ಕೊಲ್ಕತ್ತಾದಲ್ಲಿ ಅರೆಸ್ಟ್‌ ಆದ ಶಾಜೀಬ್‌, ಮತೀನ್‌ ಈಗ ಹೇಗಿದ್ದಾರೆ! ಎಲ್ಲಿಯು ಸಿಗದ EXCLUSIVE PHOTO ಇಲ್ಲಿದೆ ನೋಡಿ! ಇನ್ಮುಂದೆ ತೀರ್ಥಹಳ್ಳಿಯಲ್ಲಿ ಏನಾಗುತ್ತೆ?

How are Shajeeb and Mateen, who were arrested in Kolkata, now? HERE'S A EXCLUSIVE PHOTO THAT CAN'T BE FOUND ANYWHERE! What will happen in Thirthahalli?

ಕೊಲ್ಕತ್ತಾದಲ್ಲಿ ಅರೆಸ್ಟ್‌ ಆದ ಶಾಜೀಬ್‌, ಮತೀನ್‌ ಈಗ ಹೇಗಿದ್ದಾರೆ! ಎಲ್ಲಿಯು ಸಿಗದ EXCLUSIVE PHOTO ಇಲ್ಲಿದೆ ನೋಡಿ! ಇನ್ಮುಂದೆ ತೀರ್ಥಹಳ್ಳಿಯಲ್ಲಿ ಏನಾಗುತ್ತೆ?
thirthahalli, shajeeb, mateen,

Shivamogga  Apr 13, 2024  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಸೊಪ್ಪುಗುಡ್ಡೆ ಹಾಗೀ ಮಜೀದ್‌ ರಸ್ತೆಯ ನಿವಾಸಿಗಳಾದ ಮಸಾವಿರ್‌ ಹುಸೇನ್‌ ಶಾಜೀಬ್‌ ಹಾಗೂ ಅಬ್ದುಲ್‌ ಮತೀನ್‌ ತಾಹ ಇವರನ್ನ ಎನ್‌ಐಎ  ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ್‌ ವಿಭಾಗದಲ್ಲಿ ಅರೆಸ್ಟ್‌ ಮಾಡಿತ್ತು. ಮೊನ್ನೆ ರಾತ್ರಿ ನಡೆದ ಸೀಕ್ರೆಟ್‌ ಕಾರ್ಯಾಚರಣೆಯಲ್ಲಿ  ಸ್ಥಳೀಯ ವ್ಯಾಪಾರಿಗಳಂತೆ ಲಾಡ್ಜ್‌ವೊಂದನ್ನ ಕವರ್‌ ಮಾಡಿದ್ದ ಅಧಿಕಾರಿಗಳು  ಯೆಸ್‌, ಕನಫರ್ಮ್‌ ದೀಘಾ ಪ್ರದೇಶದ ಲಾಡ್ಜ್‌ನ ಕೋಣೆಯಲ್ಲಿ ಇರುವುದು ಮತೀನ್‌ ಹಾಗೂ ಶಾಜೀಬ್‌ ಎಂದು ಖಾತರಿಗೊಳಿಸಿದ್ದಾರೆ. ಜೊತೆಯಲ್ಲಿಯೇ ಅವರ ಚಲನವಲನದ ಬಗ್ಗೆ ವಾಚ್‌ ಮಾಡಿದ್ದಾರೆ. 

ಗುಪ್ತದಳದ ಅಧಿಕಾರಿಗಳು ಐಟೆಂಡೆಟಿ ಖಾತರಿ ಗೊಳಿಸುತ್ತಿದ್ದಂತೆ ಪೊಲೀಸ್‌ ಇಲಾಖೆಯ ಹೈಪ್ರೊಫೈಲ್‌ ಆಫೀಸರ್‌ಗಳ ತಂಡ ಲಾಡ್ಜ್‌ನ ಕೋಣೆಯನ್ನ ವೆಪನ್‌ಗಳ ಸಮೇತ ಸುತ್ತುವರಿದು, ಇಬ್ಬರು ಶಂಕಿತರಿಗೆ ವಾರ್ನ್‌ ಮಾಡಿ ತಮ್ಮ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ನಿನ್ನೆ ಮಲೆನಾಡು ಟುಡೆ ರಾಷ್ಟ್ರೀಯ ಮಾಧ್ಯಮ ವರದಿಗಾರಿಕಾ ಮೂಲಗಳಿಂದ ಸುದ್ದಿ ಪಡೆದು ಮೊದಲು ವರದಿ ಪ್ರಸಾರ ಮಾಡಿತ್ತು. ಇದೀಗ ಮಲೆನಾಡು ಟುಡೆಗೆ ತೀರ್ಥಹಳ್ಳಿಯ ಶಾಜೀಬ್‌ ಹಾಗೂ ಮತೀನ್‌ ತಾಹರ ನಿನ್ನೆಯ ಫೋಟೋಗಳು ಎಕ್ಸ್‌ಕ್ಲ್ಯೂಸಿವ್‌ ಆಗಿ ಲಭ್ಯವಾಗಿದೆ. 

