ಸೂಡಾನ್‌ ನಲ್ಲಿ ಸಂಕಷ್ಟದಲ್ಲಿದೆ ಶಿವಮೊಗ್ಗದ ಕುಟುಂಬ! ಸಹಾಯ ಮಾಡಿ ಎಂದು ಅಲವತ್ತುಕೊಳ್ತಿದ್ದಾರೆ ಮಹಿಳೆ

The family of Shimoga is in trouble in Sudan! The woman is asking for help

ಸೂಡಾನ್‌ ನಲ್ಲಿ ಸಂಕಷ್ಟದಲ್ಲಿದೆ ಶಿವಮೊಗ್ಗದ ಕುಟುಂಬ! ಸಹಾಯ ಮಾಡಿ ಎಂದು ಅಲವತ್ತುಕೊಳ್ತಿದ್ದಾರೆ ಮಹಿಳೆ
Sudan

Shivamogga  Apr 3, 2024   Sudan ಶಿವಮೊಗ್ಗದ ನಿವಾಸಿಯೊಬ್ಬರು ಸೂಡಾನ್‌ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ತಮ್ಮನ್ನ ಕಾಪಾಡಿ ಎಂದು ಮೊರೆಯಿಡುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ತಮ್ಮ ಮನೆಯವರಿಗೆ ಹುಷಾರಿಲ್ಲ. ಇದರಿಂದಾಗಿ ಖರ್ಚಿಗೂ ಹಣವಿಲ್ಲದಂತಾಗಿದೆ. ತಮ್ಮ ರಕ್ಷಿಸುವಂತೆ ವಿಡಿಯೋದಲ್ಲಿ ಮಹಿಳೆಯೊಬ್ಬರು ಮೊರೆ ಇಡುತ್ತಿದ್ಧಾರೆ. 

ಸರ್ ನಮಸ್ಕಾರ.. ನಾವು ನಮ್ಮ ದೇಶಬಿಟ್ಟು ಬೇರೆ ದೇಶಕ್ಕೆ ಬಂದು ಸಿಲುಕಿದ್ದೇವೆ. ಇಲ್ಲಿ ಮನೆಯವರಿಗೆ ತುಂಬಾನೇ ಹುಷಾರಿಲ್ಲದೇ ಆಸ್ಪತ್ರೆಗೆ ಸೇರಿಸಿದ್ದೇವೆ. ದುಡ್ಡೆಲ್ಲ ಖಾಲಿ ಮಾಡಿಕೊಂಡು ಖರ್ಚಿಗೂ ಹಣ ಇಲ್ಲದೆ ಬಹಳ ಕಷ್ಟದಲ್ಲಿ ಇದ್ದೇವೆ. ನಮ್ಮನ್ನು ಕಾಪಾಡಿ ಎಂದು ಶಿವಮೊಗ್ಗ ಮೂಲದ ಮಹಿಳೆಯೊಬ್ಬರು ವಿಡಿಯೋದಲ್ಲಿ ಗೋಳಿಡುತ್ತಿದ್ದಾರೆ. 

ಆಸ್ಪತ್ರೆಯೊಂದರಿಂದಲೇ ರೆಕಾರ್ಡ್‌ ಮಾಡಿರುವ ವಿಡಿಯೋ ಇದಾಗಿದ್ದು, ಮಹಿಳೆಯು ಶಿವಮೊಗ್ಗ ಜಿಲ್ಲೆಯ ಚಿಕ್ಕಮಟ್ಟಿ ಗ್ರಾಮದವರು ಎನ್ನಲಾಗಿದೆ.  ಎರಡು ತಿಂಗಳ ಹಿಂದೆ ಸೂಡಾನ್‌ಗೆ ಹೋಗಿದ್ದ ಕುಟುಂಬದಲ್ಲಿ ಮನೆಯವರಿಗೆ ಮಲೆರಿಯಾ ಜ್ವರ ನೆತ್ತಿಗೇರಿದ್ದು ಅನಾರೋಗ್ಯ ಪೀಡಿತರಾಗಿದ್ದಾರೆ. ಹೀಗಾಗಿ ಸಮಸ್ಯೆ ಅನುಭವಿಸುತ್ತಿದ್ದೇವೆ.  ಇಲ್ಲಿಂದ ಹೋಗುವುದಕ್ಕೆ ದಾರಿ ಇಲ್ಲದಾಗಿದೆ. ದಯವಿಟ್ಟು. ನಮಗೆ ಸಹಾಯ ಮಾಡಿ ಎಂದು ಮಹಿಳೆ ಕಣ್ಣೀರಿಡುತ್ತಿದ್ದಾಳೆ. ಈ ನಿಟ್ಟಿನಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ. 



TODAY ವಾಟ್ಸ್ಯಾಪ್​ ಚಾನಲ್​ ಫಾಲೋ ಮಾಡಿ! ಯಾವಾಗ ಬೇಕೋ ಆಗಲೇ  ಸುದ್ದಿ ಓದಿ,  ಲಿಂಕ್​ ಕ್ಲಿಕ್ ಮಾಡಿ

https://whatsapp.com/channel/0029Va9I91s3LdQVrdq7yl1h

ಇದನ್ನು ಓದಿ : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲೀಗ ಮಧು ಬಂಗಾರಪ್ಪನವರೇ ಸುಪ್ರೀಂ!  ಶೀಘ್ರದಲ್ಲಿಯೇ ಇನ್ನೊಂದು ಬದಲಾವಣೆ! ಏನದು ರಾಜಕಾರಣ