ಟೆಲಿಗ್ರಾಂನಲ್ಲಿ ಹೇಳಿದ ಹಾಗೆ ಬೈ ಮಾಡಿ ಟಾಸ್ಕ್​ ಕಂಪ್ಲೀಟ್ ಮಾಡಿದ್ದಾರೆ. 

ಇದಕ್ಕಾಗಿ ಟೆಲಿಗ್ರಾಂನಲ್ಲಿ ತೋರಿಸಿದ ಅಕೌಂಟ್​ಗೆ ಹಲವು ಸಲ ಒಟ್ಟು 89500/- ರೂ ಗಳನ್ನು ಹಾಕಿದ್ಧರು. ಆದರೆ ಈ ಸಲ ದೂರುದಾರ ಮಹಿಳೆಯ ಅಕೌಂಟ್​ಗೆ ಹಣ ಬಂದಿರಲಿಲ್ಲ. ಹೀಗಾಗಿ ಅನುಮಾನಗೊಂಡು ಪ್ರಶ್ನಿಸಿದ್ದಾರೆ. ಇದಕ್ಕೆ ಮತ್ತಷ್ಟು ಹಣ ಹಾಕುವಂತೆ ಸಂದೇಶ ಬಂದಿದೆ.  ಇದರಿಂದ ಆತಂಕಗೊಂಡ ಮಹಿಳೆ ತಮ್ಮ ಕುಟುಂಬಸ್ಥರ ಜೊತೆ ಚರ್ಚಿಸಿ ಪೊಲೀಸರಿಗೆ ದೂರು ನೀಡಿದ್ಧಾರೆ. ಸದ್ಯ ಈ ಸಂಬಂಧ IPC 1860 (U/s-420) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.