ಎನ್‌ಐಎ ಆರೋಪಿಗಳನ್ನ ಅರೆಸ್ಟ್‌ ಮಾಡಿದ ಬೆನ್ನಲ್ಲೆ ಅವರ ಗುರುತು ಚಹರೆಯನ್ನು ವಿವಿಧ ಸ್ಟೇಟ್‌ಗಳ ಪೊಲೀಸ್‌ ಇಲಾಖೆಗೆ ಕಳುಹಿಸಲಾಗಿದೆ. ಎಲ್ಲಾ ಕಡೆಯಿಂದಲೂ ಕನ್‌ಫರ್ಮ್‌ ಮಾಡಿಕೊಂಡ ಅಧಿಕಾರಿಗಳು ನಿನ್ನೆ ಕೋಲ್ಕತ್ತಾದಲ್ಲಿರುವ ಸ್ಥಳೀಯ ನ್ಯಾಯಾಲಯಕ್ಕೆ ಆರೋಪಿಗಳನ್ನ ಹಾಜರು ಪಡಿಸಿದೆ. ಕೋರ್ಟ್‌ ಆರೋಪಿಗಳನ್ನ ಮೂರುದಿನಗಳ ಕಸ್ಟಡಿಗೆ ನೀಡಿದೆ. ಇವತ್ತು ಆರೋಪಿಗಳನ್ನ ಬೆಂಗಳೂರಿಗೆ ಕರೆತರುವ ಸಾಧ್ಯತೆ ಇದೆ. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ), ಕೇಂದ್ರೀಯ ಗುಪ್ತಚರ ದಳ, ಪಶ್ಚಿದು ಬಂಗಾಳ, ತೆಲಂಗಾಣ, ಕರ್ನಾಟಕ ಮತ್ತು ಕೇರಳ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಎನ್‌ಐಎ ತಿಳಿಸಿದೆ.  

ಇನ್ನೂ ರಾಮೇಶ್ವರಂ ಕಫೆ ಬ್ಲಾಸ್ಟ್‌ ಪ್ರಕರಣದಲ್ಲಿ ಸ್ಫೋಟಕ ಇಟ್ಟು ಸಿಡಿಸಿದ ಆರೋಪಿ ಶಾಜೀದ್‌ ಬಂಧನ ಬಿಗ್‌ ಬ್ರೇಕ್‌ ಥ್ರೂ ಆದರೂ ಸಹ 2005 ರಿಂದ ನಾಪತ್ತೆಯಾಗಿದ್ದ ಅಬ್ದುಲ್‌ ಮತೀನ್‌ ತಾಹನ ಅರೆಸ್ಟ್‌ ಎನ್‌ಐಎ ನ ದೊಡ್ಡ ಸಾಧನೆಯಾಗಿದೆ. ಏಕೆಂದರೆ ಈತ ಶಿವಮೊಗ್ಗ ಐಸಿಸ್‌ ಮಾಡ್ಯುಲ್‌ನ ರೂವಾರಿ. ತೀರ್ಥಹಳ್ಳಿ ಕೇಳಿಬರುತ್ತಿದ್ದ ಸ್ಯಾಟಲೈಟ್‌ ಫೋನ್‌ ಸಂಭಾಷಣೆಯ ವಿಚಾರದಿಂದ ಹಿಡಿದು, ತೀರ್ಥಹಳ್ಳಿಯ ಅಮಾಯಕ ಹುಡುಗರನ್ನ ಮತೀಯ ಶಂಕೀತರನ್ನಾಗಿಸ್ತಿದ್ದ ಆರೋಪ ಮತೀನ್‌ ಮೇಲಿದೆ. ಈತನ ಟೀಂನಲ್ಲಿಯೇ ಇದ್ದು ಕೊಂಡು ಮಾಜ್‌, ಯಾಸೀನ್‌, ಶಾರೀಖ್‌, ಮುಜಾಮಿಲ್‌, ಶಾಜೀಬ್‌ ಸೇರಿದಂತೆ ಹಲವರು ದುಷ್ಕೃತ್ಯಗಳನ್ನ ಎಸೆಗಿದ್ದರು. 

ದುರ್ಬಿನ್‌ನಲ್ಲಿ ತೀರ್ಥಹಳ್ಳಿ

ಇನ್ನೂ ಎನ್‌ಐಎನ ಈ ಮೇಜರ್‌ ಅರೆಸ್ಟ್‌ ತೀರ್ಥಹಳ್ಳಿಯ ಮೇಲೆ ಇನ್‌ವೆಸ್ಟಿಗೇಷನ್‌ ದುರ್ಬಿನ್‌ ಬಿಟ್ಟ ಹಾಗೆ ಆಗಿದೆ. ತೀರ್ಥಹಳ್ಳಿಯ ಶಂಕಿತರು ಎಂಬ ಪದ ತಾಲ್ಲೂಕಿನ ಜನರಿಗೆ ಬೇಸರ ಮೂಡಿಸಿದರೂ ಸಹ ಎನ್‌ಐಎ ಸದ್ಯದಲ್ಲಿಯೇ ತೀರ್ಥಹಳ್ಳಿಗೆ ಬರುವ ಸಾಧ್ಯತೆ ಇದೆ. ಮತೀನ್‌ ಹಾಗೂ ಶಾಜೀಬ್‌ನ ಕರೆದುಕೊಂಡು ತೀರ್ಥಹಳ್ಳಿಗೆ ಬರುವ ಸಾಧ್ಯತೆ ಇದ್ದು, ಮಹಜರ್‌ ಹಾಗೂ ಸಾಕ್ಷ್ಯ ಕಲೆಹಾಕಲಿದೆ ಎನ್ನಲಾಗುತ್ತಿದೆ. ಹೀಗಾಗಿ ತೀರ್ಥಹಳ್ಳಿ ರಾಷ್ಟ್ರೀಯ ಮಟ್ಟದಲ್ಲಿ ಸದ್ಯ ಹೈವೋಲ್ಟೇಜ್‌ ಪೇಟೆಯಾಗಿ ಕಾಣಿಸಿಕೊಳ್ತಿದೆ.