ಶಿವಮೊಗ್ಗದಲ್ಲಿಯೇ ಅಮಾನವೀಯ ಘಟನೆ! ತಾಯಿಯನ್ನೇ ಕೊಂದು, ತಲೆಗೆ ಕೈಕೊಟ್ಟು ಮಲಗಿದನೇ ಮಗ!

A woman in Bhadravathi was allegedly murdered by her son. ಭದ್ರಾವತಿಯಲ್ಲಿ ಮಹಿಳೆಯೊಬ್ಬರನ್ನು ಅವರ ಮಗನೇ ಕೊಲೆ ಮಾಡಿರುವ ಬಗ್ಗೆ ಆರೋಪವೊಂದು ಕೇಳಿಬಂದಿದೆ.

ಶಿವಮೊಗ್ಗದಲ್ಲಿಯೇ ಅಮಾನವೀಯ ಘಟನೆ! ತಾಯಿಯನ್ನೇ ಕೊಂದು, ತಲೆಗೆ ಕೈಕೊಟ್ಟು ಮಲಗಿದನೇ ಮಗ!

KARNATAKA NEWS/ ONLINE / Malenadu today/ Aug 29, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು (Bhadravati Taluk) ಮಾವಿನಕೆರೆ ಗ್ರಾಮದದಲ್ಲಿ ಮಹಿಳೆಯೊಬ್ಬರನ್ನ ಅವರ ಮಗನೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.ಕಳೆದ ಮೂರು ದಿನಗಳಿಂದ ಹೆತ್ತವರ ಶವಸಂಸ್ಕಾರಕ್ಕೆ ಬಾರದ ಮಕ್ಕಳು, ತಂದೆ ತಾಯಿಗೆ ವಿಷವುಣಿಸಿ ಸಾಯಿಸಿದ ಮಗ ಎಂಬ ವರದಿಯನ್ನು ಓದುತ್ತಿದ್ದೇವೆ. ಇದಕ್ಕೆ ಪೂರಕವಾಗಿ ಇನ್ನೊಂದು ವರದಿ ಭದ್ರಾವತಿಯಿಂದ ಬಂದಿದ್ದು, ಇಲ್ಲಿನ  ನಿವಾಸಿ ಸುಲೋಚನಮ್ಮ (60) ಎಂಬವರನ್ನು ಅವರ ಪುತ್ರನೇ ಕೊಂದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. 

ಏನಿದು ಘಟನೆ 

ಸುಲೋಚನಮ್ಮ ಎಂಬವರು ಪ್ರತಿದಿನ ಅಕ್ಕಪಕ್ಕದವರ ಜೊತೆಗೆ ಮಾತನಾಡುತ್ತಾ ಅವರಿವರು ಕೊಟ್ಟಿದ್ದನ್ನ ಪಡೆದು ಜೀವನ ಸಾಗಿಸುತ್ತಿದ್ದರು. ಇವರ ಮಗ ಸಂತೋಷ (40) ಕುಡುಕನಾಗಿದ್ದು, ಪ್ರತಿನಿತ್ಯ ಸಲ್ಲದ ಕಿರುಕುಳ ನೀಡುತ್ತಿದ್ದನಂತೆ. ಎಂದಿನಂತೆ ಕಾಣದ ಸುಲೋಚನಮ್ಮರವರ ಬಗ್ಗೆ ನಿನ್ನೆ ಅಕ್ಕಪಕ್ಕದವರು ವಿಚಾರಿಸಿದ್ಧಾರೆ. ಮನೆಗೆ ಬಂದು ಕಿಟಕಿಯಲ್ಲಿ ಇಣುಕಿದ್ಧಾರೆ. ಸುಲೋಚನಮ್ಮ ಮಲಗಿರುವುದು ಕಾಣಿಸಿದೆ, ಅನುಮಾನಗೊಂಡ ಸ್ಥಳೀಯರು ಸುತ್ತಮುತ್ತಲಿನ ಜನರನ್ನ ಕರೆದು ಮನೆಯೊಳಗೆ ನೋಡಿದ್ದಾರೆ. ಆಗ ಬಡ ತಾಯಿಯ ಕೊಲೆಯಾಗಿರುವುದು ಕಂಡು ಬಂದಿದೆ. 

ಭಾನುವಾರ ರಾತ್ರಿಯೇ ಕೊಲೆ ಆಗಿರುವ ಸಾಧ್ಯತೆ ಇದ್ದು, ಸ್ಥಳೀಯರ ಪ್ರಕಾರ,  ಮಗನೇ ತಾಯಿಯ ಕೊಲೆ ಮಾಡಿರುವ ಸಾಧ್ಯತೆ ಇದೆ. ವಿಚಾರ ಗೊತ್ತಾಗುತ್ತಲೇ ಸಂತೋಷ್​ರನ್ನ ಅಲ್ಲಿದ್ದವರು ಹುಡುಕಾಡಿದ್ಧಾರೆ. ಸಂತೋಷ್ ಕುಡಿದು ಗದ್ದೆ ಬಯಲಿನಲ್ಲಿ ಮಲಗಿರುವುದು ಗೊತ್ತಾಗಿದೆ. ಆನಂತರ ಆತನಿಗೆ ವಿಚಾರ ತಿಳಿಸಿದರೇ,  ರಾತ್ರಿ ನಾನು ಮನೆಗೆ ಬಂದಿಲ್ಲ, ಗದ್ದೆಯಲ್ಲೇ ಮಲಗಿದ್ದೆ ಎಂದು ವಾದ ಮಾಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ಧಾರೆ. 


ಇನ್ನಷ್ಟು ಸುದ್ದಿಗಳು