ಬೀದಿಯಲ್ಲಿ ಸಿಕ್ಕ ಪೊಲೀಸರ ಅತಿಥಿ! ಸಾಗರ ಪೊಲೀಸರು ಏನು ಮಾಡಿದ್ರು ಓದಿ!

Sagar Town and Sagar Rural police have shown humanity by taking the sick on the streets to the hospital

ಬೀದಿಯಲ್ಲಿ ಸಿಕ್ಕ ಪೊಲೀಸರ ಅತಿಥಿ! ಸಾಗರ ಪೊಲೀಸರು ಏನು ಮಾಡಿದ್ರು ಓದಿ!

KARNATAKA NEWS / ONLINE / Malenadu today/ Nov 20, 2023 SHIVAMOGGA NEWS

Shivamogga |  Malnenadutoday.com | ಬೀದಿಗೆ ಬಿದ್ದ, ರೋಡಿಗೆ ಬಂದ ಎಂಬುದು ಟೀಕೆಗೇನೋ ಸುಲಭದ ಮಾತು. ಆದರೆ ಬೀದಿಗೆ ಬಿದ್ದವರ ಬದುಕಿನ ಭವಿಷ್ಯ, ಅವರೆದುರಿಸಿದ ನೋವಿನ ಇತಿಹಾಸಕ್ಕಿಂತಲೂ ಭೀಕರವಾಗಿರುತ್ತದೆ. ಅಂತಹ ಸ್ಥಿತಿಯಲ್ಲಿದ್ದವರಿಗೆ ಶಿವಮೊಗ್ಗದ ಪೊಲೀಸರೇ (shivamogga police ) ಆಸರೆಯಾಗುತ್ತಿದ್ದಾರೆ. 

ಕಳೆದ ಒಂದು ವಾರದಲ್ಲಿ ಎರಡು ಪ್ರಕರಣಗಳಲ್ಲಿ  ಸಾಗರ ತಾಲ್ಲೂಕು ಪೊಲೀಸರು ರೋಡಲ್ಲಿ ಅಸ್ವಸ್ಥರಾಗಿ ಆರೈಕೆ ಸಿಗದೇ ಸಾಯುವ ಸ್ಥಿತಿಯಲ್ಲಿರುವ ವ್ಯಕ್ತಿಗಳನ್ನ ಖುದ್ದ ಆ್ಯಂಬುಲೆನ್ಸ್ ವ್ಯವಸ್ಥೆಯನ್ನ ಮಾಡಿ ಸರ್ಕಾರಿ ಆಸ್ಪತ್ರೆಗಳಿಗೆ ಅಡ್ಮಿಟ್ ಮಾಡಿದ್ದಾರೆ. ಅಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುವಂತೆ ನೋಡಿಕೊಂಡಿದ್ದಾರೆ. 

ಪ್ರಕರಣ ಒಂದು! 

ದಿ:17.11.2023 ರಂದು ಸಾಗರಪೇಟೆ ಠಾಣಾ (sagara town police) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೇಟೆ ಪೊಲೀಸರಿಗೆ ಸ್ಥಳೀಯರೊಬ್ಬರು ಕರೆ ಮಾಡಿ, ರಸ್ತೆಯಲ್ಲಿ ವ್ಯಕ್ತಿಯೊಬ್ಬ ಅಸ್ವಸ್ಥಗೊಂಡು ಬಿದ್ದಿದ್ದಾನೆ. ತಕ್ಷಣ ಬನ್ನಿ ಎಂದು ಕರೆ ಮಾಡಿದ್ದಾರೆ. ದೂರನ್ನ ಸ್ವೀಕರಿಸಿದ 112 ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಅಸ್ವಸ್ಥಗೊಂಡಿದ್ದ ವ್ಯಕ್ತಿಗೆ ತುರ್ತು ಚಿಕಿತ್ಸೆಯ ಅವಶ್ಯಕತೆ ಇರುವುದು ಕಂಡು ಬಂದಿದೆ. 

READ : ಅಂಗಿಯ ತೋಳು ಕತ್ತರಿಸಿದರೇ ಮನೆಗೆ ಹೋಗುವುದು ಹೇಗೆ!? ಹಳ್ಳಿ ಹೆಣ್ಣುಮಕ್ಕಳಿಗೆ ಕಣ್ಣೀರು ಹಾಕಿಸಿತಾ KEA ಪರೀಕ್ಷೆ ರೂಲ್ಸ್​

ತಕ್ಷಣವೇ ಆ್ಯಂಬುಲೆನ್ಸ್​ (ambulance)ಗೆ ಕರೆ ಮಾಡಿ, ಸ್ಥಳಕ್ಕೆ ಕರೆಸಿಕೊಂಡು 108 ಆ್ಯಂಬುಲೆನ್ಸ್ ಮೂಲಕ ಸಾಗರ ಸರ್ಕಾರಿ ಆಸ್ಪತ್ರೆಗೆ ಅಸ್ವಸ್ಥ ವ್ಯಕ್ತಿಯನ್ನು ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ 



ಪ್ರಕರಣ ಎರಡು 

ಇದೇ ರೀತಿಯ ಇನ್ನೊಂದು ಘಟನೆ  ದಿ:15.11.2023ರಂದು ಸಾಗರ ಗ್ರಾಮಾಂತರ ಠಾಣಾ  (sagara rural police)ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ  ಶಿರವಂತೆಯಿಂದ ದೂರುದಾರರು 112ಗೆ ಕರೆ ಮಾಡಿ ಬಸ್ ನಿಲ್ದಾಣದ ಹತ್ತಿರ ವೃದ್ಧನೊಬ್ಬ ಅಸ್ವಸ್ಥನಾಗಿ ಬಿದ್ದಿರುವುದಾಗಿ ತಿಳಿಸಿದ್ದಾರೆ. 

READ : ಬಾನುಮತಿ ಬಾಲ ಕಡಿದವರು ಯಾರು!? ಅಮಾಯಕರಿಗೆ ಶಿಕ್ಷೆ ಆಗ್ತಿದ್ಯಾ? ಸಕ್ರೆಬೈಲ್ ಬಿಡಾರದ ಅಂದರ್ ಕೀ ಬಾತ್!



ವಿಷಯ ತಿಳಿದು ಸ್ಥಳಕ್ಕೆ ತೆರಳಿದ ERV ಸಿಬ್ಬಂದಿ,  ವೃದ್ಧ ವ್ಯಕ್ತಿಯನ್ನು ಆಂಬುಲೆನ್ಸ್ ಮೂಲಕ ಸಾಗರದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಒದಗಿಸಿದ್ದಾರೆ.